ಬಹುತ್ವ ಕರ್ನಾಟಕವನ್ನು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಪ್ರಜ್ಞೆಯ ಮೂಲಕ ಕಟ್ಟಬೇಕಾಗಿದೆ- ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ

ಬಹುತ್ವ ಕರ್ನಾಟಕವನ್ನು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಪ್ರಜ್ಞೆಯ ಮೂಲಕ ಕಟ್ಟಬೇಕಾಗಿದೆ. ಏಕರೂಪೀಕರಣದ ಆತಂಕದ ಪ್ರಸ್ತುತ ಈ ಕಾಲಘಟ್ಟದಲ್ಲಿ ಬಹುತ್ವದ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ತಿಳಿಸಿದರು.

ದೊಡ್ಡಬಳ್ಳಾಪುರ ನಗರದ ಆರ್.ಡಿ.ಕನ್ವೆನ್ಷನ್ ಹಾಲ್ ನಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬೆಂಗಳೂರಿನ ಆಕೃತಿ ಪುಸ್ತಕ ಇವರ ಸಹಯೋಗದಲ್ಲಿ ಬಹುತ್ವ ಕರ್ನಾಟಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ, ಪರಂಪರೆ ದೊರೆಯುವ ಬಹುತ್ವದ ಅರಿವನ್ನು ಶೋಧಿಸಬೇಕಾಗಿದೆ. ಬಹುತ್ವಕ್ಕಾಗಿ ನಾಗರಿಕ ಪ್ರಜ್ಞೆಯನ್ನು ಹೆಚ್ಚಿಸಬೇಕು. ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಹೇಳುವ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ ಇವುಗಳನ್ನು ಬಹುತ್ವದ ಮೌಲ್ಯವಾಗಿ ರೂಪಿಸಬೇಕು. ಶಾಲಾ ಕಾಲೇಜುಗಳು ಬಹುತ್ವ ಕಲಿಸುವ ತಾಣಗಳಾಗಬೇಕಾಗಿದೆ ಎಂದರು.

ಭಾರತವು ವೈವಿಧ್ಯಮಯತೆಯಿಂದ ಕೂಡಿದೆ. ವೈವಿಧ್ಯತೆಯೇ ಬಹುತ್ವವಲ್ಲ, ಸಮಾನ ಅವಕಾಶಗಳೇ ಬಹುತ್ವ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವ ಸಾಂಸ್ಕೃತಿಕ ರಾಜಕಾರಣ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಒಂದೇ ಸಂಸ್ಕೃತಿ, ನಾಯಕತ್ವ, ಧರ್ಮವನ್ನು ಹೇರುವುದು ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ಪ್ರಜಾಭುತ್ವ ನಾಶವಾಗುತ್ತದೆ. ಭಾರತದ ಆರ್ಥಿಕ ಹಿಡಿತ ಶೇ.10 ಜನರಲ್ಲಿದೆ ಎಂಬುದು ಅಸಮಾನತೆಯನ್ನು ತೋರಿಸುತ್ತದೆ. ಹಲವು ಭಾಷೆ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ ಹೊಂದಿರುವ ಭಾರತಕ್ಕೆ ಬಹುತ್ವ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದರು.

ಸಾಹಿತಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಮಾತನಾಡಿ, ಬಹುತ್ವದಲ್ಲಿ ವೈಜ್ಞಾನಿಕ ಸತ್ಯವು ಅಡಗಿದೆ. ಮನುಷ್ಯಪರವಾದ ಬಹುತ್ವ ಉಳಿದರೆ ಮನುಷ್ಯ ಉಳಿಯುತ್ತಾನೆ. ಕೋಮುವಾದ ಮತ್ತು ಮತೀಯವಾದದ ಸಂಘರ್ಷಕ್ಕೆ ಅನುಮಾನ ಕಾರಣವಾಗುತ್ತದೆ. ಅನುಮಾನ ದ್ವೇಷವಾಗಿ, ಹಿಂಸೆ ರೂಪತಾಳಿ ವಿನಾಶದ ಕಡೆಗೆ ದೂಡುತ್ತದೆ. ಕೋಮು ಸೌಹಾರ್ದತೆಗೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬಹುತ್ವದ ಅಗತ್ಯವಿದೆ ಎಂದರು.

