ಬಾಬಾ ಸಾಹೇಬ್ ಅಂಬೇಡ್ಕರ್ ಹಾದಿಯಲ್ಲಿ ನಾವು ಸಾಗಬೇಕು- ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ

ಲೋಕಸೇವಾನಿರತ ಶ್ರೀ ಡಿ. ಕೊಂಗಾಡಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆ (ರಿ), ಶ್ರೀ ಕೊಂಗಾಡಿಯಪ್ಪ ಕಾನೂನು ಮಹಾವಿದ್ಯಾಲಯ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆಯನ್ನು ಏ.14ರ ಮಂಗಳವಾರದಂದು ಬೆಳಗ್ಗೆ 10ಕ್ಕೆ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಡಾ|| ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು.

ಶ್ರೀ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ (ರಿ)ಯ ಅಧ್ಯಕ್ಷರಾದ ಎ. ರಾಮಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅಧ್ಯಕ್ಷತೆ ವಹಿಸಿದ್ದರು..

ಈ ವೇಳೆ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಡಿ.ಎಂ.ರೇಣುಕಾಮೂರ್ತಿ ಮಾತನಾಡಿ, ಸಂವಿಧಾನ ರಚನಾ ಕಮಿಟಿಯಲ್ಲಿ ದೊಡ್ಡಬಳ್ಳಾಪುರದ  ಟಿ.ಎಸ್ ಸಿದ್ದಲಿಂಗಯ್ಯ ಅವರು ಭಾಗಿಯಾಗಿದ್ದರು. ಇದು ನಮಗೆ ಹೆಮ್ಮೆಯ ಸಂಗತಿ. ಅಂಬೇಡ್ಕರ್ ಅವರು ಸಾಧಕ ವ್ಯಕ್ತಿ. ತಾನು ಅನುಭವಿಸಿದ ಜೀವನದ ನೋವುಗಳನ್ನು ಯಾರೂ ಅನುಭವಿಸಬಾರದು ಎಂದು ಸಂವಿಧಾನವನ್ನು ರಚನೆ ಮಾಡಿದರು ಎಂದು ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಡಿ.ಎಂ.ರೇಣುಕಾಮೂರ್ತಿ ಹೇಳಿದರು.

ಅಂಬೇಡ್ಕರ್ ಖ್ಯಾತ ವಕೀಲರಾಗಿದ್ದವರು, ಅವರ ಹಾದಿಯಲ್ಲಿ ನಾವೆಲ್ಲಾ ನಡೆಯಬೇಕು. ಸಂವಿಧಾನ ನಮಗೆ ರಕ್ಷಣೆ ಕೊಡುತ್ತದೆ. ಸಂವಿಧಾನದಿಂದ ಇಡೀ ವ್ಯವಸ್ಥೆ ನಡೆಯುತ್ತದೆ. ಎಲ್ಲರಿಗೂ ಕಾನೂನು ಅರಿವು ಇರಬೇಕು ಎಂದರು..

ಶ್ರೀ ಕೊಂಗಾಡಿಯಪ್ಪ ಕಾನೂನು ಮಹಾ ವಿದ್ಯಾಲಯ ಪ್ರಾಂಶುಪಾಲರಾದ ಡಾ. ವೆಂಕಟೇಶ್ ರೆಡ್ಡಿ ಮಾತನಾಡಿ, ಇಂದು ದೇಶದಲ್ಲಿ ನಾವೆಲ್ಲಾ ಸ್ವಾತಂತ್ರ್ಯವಾಗಿ, ಸಂತೋಷವಾಗಿ ಜೀವನ ನಡೆಸುತ್ತಿದ್ದೇವೆ ಅಂದರೆ ಅದಕ್ಕೆ ಅಂಬೇಡ್ಕರ್ ಅವರೇ ಕಾರಣ. ಶಿಕ್ಷಣ, ಸಂಘಟನೆ, ಹೋರಾಟ ಮೂರು ತತ್ವಗಳನ್ನು ಪರಿಚಯಿಸಿದರು ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಮಹಾಬಲೇಶ್ವರ್ ಮಾತನಾಡಿ, ಗಾಂಧಿ, ನೆಹರು‌ ಲಾಲ್ ಪಾಲ್ ಬಾಲ್ ಮಧ್ಯೆ ಅಂಬೇಡ್ಕರ್ ಇದ್ದರು. ಪ್ರಸ್ತುತ ಮಹಾನ್ ನಾಯಕರನ್ನು ಜಾತಿಗೆ ಸೀಮಿತರನ್ನಾಗಿ ಮಾಡಿದ್ದಾರೆ. ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿ. ಈ ದೇಶ ಪಿಟಿಷನ್ ಸ್ವರ್ಗ. ಕೋರ್ಟ್ ಗಳು ತೀರ್ಮಾನ ಮಾಡುತ್ತವೆ ಹೊರೆತು ನ್ಯಾಯ ಕೊಡುವುದಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಎಂದು ಹೇಳಿದರು..

ಈ ವೇಳೆ ಶ್ರೀ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ (ರಿ)ಯ ಉಪಾಧ್ಯಕ್ಷ ಪಿ.ವಿ. ಶ್ರೀನಿವಾಸಮೂರ್ತಿ, ಗೌರವ ಕಾರ್ಯದರ್ಶಿ ಎಸ್. ಪ್ರಕಾಶ್, ಸಹ ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗಿಯಾಗಿದ್ದರು..

Leave a Reply

Your email address will not be published. Required fields are marked *

error: Content is protected !!