ಬಾಶೆಟ್ಟಿಹಳ್ಳಿ ಒರಿಸ್ಸಾ ಯುವಕನ ಕೊಲೆ ಪ್ರಕರಣ: ದಕ್ಷ ಪೊಲೀಸ್ ಅಧಿಕಾರಿಯಿಂದ ನಿರಪರಾಧಿಗೆ ಸಿಕ್ತು ಮರುಜೀವ: ಹಾಗಾದರೆ ಕೊಲೆ ಮಾಡಿದ್ಯಾರು….? ಆರೋಪಿಗಳ ಜಾಡು ಹಿಡಿದಿದ್ದು ಹೇಗೆ…? ಯಾವ ಕಾರಣಕ್ಕೆ ಕೊಲೆ ಆಯ್ತು…? ಇಲ್ಲಿದೆ ಇಂಚಿಂಚು ಮಾಹಿತಿ

ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದು ನ್ಯಾಯಾಂಗದ ನೀತಿ. ಅಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದು ಇದರರ್ಥವಲ್ಲ, ಯಾವ ತಪ್ಪೂ ಮಾಡದ ನಿರಪರಾಧಿಗೆ ಅನ್ಯಾಯವಾಗಿ ಶಿಕ್ಷೆಯಾಗಬಾರದು ಎನ್ನುವುದೇ ಇದರ ಆಶಯ. ಅದರಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಸಾದಿಕ್ ಪಾಷಾ ಹಾಗೂ ಅವರ ನೇತೃತ್ವದ ಪೊಲೀಸರ ತಂಡದ ಪ್ರಾಮಾಣಿಕತೆ,  ಸಮಯಪ್ರಜ್ಞೆ, ದಕ್ಷತೆ, ಸೂಕ್ತ ವಿಚಾರಣೆ, ಇನ್ ಡೆಪ್ತ್ ತನಿಖೆಯಿಂದ ಕೊಲೆ ಪ್ರಕರಣದಲ್ಲಿ ಒಬ್ಬ ನಿರಪರಾಧಿಗೆ ಶಿಕ್ಷೆಯಾಗದಂತೆ ನೋಡಿಕೊಂಡಿರುವುದು ಅತ್ಯಂತ ಪ್ರಶಂಸನೀಯವಾದದ್ದು. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ….

ಯೆಸ್….. ಎಲ್ಲರೂ 2025ಕ್ಕೆ ಗುಡ್ ಬೈ ಹೇಳಿ 2026ರನ್ನು ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧರಿದ್ದರು. ಅದರಂತೆ  ಹೊಟ್ಟೆಪಾಡಿಗಾಗಿ ಒರಿಸ್ಸಾದಿಂದ ದೊಡ್ಡಬಳ್ಳಾರಕ್ಕೆ ಬಂದು ಬಾಶೆಟ್ಟಿಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡು 10-15ಸಾವಿರ ಸಂಬಳ ಪಡೆದುಕೊಂಡು ಆರಾಮಾಗಿದ್ದ ಓರ್ವ ಕಾರ್ಮಿಕ ಹೊಸ ವರ್ಷ ದಿನದಂದೇ ಬೀದಿ ಹೆಣವಾಗಿದ್ದ….

