
ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಡಿ.ಕ್ರಾಸ್ ಉಪಕೇಂದ್ರ ವ್ಯಾಪ್ತಿಯ ಎಲ್ಲ ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳು ಹಾಗೂ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಬೆಸ್ಕಾಂ ದೊಡ್ಡಬಳ್ಳಾಪುರ ನಗರ ಉಪವಿಭಾಗ ಮನವಿ ಮಾಡಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಡಿ.ಕ್ರಾಸ್, ಮುತ್ಸಂದ್ರ, ಟಿ.ಬಿ. ಬಡಾವಣೆ, ಪ್ರಿಯದರ್ಶಿನಿ ಬಡಾವಣೆ, ರೋಜಿಪುರ, ಗಂಗಧರಪುರ, ವಿನಾಯಕನಗರ, ಸೋಮೇಶ್ವರ ಬಡಾವಣೆ, ಬಸವೇಶ್ವರನಗರ, ಮಾರುತಿನಗರ, ಕುಂಭಾರಪೇಟೆ, ದರ್ಜಿಪೇಟೆ, ಗಾಣಿಗರಪೇಟೆ, ವಡ್ಡರಪೇಟೆ, ದೇಶದಪೇಟೆ, ಸಿನಿಮಾ ರಸ್ತೆ, ಹಳೇ ಬಸ್ ನಿಲ್ದಾಣ, ಕಛೇರಿಪಾಳ್ಯ, ಇಸ್ಲಾಂಪುರ, ಕಲ್ಲುಪೇಟೆ, ತ್ಯಾಗರಾಜನಗರ, ದೇವರಾಜನಗರ, ಶಾಂತಿನಗರ, ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ತಳಗವಾರ, ಮಾದಗೊಂಡನಹಳ್ಳಿ, ಹಸನ್‌ಘಟ್ಟ, ಕೋಳುರು, ಕಂಟನಕುಂಟೆ, ಆಳ್ವಾಲಸಂದ್ರ, ಅಂತರಹಳ್ಳಿ, ಗೊಲ್ಲಹಳ್ಳಿ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್.ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹೀರೆಗುಡ್ಡದಹಳ್ಳಿ, ಕುರುವಿಗೆರೆ, ನಂದಿಮೋರಿ, ರಾಜಘಟ್ಟ, ಕಂಚಿಗನಾಳ, ದಾಸಗೊಂಡನಹಳ್ಳಿ, ಗಂಡರಾಜಪುರ, ಅಂಚರಹಳ್ಳಿ, ಬೀಡಿಕೆರೆ, ಹಮಾಮ್, ಶಿವಪುರ, ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ, ಕೊನಘಟ್ಟ, ಲಿಂಗನಹಳ್ಳಿ, ಕಮಲೂರು, ನೆಲ್ಲುಕುಂಟೆ, ನಾಗಶೆಟ್ಟಿಹಳ್ಳಿ, ಮಜರಾ ಹೊಸಹಳ್ಳಿ, ಶಿರವಾರ, ಮೆಣಸಿ, ಅಣಗಲಪುರ, ನೇರಳೆಘಟ್ಟ, ಹೊನ್ನಾಘಟ್ಟ, ಕೆಸ್ತೂರು, ಹಣಬೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಹಳ್ಳಿ, ಕಲ್ಲುದೇವನಹಳ್ಳಿ, ತಿಷ್ಟೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಸೂಚನೆ: ನಿರ್ವಹಣಾ ಕಾಮಗಾರಿ ಅವಧಿಯಲ್ಲಿ ರೈತರ ಐಪಿ (IP) ಮಾರ್ಗಗಳನ್ನು ಪರ್ಯಾಯ ಸಮಯದಲ್ಲಿ ಚಾಲನೆಗೊಳಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.