Categories: ರಾಜ್ಯ

ಕೇಂದ್ರದಲ್ಲೂ ಅಧಿಕಾರಕ್ಕೆ ಬಂದು ಗೊಬ್ಬರ ಬೆಲೆ ಕಡಿಮೆ ಮಾಡುತ್ತೇವೆ- ಸಿಎಂ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲೂ ಅಧಿಕಾರಕ್ಕೆ ಬರುತ್ತೆವೆ. ಅಧಿಕಾರಕ್ಕೆ ಬಂದ ತಕ್ಷಣ ರಸ ಗೊಬ್ಬರದ ಬೆಲೆ ಕಡಿಮೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಸಿಎಂ‌ ಸಿದ್ದರಾಮಯ್ಯ ಆಯೋಜಿಸಿದ್ದ ಕಾರ್ಯಕರ್ತರು, ಮುಖಂಡರಿಗೆ ಆಯೋಜಿಸಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಈ ಬಾರಿ ಮೋದಿ ಅವರು ಸೋಲುತ್ತಾರೆ ಎಂದು ಭವಿಷ್ಯ ನುಡಿದರು.

ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಕ್ಷಣ ಗೊಬ್ಬರದ ಬೆಲೆ, ಪೆಟ್ರೋಲ್, ಡೀಸೆಲ್‌, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಭರವಸೆ ಮಾತುಗಳ್ನಾಡಿದರು.

ರಾಜ್ಯ ಬಿಜೆಪಿಯಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ

ರಾಜ್ಯದ ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಬಿಜೆಪಿಯ ದುರಾಡಳಿತದಿಂದ ಜನ ಬದಲಾವಣೆ ಬಯಸಿದ್ದರು. ಆದ್ದರಿಂದ ಜಿಜೆಪಿಯನ್ನ ಸೋಲಿಸಿ ಕಾಂಗ್ರೆಸ್ ನ್ನ ಗೆಲ್ಲಿಸಿದ್ದಕ್ಕೆ ಧನ್ಯವಾದ ಎಂದರು.

ಇದು ನನ್ನ ಕೊನೆ ಚುನಾವಣೆ

ಮತ್ತೆ ನಾನು ಚುನಾವಣೆಗೆ ನಿಲ್ಲೋದಿಲ್ಲ, ವೇದಿಕೆ ಭಾಷಣದ ವೇಳೆ ಚುನಾವಣೆ ನಿವೃತ್ತಿ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ.

ನುಡಿದಂತೆ ನಡೆದಿದ್ದೇನೆ: ಕೊಟ್ಟ ಭರವಸೆ ಈಡೇರಿಸಿದ್ದೇನೆ

ಈ ಹಿಂದೆ 160 ಭರವಸೆಗಳನ್ನ ನೀಡಿದ್ದೆ, ಅದರಲ್ಲಿ 158 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ. ಆದರೆ ಬಿಜೆಪಿಯವರು ವಚನ ಭ್ರಷ್ಟರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ದೇವರಾಜು ಅರಸ್ 5 ವರ್ಷ ಸಂಪೂರ್ಣ ಆಡಳಿತ ನೀಡಿದ್ದರು. ಅವರ ಬಳಿಕ ಈ ನಿಮ್ಮ ಸಿದ್ದರಾಮಯ್ಯ ಮಾತ್ರ 5 ವರ್ಷ ಆಡಳಿತ ಮಾಡುತ್ತಿರುವುದು.

