Categories: Crime

ಪ್ರೀತಿ, ಪ್ರೇಮ, ಸೆಕ್ಸ್, ದೋಖಾ….‌ನ್ಯಾಯಕ್ಕಾಗಿ ನೊಂದ ಯುವತಿ ಕಣ್ಣೀರು

ಚಿತ್ರದುರ್ಗ: ಪ್ರೀತಿಸಿ ಮದುವೆ ಆಗ್ತೀನಿ ಅಂತ ಹೇಳಿದ್ದ ಪ್ರಿಯಕರ ಮಂಚ ಏರಿ ಆಸೇ ತೀರಿಸ್ಕಂಡಿದ್ದ. ಏಳು ವರ್ಷ ದೇವಸ್ಥಾನ, ಸಿನಿಮಾ ಪಾರ್ಕ್ ಅಂತ ಸುತ್ತಿಸಿದ್ದ. ಆದರೆ ಈಗ ಆ ಯುವತಿಗೆ ಚರ್ಮ ಕಾಯಿಲೆ ನೆಪ ಹೇಳಿ ಬೇರೆ ಮದುವೆ ಆಗಿ ಮೋಸ ಮಾಡಿದ್ದಾನಂತೆ.

ಮೋಸಗಾರ ಪ್ರಿಕರನ ವಿರುದ್ದ FIR ದಾಖಲಿಸಿರುವ ಯುವತಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ. ಪ್ರೀತಿ ಹೆಸರಲ್ಲಿ ಮೋಸ ಮಾಡಿದವನ ಬಂಧನಕ್ಕೆ ಆಗ್ರಹಿಸಿ ಯುವತಿ ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ. ಮಗಳಿಗೆ ಆದ ಅನ್ಯಾಯದ ವಿರುದ್ದ ಹೋರಾಟಕ್ಕೆ ಪೋಷಕರು ನಿಂತಿದ್ದಾರೆ.

ಬೇರೇಬ್ಬ ಯುವತಿ ಜೊತೆ ಮದುವೆ ಆಗಿರುವ ಮೋಸಗಾರ ಪ್ರಿಯಕರ. ಈ ಸುದ್ದಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ. ಹೀಗೆ ಕಣ್ಣಂಚಲ್ಲಿ ನೀರು ತುಂಬಿಕೊಂಡು ಪರಿತಪಿಸುತ್ತಿರಿವ ಯುವತಿ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಾಮೇನಹಳ್ಳಿ ನಿವಾಸಿ. ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿ, ಹುಟ್ಟಿನಿಂದಲೂ ತೊನ್ನು ಸಮಸ್ಯೆಯಿಂದ ಬಳಲುತ್ತಿದ್ದಳು. ಇಂಥ ಅಮಾಯಕ ಹುಡುಗಿಗೆ ಮದುವೆ ಆಸೆ ತೋರಿಸಿದ್ದ ಅದೇ ಊರಿನ ಯುವಕ ಸತೀಶ್ ಪ್ರೇಮದ ಬಲೆಗೆ ಬೀಳಿಸಿದ್ದ. ಕಳೆದ ಏಳು ವರ್ಷಗಳಿಂದ ಪ್ರೀತಿ ಮಾಡುವೆ ಎಂದು ನಂಬಿಸಿದ್ದ. ಪಾರ್ಕ್, ಸಿನಿಮಾ ಅಂತಾ ಎಲ್ಲಾಕಡೆ ಸುತ್ತಿಸಿದ್ದಮ ಇನ್ನೆನ್ನೂ ನನ್ನ ಮದುವೆ ಆಗಿಯೇ ಬಿಟ್ಟ ಎಂದು ಭಾವಿಸಿದ್ದ ಯುವತಿ ರಂಜಿತ ತನ್ನ ದೇಹವನ್ನೂ ಕೂಡಾ ಸತೀಶ್ ಗೆ ಅರ್ಪಿಸಿದ್ದಳಂತೆ.

ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಹಾಗಾಗ ಊರಿಗೆ ಬಂದಾಗ ಆಕೆಯನ್ನ ಲೈಂಗಿಕವಾಗಿ ಬಳಸಿಕೊಳ್ತಿದ್ದನಂತೆ. ಪಾಪಿ ಪ್ರೇಮಿ ಸತೀಶನ ಕಾಮದಾಸೆಗೆ ಬಲಿಯಾಗಿದ್ದ ಯುವತಿ, ಗರ್ಭಿಣಿ ಆಗಿದ್ದಳಂತೆ. ಆದ್ರೆ ಜಾಬ್ ಆಗುವವರೆಗೂ ಮಗು ಬೇಡ ಎಂದು ಪುಸಲಾಯಿಸಿದ್ದ ಸತೀಶ್ ಮಾತ್ರೆ ಕೊಟ್ಟು ಅಭಾರ್ಷನ್ ಮಾಡಿಸಿ ಎಸ್ಕೇಪ್ ಆಗಿದ್ದನಂತೆ.