ಹೊಸ ವರ್ಷದಿನದಂದು ಬಾಶೆಟ್ಟಿಹಳ್ಳಿಯ ಅಜಾಕ್ಸ್ ಶಾಲೆಯ ಹಿಂಭಾಗ ಯುವಕನ ಶವ ಪತ್ತೆಯಾಗಿತ್ತು. ಶವವನ್ನು ಕಂಡ ಜನರು ಹಾಗೂ ಪೊಲೀಸರು ಮೊದಲಿಗೆ ಆಕಸ್ಮಿಕ ಸಾವು ಅಂದುಕೊಂಡಿದ್ದರು. ನಂತರ, ಬಲಗೈಯಲ್ಲಿ ರಕ್ತದ ಗಾಯಗಳು, ತಲೆಗೆ ಪೆಟ್ಟು ಬಿದ್ದಿದ್ದರಿಂದ ನ್ಯೂ ಇಯರ್ ಪಾರ್ಟಿ ಮಾಡಿ ನಶೆಯಲ್ಲಿ ಮಹಡಿಯಿಂದ ಆಯಾತಪ್ಪಿ ಬಿದ್ದು ಸಾವನ್ನಪ್ಪಿರಬಹುದು ಎಂದು ತಿಳಿಯಲಾಗಿತ್ತು. ತದನಂತರ ಪೊಲೀಸರು ಸುತ್ತಾಮುತ್ತಾ ಪರಿಶೀಲನೆ ನಡೆಸಿದ್ದಾರೆ. ಮೃತನು ಪಾರ್ಟಿ ಮಾಡಿರುವ ಮನೆಯನ್ನು ಪರಿಶೀಲಿಸಿದಾಗ ಅಲ್ಲಲ್ಲಿ ಮನೆಯಲ್ಲಿ ರಕ್ತದ ಕಲೆಗಳು, ಗೋಡೆಗಳ ಮೇಲೆ ರಕ್ತದ ಗುರುತು ಪತ್ತೆಯಾಗಿತ್ತದೆ. ಆಗ ಮೃತನ ಸಂಬಂಧಿಕರನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ನಿಖಿಲ್‌ ಮತ್ತು ಮೃತನು ಒಟ್ಟಿಗೆ ನ್ಯೂ ಇಯರ್ ಪಾರ್ಟಿ ಮಾಡಿದ್ದರು. ನಿಖಿಲನೆ ಕೊಲೆ ಮಾಡಿರಬಹುದು ಶಂಕಿಸಿ ಪೊಲೀಸರಿಗೆ ತಿಳಿಸುತ್ತಾರೆ..

ಆಗ ಜ.1ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿಖಿಲ್ ವಿರುದ್ಧ ಪ್ರಕರಣ ದಾಖಲಾಗುತ್ತದೆ…

ದೂರು ದಾಖಲಿಸಿಕೊಂಡ ಪೊಲೀಸರು ನಿಖಿಲ್ ಗಾಗಿ ಹುಡುಕಾಟ ನಡೆಸುತ್ತಾರೆ. ಆದರೆ, ನಿಖಿಲ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಟ್ರೈನ್ ಹತ್ತಿ ಒರಿಸ್ಸಾ ಕಡೆ ಹೋಗುತ್ತಿರುತ್ತಾನೆ. ಆಗ ಪೊಲೀಸರು ಆತನ ಬೆನ್ನತ್ತಿ ಕೊನೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಗೊತ್ತಾಗುತ್ತದೆ ಸುಮಂತ್ ಸಾವಿಗೆ ಕಾರಣ ನಿಖಲ್ ಅಲ್ಲ ಅನ್ನೊದು….

ಮತ್ತ್ಯಾರು ಸುಮಂತ್ ಕೊಲೆಗೆ(ಸಾವಿಗೆ) ಕಾರಣ…? ಸುಮಂತ್ ಕೊಲೆಗೆ ಪ್ರತ್ಯಕ್ಷದರ್ಶಿ ಯಾರು….? ಆತ ಹೇಳಿದ್ದೇನು….?