ಸಿಎಂ ಕುರ್ಚಿ ಸುಖದ ಸುಪ್ಪತ್ತಿಗೆ ಇರೋ ಕುರ್ಚಿ ಅಲ್ಲ ಜನ ಸೇವೆ ಮಾಡೋ ಕುರ್ಚಿ. 5 ಭರವಸೆ ಈಡೇರಿಸಿದರೆ ನಮಗೆ ಖರ್ಚಾಗುವಂತದ್ದು 59 ಸಾವಿರ ಕೋಟಿ. ಮೋದಿ ಹೇಳಿದ್ರು ಕಾಂಗ್ರೆಸ್ ಕೊಟ್ಟಿರೋ ಭರವಸೆ ಈಡೇರಿಸಲು ಸಾಧ್ಯವಿಲ್ಲ. ರಾಜ್ಯ ದಿವಾಳಿ ಆಗತ್ತೆ ಎಂದು ಹೇಳಿದ್ದರು. ಆದರೆ ನಾನು ಅವರಿಂದ ನಿರೀಕ್ಷೆ ಮಾಡಿದ್ದೆ ಕಾಂಗ್ರೆಸ್ ಕೊಟ್ಟ ಭರವಸೆಗಳು ಬಡವರಿಗೆ ಅನುಕೂಲ ಆಗುವಂತ ಭರವಸೆ ಎಂದು ಹೇಳ್ತಾರೆ ಅಂತ. ಆದರೆ ಅವರು ಹಾಗೆ ಹೇಳಲಿಲ್ಲ.

ನಾವು ಅಧಿಕಾರಕ್ಕೆ ಬಂದು 20 ದಿನ ಆಗಿದೆ. ಈ 20 ದಿನಗಳ 2 ಕ್ಯಾಬಿನೆಟ್ ಸಭೆ ನಡೆಸಿ 5 ಗ್ಯಾರಂಟಿ ಈಡೇರಿಸಲು ತೀರ್ಮಾನ ಮಾಡಿದ್ದೇವೆ.

ಒಂದು ವರ್ಷದ ಆವ್ರೇಜ್ ನೋಡಿ ಯಾರು ಎಷ್ಟು ಬಳಸುತ್ತಾರೆ ಅವರಿಗೆ ಉಚಿತ ವಿದ್ಯುತ್ ನೀಡ್ತಿದ್ದೀವಿ.

1 ಕೋಟಿ 28 ಲಕ್ಷ ಕುಟುಂಬದ ಮನೆ ಯಜಮಾನಿಗೆ 2 ಸಾವಿರ ಕೊಡುತ್ತೇವೆ. ಅತ್ತೆ ಯಜಮಾನಿ ಅಂದರೆ ಅತ್ತೆಗೆ, ಸೊಸೆ ಯಜಮಾನಿ ಅಂದರೆ ಸೊಸೆಗೆ ಹಣ ನೀಡುತ್ತೇವೆ. ಆದರೆ ಟ್ಯಾಕ್ಸ್ ಕಟ್ಟುವವರಿಗೆ ಹಣ ನೀಡಲ್ಲ. ಮಕ್ಕಳು ಟ್ಯಾಕ್ಸ್ ಕಟ್ತಿದ್ರೆ ಅದು ಲೆಕ್ಕಕ್ಕಿಲ್ಲ ಎಂದರು.

1ಕೋಟಿ 28 ಲಕ್ಷ ಯಜಮಾನರಿಗೆ ಅರ್ಜಿ ಕರೆದಿದ್ದೇವೆ. ಆಗಸ್ಟ್ ನಿಂದ ಅವರ ಖಾತೆಗೆ ಹಣ ಹಾಕುತ್ತೇವೆ. ಅಕ್ಕಿ ಸ್ಟಾಕ್ ಇಲ್ಲದ ಕಾರಣ ಜುಲೈನಿಂದ 10ಕೆಜಿ ಅಕ್ಕಿಯನ್ನ ವಿತರಣೆ ಮಾಡುತ್ತೇವೆ ಎಂದರು

Ramesh Babu

Journalist

Recent Posts

ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳ ಸರಣಿ: ಜನರಲ್ಲಿ ಆತಂಕ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಮನೆಗಳ ಕಳ್ಳತನ ಹಾಗೂ ಬೈಕ್ ಕಳವು…

2 hours ago

ರೈತರಿಗೆ ನೋವಾಗುವ ಯಾವುದೇ ತೀರ್ಮಾನ ಇಲ್ಲ; ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಶಾಶ್ವತ ಪರಿಹಾರ- ಸಚಿವ ಚಲುವರಾಯಸ್ವಾಮಿ

ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು…

6 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

7 hours ago

ಒಂದೇ ದಿನ ಪ್ರತ್ಯೇಕ ಘಟನೆ: ಮೂವರು ಬಜರಂಗದಳ ಕಾರ್ಯಕರ್ತರು ಸಾವು

ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…

8 hours ago