ಇದೀಗ ಯುವತಿಗೆ ಚರ್ಮದ ಕಾಯಿಲೆ ಇದೆ ಎಂದು ಮದುವೆ ಆಗಲು ನಿರಾಕರಿಸಿ ಕೈಕೊಟ್ಟಿದ್ದಾನೆ. ಅಲ್ಲದೆ ಈಗಾಗಲೇ ಬೇರೆ ಯುವತಿ ಜೊತೆ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದಾನೆ. ಈಗ ಮದುವೆ ಕನಸು ಕಟ್ಟಿಕೊಂಡಿದ್ದ ಪ್ರೀಯತಮೆಗೆ ಬರಸಿಡಿಲು ಬಡಿದಂತಾಗಿದೆ.

ಇನ್ನೂ ಲವ್ ಹೆಸರಲ್ಲಿ ದೋಖಾ ಮಾಡಿರುವ ಪ್ರೀಯಕರ ಸತೀಶ್ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ . ಬೇರೆ ಹುಡ್ಗಿ ಜೊತೆ ಸತೀಶ ಮದುವೆ ಆಗಿರೋ ಸುದ್ದಿ ತಿಳಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.

ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ವಂಚಕ ಸತೀಶ್ ವಿರುದ್ದ ನೊಂದ ಯುವತಿ ದೂರು ದಾಖಲು ಮಾಡಿದ್ದಾಳೆ. ಆದ್ರೆ ಇದುವರೆಗೂ ಪೊಲೀಸ್ ಆರೋಪಿಯನ್ನ ಪತ್ತೆ ಮಾಡಿಲ್ಲ. ಇದ್ರಿಂದ ಇನ್ನಷ್ಠು ನೊಂದಿರುವ ಯುವತಿ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಅವರನ್ನ ಭೇಟಿ ಮಾಡಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದ್ದಾಳೆ.

ಈ ಬಗ್ಗೆ ಮಾತ್ನಾಡಿರುವ ಯುವತಿ ತಾಯಿ, ನನ್ನ ಮಗಳಿಗೆ ಆತ ತಾಳಿ ಕಟ್ಟಲಿ, ನಾನೇ ಮಗಳನ್ನ ಸಾಕುತ್ತೇನೆ ಎಂದು ಒತ್ತಾಯಿಸಿದ್ದಾಳೆ. ಒಟ್ಟಾರೆ ಸತೀಶ ಅನ್ನೋ ಪಾಪಿ ಮದುವೆ ಆಗುತ್ತೇನೆಂದು ನಂಬಿಸಿ ಲೈಂಗಿಕ ತೃಷೆ ತೀರಿಸಿಕೊಂಡು ಕೈಕೊಟ್ಟಿದ್ದಾನೆ. ತೊನ್ನು ಕಾಯಿಲೆಯಿಂದ ಮದುವೆ ಬೇಡ ಎಂದು ಕೈ ಎತ್ತಿದ್ದಾನೆ. ಆದ್ರೆ ಇತ್ತ ಪ್ರೀಯಕರನೇ ಜೀವ ಎಂದು ಭಾವಿಸಿದ್ದ ಯುವತಿಗೆ ಬರಸಿಡಿಲು ಬಡಿದಿದ್ದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಇನ್ನಾದ್ರು ಚಿತ್ರಹಳ್ಳಿ ಗೇಟ್ ಪೊಲೀಸರು ಕಾಮ ಪಿಶಾಚಿಯನ್ನ ಬಂಧಿಸಿ ನೊಂದ ಯುವತಿಗೆ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕಿದೆ…..

Ramesh Babu

Journalist

Recent Posts

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ನೇಮಕ

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…

12 hours ago

ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ರೂ. 4.8 ಲಕ್ಷದಷ್ಟು ಸಾಲದ ಹೊರೆ ಇದೆ- ಸಿಎಂ‌ ಸಿದ್ದರಾಮಯ್ಯ

ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…

13 hours ago

ಮದುವೆ ಮಾಡಿಸಲಿಲ್ಲವೆಂದು ತಾಯಿಯನ್ನೇ ಕೊಲೆಗೈದ ಪಾಪಿ ಪುತ್ರ

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಶ್ರವಣಬೆಳಗೊಳದಲ್ಲಿ ಪಾಪಿ ಪುತ್ರನೊಬ್ಬ ಮದುವೆ ಮಾಡಿಸಲಿಲ್ಲವೆಂದು ತಾಯಿಯನ್ನೇ ಕೊಲೆಗೈದಿದ್ದಾನೆ. ಗಂಗಮ್ಮ (65), ಕೊಲೆಯಾದ ಮಹಿಳೆ.…

14 hours ago

ವಿ. ಶಾಂತಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…

18 hours ago

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದ ಹೋಟೆಲ್ ನಲ್ಲಿ…

19 hours ago

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್: ಏ.1ರಿಂದ ನೋಂದಣಿ: ಮೇ.9, 10ಕ್ಕೆ ಕ್ರಿಕೆಟ್ ಟೂರ್ನಮೆಂಟ್

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ನ್ನು ಮೇ.9 ಮತ್ತು 10ರಂದು ಆಯೋಜನೆ ಮಾಡಲಾಗಿದೆ...…

19 hours ago