ಹೌದು….. ಸುಮಂತ್ ಕೊಲೆಯಾದ ಸಂದರ್ಭದಲ್ಲಿ ನಿಖಿಲ್ ಇದ್ದನು…. ಹಾಗಾದರೆ ಸುಮಂತ್ ನನ್ನು ಕೊಲೆ ಮಾಡಿದ್ದು ಯಾರು…? ಹೊಸ ವರ್ಷ ಹಿನ್ನೆಲೆ ಕುಡಿದು ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ನಿಖಿಲ್ ಪ್ಲಾನ್ ಮಾಡುತ್ತಾನೆ. ಅದರ ಹಿಂದಿನ ದಿನ ಅಂದರೆ 2025ರ ಡಿಸೆಂಬರ್ 31 ರಾತ್ರಿ ತನ್ನ ಪಾಡಿಗೆ ತಾನು ತನ್ನ ಬಾವನ ರೂಮಿನಲ್ಲಿದ್ದ ಮೃತ ಸುಮಂತನಿಗೆ ನಿಖಿಲ್ ಫೋನ್ ಮಾಡಿ ನಾಳೆ ಹೊಸ ವರ್ಷ ಇದೆ, ಇವತ್ತು ರೂಮಿನಲ್ಲಿ ರಾತ್ರಿಯೆಲ್ಲಾ ಎಣ್ಣೆ ಪಾರ್ಟಿ ಮಾಡೋಣ ಬಾ ಎಂದು  ಕರೆಸಿಕೊಂಡು ಕಂಠಪೂರ್ತಿ ಕುಡಿಯುತ್ತಾ ಎಂಜಾಯ್ ಮಾಡುತ್ತಾರೆ..

ಹೊಸ ವರ್ಷಕ್ಕೆ ಕ್ಷಣಗಣನೆ ಇದ್ದಾಗ ಕುಡಿದ ಮತ್ತಿನಲ್ಲಿ ನಿಖಿಲ್ ಮತ್ತು ಸುಮಂತ್ ರೂಮಿನಿಂದ ಹೊರಬರುತ್ತಾರೆ… ಹೊರಬಂದು ಇಬ್ಬರು ಮಾತನಾಡುತ್ತಾ ಕಾಲ‌ಕಳೆಯುತ್ತಿರುತ್ತಾರೆ…. ಆಗ ಇವರ ಬಳಿ ಕುಡಿದ ಮತ್ತಿನಲ್ಲಿ ಸ್ಥಳೀಯರಾದ ನಾಲ್ಕು ಮಂದಿ ಯುವಕರು ಬಂದು ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೇಳುತ್ತಾರೆ.. ಆಗ ಇವರು ನಮ್ಮ ಬಳಿ ಇಲ್ಲ ಅನ್ನುತ್ತಾರೆ. ಹೀಗೆ ಬೆಂಕಿಪೊಟ್ಟಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಗಳ ಶುರುವಾಗುತ್ತದೆ.‌ ಕೈ ಕೈ ಮಿಲಾಸುವಾಗ ಸುಮಂತ್ ಬಲಗೈಗೆ ಎ1 ಆರೋಪಿ ಉಜ್ವಲ್ ಪ್ರಸಾದ್ ಬಿ.ಎಸ್ (29) ಚಾಕುವಿನಿಂದ ಚುಚ್ಚುತ್ತಾನೆ. ಎ2 ಆರೋಪಿ‌ ಪ್ರಿನ್ಸ್(24) ಕಲ್ಲಿನಿಂದ ತಲೆಯ ಬಲಭಾಗಕ್ಕೆ ಹೊಡೆಯುತ್ತಾನೆ. ಎ3  ಸೂರಜ್ ರಾಮ್( 23) ಜೆ1 (ಅಪ್ರಾಪ್ತ) ಮೂಗು ಕಣ್ಣಿಗೆ ಹೊಡೆಯುತ್ತಾರೆ.