ವಿಮರ್ಶಕ ಡಾ.ಕಂಟನುಕುಂಟೆ ರಂಗನಾಥ ಮಾತನಾಡಿ, ಪ್ರಭುತ್ವ ಮತ್ತು ಜನತೆ ಎರಡು ಕಡೆಯಿಂದಲೂ ಬಹುತ್ವ ಸಾಧಿಸಬೇಕಾಗಿದೆ. ಪ್ರಜಾಪ್ರಭುತ್ವ ಆಶಯದೊಂದಿಗೆ ಬಹುತ್ವ ಒಂದಾಗಬೇಕು. ಬಹುತ್ವವನ್ನು ಜೀವನ ಕ್ರಮದ ಪ್ರಕ್ರಿಯೆ ಆಗಬೇಕು. ಬಹುತ್ವಕ್ಕಿರುವ ಅಪಾಯಗಳನ್ನು ಅರಿಯಬೇಕೆಂದರು.

ವಿಮರ್ಶಕ ಡಾ.ರವಿಕುಮಾರ್ ನೀಹ ಮಾತನಾಡಿ, ಯಾವುದೇ ಧರ್ಮದಲ್ಲಿ ಏಕರೂಪತೆ ತರಲು ಸಾಧ್ಯವಿಲ್ಲ. ಒಂದೇ ರೀತಿಯ ಊಟ, ಸಿದ್ಧಾಂತವನ್ನು ಹೇರುವುದು ಅಪಾಯಕಾರಿ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವುದು ಸರಿಯಲ್ಲ ಎಂದರು.

ಬಹುತ್ವ ಕರ್ನಾಟಕ ಪುಸ್ತಕದ ಲೇಖಕರಾದ ಡಾ.ರಹಮತ್ ತರೀಕೆರೆ ಅವರೊಂದಿಗೆ ನಡೆದ ಸಂವಾದದಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗದ ಡಾ.ಪ್ರಕಾಶ್ ಮಂಟೆದ, ಹೇಮಂತ್ ಲಿಂಗಪ್ಪ, ಉಪನ್ಯಾಸಕರುಗಳಾದ ವನಿತಾ, ಪ್ರಸನ್ನ ಲಕ್ಷ್ಮೀಪುರ, ಎಚ್.ಎನ್.ರೇಣುಕಾರಾಧ್ಯ, ಚಂದ್ರಶೇಖರ್ ದೊಡ್ಡಬಳ್ಳಾಪುರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Ramesh Babu

Journalist

Recent Posts

ಕುಡಿಯುವ ನೀರು ಸಮಸ್ಯೆಗೆ ಸಹಾಯವಾಣಿ ಆರಂಭ: ದೂರವಾಣಿ ಸಂಖ್ಯೆ ಇಲ್ಲಿದೆ ನೋಡಿ

ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸಾರ್ವಜನಿಕರು ಸಹಾಯವಾಣಿಗೆ…

15 minutes ago

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ-‌ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಕಲಾವತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಹೊಂದಿರುವುದು ಕಡ್ಡಾಯ…

25 minutes ago

ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27ನೇ ಸಾಲಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ(ಆಂಗ್ಲ ಮಾಧ್ಯಮ) ಸೇರ ಬಯಸುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆನ್ಲೈನ್…

3 hours ago

ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆ: ಮಾದಿಗ ಮಹಾಸಭಾ ವತಿಯಿಂದ ಬೈಕ್ ರ್ಯಾಲಿ, ಬಾಬಾ ಸಾಹೇಬರಿಗೆ ಮಾಲಾರ್ಪಣೆ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಾದಿಗ ಮಹಾಸಭಾ ವತಿಯಿಂದ…

4 hours ago

ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ: ಸ್ನೇಹಿತರ ಜೊತೆಯಲ್ಲಿ ದೇವಾಲಯಕ್ಕೆ ಹೊರಟಿದ್ದ ಯುವಕ ಸಾವು

ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸ್ನೇಹಿತರ ಜೊತೆಯಲ್ಲಿ ದೇವಾಲಯಕ್ಕೆ ಹೊರಟಿದ್ದ ಯುವಕ ಸಾವನ್ನಪ್ಪಿದ್ದಾನೆ. ಹನುಮಂತ (17) ಮೃತ…

6 hours ago

2100 ಎಕರೆ ಭೂ ಸ್ವಾಧೀನ ಕೈಬಿಡಬೇಕು- ತಪ್ಪು ಸರ್ವೇ ವರದಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಿಎಂಗೆ ಶಾಸಕ ಧೀರಜ್ ಮುನಿರಾಜ್ ಮನವಿ

ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ, ನಾರನಹಳ್ಳಿ ಗ್ರಾಮಗಳಲ್ಲಿ ಸುಮಾರು 2100 ಎಕರೆ ಕೃಷಿ ಭೂಮಿಯನ್ನು…

7 hours ago