ಬಲಿಗಾಗಿ ಕಾದಿವೆ 500ಕ್ಕೂ ಹೆಚ್ಚು ಗುಂಡಿಗಳು: ವಾಹನ ಸವಾರರೇ ಎಚ್ಚರ ರಸ್ತೆಗಿಳಿಯುವ ಮುನ್ನ..!

ನಗರದಲ್ಲಿ ವಾಹನ ಸವಾರರು ಸುಗಮವಾಗಿ ಸಂಚರಿಸಲು ಅಸಾಧ್ಯವಾಗಿದೆ. ಏಕೆಂದರೆ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿರುವ ಯಮರೂಪಿ ಗುಂಡಿಗಳು.

ಹಲವು ಕಡೆ ಕಳಪೆ ರಸ್ತೆ ಡಾಂಬರೀಕರಣ ಆಗಿರುವುದರಿಂದ ಗುಂಡಿಗಳು ಬಿದ್ದಿವೆ. ಅವೈಜ್ಞಾನಿಕ ಹಂಪ್, ಕೇಬಲ್ ಅಳವಡಿಕೆಗೆ ರಸ್ತೆ ಅಗೆತ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯದ ನೆಪದಲ್ಲಿ ರಸ್ತೆ ಅಗೆದು ಟಾರ್ ಹಾಕದೇ ಬಿಡಲಾಗಿದೆ. ಇವೆಲ್ಲದರ ನಡುವೆ ಮಳೆ ಪರಿಣಾಮ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಮಳೆ ಬಂದರೆ ಗುಂಡಿಗಳು ಕೆರೆಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದಾಗಿ ವಾಹನ ಸವಾರರು ಸುಗಮವಾಗಿ ಸಂಚರಿಸಲು ಆಗದೆ ಹಿಡಿಶಾಪ ಹಾಕುತ್ತಿದ್ದಾರೆ.

ಈಗಾಗಲೇ ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ನಗರದಲ್ಲಿ ಹಲವಾರು ಅಪಘಾತಗಳು ನಡೆದಿವೆ. ಇನ್ನು ಮಳೆಗಾಲ ಆರಂಭವಾಗುತ್ತಿದೆ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

ನಗರದ ರಸ್ತೆಗಳಲ್ಲಿ ಗುಂಡಿಗಳು ಇವೆ, ಇದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ, ಆನೇಕ‌ ಜ‌ನರು ಗಾಡಿಗಳನ್ನು ಗೊತ್ತಿಲ್ಲದೆ ಆಕಸ್ಮಿಕವಾಗಿ ಗುಂಡಿಗೆ ಇಳಿಸಿ ಕೈಕಾಲು ಮುರಿದುಕೊಂಡಿದ್ದಾರೆ. ಇಷ್ಟಾದರೂ ಸಂಬಂಧಿಸಿದ ಇಲಾಖೆ ಗುಂಡಿ ಮುಚ್ಚುವ ಕೆಲಸ‌ ಮಾಡುತ್ತಿಲ್ಲ. ಇಲಾಖೆಗಳು, ಜನಪತ್ರಿನಿಧಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತುಂಬಾ ತೊಂದರೆಗೊಳಗಾಗುತ್ತಿದ್ದಾರೆ ಎಂದು ನಗರದ ನಿವಾಸಿ ಕಾರ್ತಿಕ್ ಆಕ್ರೋಶ ವ್ಯಕ್ತಪಡಿಸಿದರು.

ಗುಂಡಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನ ಆಗಲಿಲ್ಲ, ಇದರಿಂದ ಬೇಸತ್ತು ಸಾರ್ವಜನಿಕರೇ ಕೆಲವು ಕಡೆ ಮಣ್ಣಿನಿಂದ ಗುಂಡಿ‌ ಮುಚ್ಚಿ ಓಡಾಡುತ್ತಿದ್ದಾರೆ ಎಂದರು.

ಒಟ್ಟಾರೆ ನಗರದ ರಸ್ತೆ ಗುಂಡಿಗಳಿಗೆ ಯಾವಾಗ ಮುಕ್ತಿ ಸಿಗಲಿದೆ, ಇನ್ನಾದರೂ ಗುಂಡಿ‌ ಮುಕ್ತ ನಗರ ಆಗುತ್ತಾ ಎಂದು ಕಾದು ನೋಡಬೇಕಿದೆ.

Ramesh Babu

Journalist

Recent Posts

ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳ ಸರಣಿ: ಜನರಲ್ಲಿ ಆತಂಕ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಮನೆಗಳ ಕಳ್ಳತನ ಹಾಗೂ ಬೈಕ್ ಕಳವು…

10 minutes ago

ರೈತರಿಗೆ ನೋವಾಗುವ ಯಾವುದೇ ತೀರ್ಮಾನ ಇಲ್ಲ; ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಶಾಶ್ವತ ಪರಿಹಾರ- ಸಚಿವ ಚಲುವರಾಯಸ್ವಾಮಿ

ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು…

4 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

6 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

6 hours ago

ಎಸ್ ಐ ಆರ್…..

ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…

13 hours ago

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

1 day ago