ಹೀಗೆ ನಾಲ್ಕು ಜನ ಸೇರಿಕೊಂಡು ಸುಮಂತ್ ನನ್ನು ಹಿಗ್ಗಾಮುಗ್ಗ ಥಳಿಸುತ್ತಾರೆ. ಸುಮಂತ್ ನನ್ನ ಹೊಡೆಯುವಾಗ ನಿಖಿಲ್ ಬಿಡಿಸಲು ಯತ್ನಿಸುತ್ತಾನೆ. ಆವಾಗ ನಿಖಿಲ್ ಗೂ ಏಟು ಬೀಳುತ್ತವೆ. ಇವರ ವಧೆಗಳಿಗೆ ತಾಳಲಾರದೇ ಪ್ರಾಣ ಉಳಿಸಿಕೊಳ್ಳಲು ಸುಮಂತ್ ಮಹಡಿ ಮೇಲೆಕ್ಕೆ ಓಡಿಹೋಗಿ ನೀರಿನ. ಟ್ಯಾಂಕ್ ಬಳಿ ಅಡಗಿ ಬಚ್ಚಿಟ್ಟುಕೊಳ್ಳುತ್ತಾನೆ… ಆದರೂ ಸುಮಂತ್ ನನ್ನು ಬೆಂಬಿಡದ ಕಿರಾತಕರು ಮಹಡಿ‌ ಮೇಲಕ್ಕೆ ಬಂದು ಸುಮಂತ್ ನನ್ನು ಹಿಡಿದು ಮೇಲಿಂದ ಕೆಳಕ್ಕೆ ದಬ್ಬುತ್ತಾರೆ. ಆಗ ಸುಮಂತ್ ಕೆಳಗೆ ಬಿದ್ದ ತಕ್ಷಣ ವಿಲವಿಲ ಒದ್ದಾಡಿ ಪ್ರಾಣಬಿಡುತ್ತಾನೆ…..

ಸುಮಂತ್ ಸತ್ತಿರುವುದನ್ನು ಖಚಿತಪಡಿಸಿಕೊಂಡ ಈ ನಾಲ್ಕು ಮಂದಿ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗುತ್ತಾರೆ… ಮಾರನೇ ದಿನ ಆರೋಪಿಗಳು ದಾಬಸ್ ಪೇಟೆಯಲ್ಲಿ ತಲೆಮರಿಸಿಕೊಳ್ಳುತ್ತಾರೆ…

ನಿಖಿಲ್ ಫುಲ್ ಢರ್ ಆಗಿ ರಾತ್ರಿ ಅಲ್ಲೇ ಮಲಗಿ ಬೆಳಗ್ಗೆ ತನ್ನ ಮತ್ತೊಬ್ಬ ಫ್ರೆಂಡ್ ನೈಟ್ ಶಿಫ್ಟ್ ಮುಗಿಸಿಕೊಂಡು ಬರುವವರೆಗೆ ಇದ್ದು, ರಾತ್ರಿ ಗಲಾಟೆ ಆಗಿದೆ. ಗಲಾಟೆಯಲ್ಲಿ ನನಗೆ ಗಾಯವಾಗಿದೆ. ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಪ್ರಾಣ ಉಳಿಸಿಕೊಳ್ಳಲು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಒರಿಸ್ಸಾಗೆ ಟ್ರೈನ್ ಹತ್ತುತ್ತಾನೆ…..

ನೈಟ್ ಶಿಫ್ಟ್ ಮುಗಿಸಿಕೊಂಡು ಬಂದ ನಿಖಿಲ್ ಸ್ನೇಹಿತನಿಗೆ ಸುಮಂತ್ ಶವದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಆಗ ಸುಮಂತ್ ಬಾವನಿಗೆ ಮಾಹಿತಿ‌ ತಿಳಿಸುತ್ತಾನೆ… ಹೀಗೆ ಪೊಲೀಸರಗೂ ಮಾಹಿತಿ ಹೋಗುತ್ತದೆ…. ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಎಂ.ವಿ, ಎಎಸ್ ಪಿ ವೆಂಕಟೇಶ್ ಪ್ರಸನ್ನ, ನಾಗರಾಜು, ಡಿವೈಎಸ್ಪಿ ಪಾಂಡುರಂಗ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.

ಸ್ನೇಹಿತನೇ ಕೊಲೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗುತ್ತದೆ.

