ಕೋಲಾರ: ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿನ ಸಾರ್ವಜನಿಕರ ಮಹತ್ವದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ ಇದರ ಹಿಂದಿರುವ ಹುನ್ನಾರವಾದರೂ ಏನು ಎಂಬುದನ್ನು ಸದನಕ್ಕೆ ತಿಳಿಸುವಂತೆ ವಿಧಾನ ಪರಿಷತ್ ಅಧಿವೇಶನದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಅವರು ಒತ್ತಾಯಿಸಿದರು.
ಕಳೆದ 2022-23ನೇ ಸಾಲಿನ ಅವಧಿಯಲ್ಲಿ ಸುಮಾರು 99 ಶಾಸಕರಿಗೆ ಅಭಿವೃದ್ಧಿ ಮಂಡಳಿಯಿಂದ ತಲಾ ಒಂದು ಕೋಟಿ ಅನುದಾನವನ್ನು ಕಾಮಗಾರಿಗಳಿಗೆ ನೀಡುವಂತೆ ಸೂಚಿಸಿದ್ದು, ಅದರಂತೆ ಇದುವರೆಗೂ ಯಾವುದೇ ರೀತಿ ಅನುದಾನವನ್ನು ಬಿಡುಗಡೆ ಮಾಡಿಲ್ಲ ಏಕೆ? ಸುಮಾರು 362 ಕೋಟಿ ಅನುದಾನವನ್ನು ಸರಕಾರದ ಅನುಮೋದನೆ ಇಲ್ಲದೇ ಬಳಸಿಕೊಳ್ಳುತ್ತಾರೆ ಎಂದರೆ ಮನವಿ ಕೊಟ್ಟ ಶಾಸಕರಿಗೆ ಬೆಲೆ ಇಲ್ಲವೇ? ಇದರ ಹಿಂದಿರುವ ಅಧಿಕಾರಿಗಳ ಮೇಲೆ ಕ್ರಮವಾದರೆ ಅಷ್ಟೇ ಸಾಲದು, ಸಮಗ್ರ ವರದಿ ಕೊಡಬೇಕು. ಇವತ್ತು ಕೇವಲ 35 ಲಕ್ಷ ಅನುದಾನ ಕೊಟ್ಟರೆ ಯಾವ ಶಾಸಕರಿಗೂ ಸಾಕಾಗುವುದಿಲ್ಲ ತೃಪ್ತಿಕರವಿಲ್ಲ, ಜೊತೆಗೆ ಎಂಎಲ್ಸಿಗಳಿಗೆ ಇಂತಹ ಅಭಿವೃದ್ಧಿ ಮಂಡಳಿಗಳಿಂದ ಅಷ್ಟೇ ಅನುದಾನ ಬರುತ್ತದೆ ಅದು ಬಿಟ್ಟು ಬೇರೆ ಕಡೆಯಿಂದ ಅನುದಾನ ಬರಲ್ಲ ಏಕೆ ಇಂತಹ ತಾರತಮ್ಯ ಎಂದು ಪ್ರಶ್ನೆ ಮಾಡಿದರು.
2023 24ನೇ ಸಾಲಿನ ಅವಧಿಗೆ 35ಲಕ್ಷಕ್ಕೆ ಕಾಮಗಾರಿಗಳನ್ನು ಸಲ್ಲಿಸಲು ಕೊರಿದ್ದು, ಈ ಹಿಂದೆ ನೀಡಿರುವ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ, ಕಾಮಗಾರಿಗಳಿಗೆ ಅಡ್ಡಿಪಡಿಸದಂತೆ ಸರಿ ಪಡಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಬೋಸುರಾಜ್, ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ಮೀರಿ ಅನುಮೋದನೆ ಇಲ್ಲದೇ ಸುಮಾರು 362 ಕೋಟಿ ಅನುದಾನದಲ್ಲಿ ಸುಮಾರು 2374 ಕಾಮಗಾರಿಗಳನ್ನು ನಡೆಸಲು ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಯಾರು ತಪ್ಪು ಮಾಡಿದ್ದಾರೆ ಅವರನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಈಗಿರುವ 19 ಕೋಟಿ ಅನುದಾನದಲ್ಲಿ ಬಯಲುಸೀಮೆ ಪ್ರದೇಶದ ಶಾಸಕರಿಗೆ ತಲಾ 35 ಲಕ್ಷ ವನ್ನು ಅಧ್ಯತೆಯ ಕಾಮಗಾರಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಸದನದಲ್ಲಿ ತಿಳಿಸಿದರು.
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…
ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…
ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…