ಸದ್ಯ ಸುಮಂತ್ ಜೊತೆ ಎಣ್ಣೆ ಪಾರ್ಟಿ ಮಾಡಿದ್ದ ನಿಖಿಲ್ ಎಸ್ಕೇಪ್ ಆಗಿದ್ದು, ಆತನೇ ಸುಮಂತ್ ನನ್ನು ಕೊಲೆ ಮಾಡಿರಬಹುದು ಎಂದು ಮೃತನ ಸಂಬಂಧಿಕರು ಶಂಕಿಸಿ ದೂರು ನೀಡುತ್ತಾರೆ……

ಆದರೆ, ಇನ್ ಸ್ಪೆಕ್ಟರ್ ಸಾದಿಕ್ ಪಾಷ ಅವರ ನೇತೃತ್ವದ ಸುನೀಲ್ ಭಾಸಗಿ, ಸಚಿನ್, ಪ್ರವೀಣ್, ಫೈರೋಜ್, ನಾರಾಯಣಸ್ವಾಮಿ, ಗಣಪತಿ ಪೊಲೀಸ್ ಸಿಬ್ಬಂದಿಯು ಕೊಲೆ ಬಗ್ಗೆ ಸಿಸಿಟಿವಿ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಇಂಚಿಂಚು ಮಾಹಿತಿ ಕಲೆ ಹಾಕುವವ ವೇಳೆ ನಿಖಿಲ್ ನಿರಪರಾಧಿ ಎಂದು ತಿಳಿದುಬಂದಿದೆ.. ಕೊಲೆಗೆ ಪ್ರಮುಖ ಆರೋಪಿಗಳಾದ ನಾಲ್ಕು ಜನ ಒಟ್ಟಿಗೆ ಸೇರಿ ಕ್ಷುಲ್ಲಕ ಕಾರಣಕ್ಕೆ ಸುಮಂತ್ ನನ್ನು ಕೊಲೆ ಮಾಡಿರುವುದಾಗಿ ಖಾತ್ರಿಯಾಗುತ್ತದೆ. ನಂತರ ನಿಜವಾಗಿ ಸುಮಂತ್ ನನ್ನು ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿ ಜೈಲಿಗಟ್ಟಿದ್ದಾರೆ…

ತಪ್ಪೇ ಮಾಡದ ನಿಖಿಲ್ ಜೈಲು ಪಾಲಾಗುವುದನ್ನು ತಪ್ಪಿಸಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ…

ಎ1 ಉಜ್ವಲ್ ಪ್ರಸಾದ್ ಬಿ.ಎಸ್ (29), ಎ2 ಪ್ರಿನ್ಸ್(24), ಎ3 ಸೂರಜ್ ರಾಮ್( 23) ಒಬ್ಬ ಅಪ್ರಾಪ್ತ ಬಂಧಿತ ಆರೋಪಿಗಳು…

ಎ2 ಪ್ರಿನ್ಸ್(24) ಮತ್ತು ಅಪ್ರಾಪ್ತ ಇಬ್ಬರು ಸಹೋದರರು.‌

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…..

Ramesh Babu

Journalist

Recent Posts

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ವೈದ್ಯ, ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

13 hours ago

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಇತರೆ ಸಾಧಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

14 hours ago

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ದರೋಡೆ ಪ್ರಕರಣ: ದಟ್ಟಾರಣ್ಯದ ಮೌನದಲ್ಲಿ ಅಡಗಿದ್ದ ಭೀಕರ ರಹಸ್ಯ..ಬೆಚ್ಚಿಬೀಳಿಸುವ ಪ್ರಮುಖ ಅಂಶಗಳು…ಇಲ್ಲಿವೆ ಓದಿ…

ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್‌ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…

23 hours ago

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ 8 ಮಂದಿಯು ಈ ನಾಗರಿಕ ಗೌರವಕ್ಕೆ ಭಾಜನ

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…

1 day ago

ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…

2 days ago

ರಘುನಾಥಪುರ ಬಳಿ ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…

2 days ago