ಬಾಗೇಪಲ್ಲಿ: ಪ್ರೀತಿ- ಪ್ರೇಮ ಎಂಬ ಹೆಸರಿನ ನೆಪ ಹೇಳಿಕೊಂಡು ಪ್ರೀತಿಯ ನಾಟಕವಾಡಿ ದಲಿತ ಯುವತಿಯನ್ನ ತನ್ನ ಬುಟ್ಟಿಗೆ ಬೀಳಿಸಿಕೊಂಡು ಮದುವೆಯಾಗಿ ತನ್ನ ಆಸೆಯನ್ನೆಲ್ಲಾ ತೀರಿಸಿಕೊಂಡ ನಂತರ ಅಮಾಯಕ ಯುವತಿಯನ್ನು ನೇಣು ಬಿಗಿದು ಕೊಂದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮೇಲ್ಜಾತಿ ಯುವಕನಿಂದ ನಡೆದಿದೆ.
ಚೇಳೂರು ಪೋಲೀಸ್ ಠಾಣೆಯ ಚಾಕವೇಲು ಗ್ರಾಮದ ಎರಡನೇ ಬ್ಲಾಕ್ ನಿವಾಸಿ ಮಣಿಕಂಠ ಬಿನ್ ಲೇಟ್ ಶಂಕರಪ್ಪ ಎಂಬುವರು ಒಂದು ವರ್ಷದ ಹಿಂದೆ ಬಾಗೇಪಲ್ಲಿಗೆ ಗಾರ್ಮೆಟ್ಸ್‌ಗೆ ಬರುತ್ತಿದ್ದ ಆಂಧ್ರಪ್ರದೇಶದ ತನಕಲ್ಲು ಮಂಡಲ್ ರಾಚವಾರಪಲ್ಲಿ ಕೊಂಗರಾಳ್ಳ ಕಾಲೋನಿ ನಿವಾಸಿ ಕೊರಚ ಸಮುದಾಯಕ್ಕೆ ಸೇರಿದ ಗಂಗುಲಪ್ಪ ಅವರ ಮಗಳಾದ ಅನಿತಾ (23) ಅವರನ್ನ ಪ್ರೀತಿಯ ನಾಟಕವಾಡಿ ಪೋಷಕರು ಮತ್ತು ಸಂಬಂಧಿಕರ ವಿರೋಧದ ನಡುವೆ ಈ ಪ್ರೇಮಿಗಳಿಬ್ಬರೆ ದೇವಾಲಯದಲ್ಲಿ ಮದುವೆಯಾಗಿದ್ದರು.
ಮದುವೆಯಾದ ಸ್ವಲ್ಪ ದಿನಗಳ ಕಾಲ ಚಿಕ್ಕಬಳ್ಳಾಪುರ ಮತ್ತು ಅನಿತಾ ಅವರ ತವರೂರಾದ ಕೊಂಗರಾಳ್ಳ ಗ್ರಾಮದಲ್ಲಿ ವಾಸ ಮಾಡಿ ನಂತರ ಚಾಕವೇಲು ಗ್ರಾಮಕ್ಕೆ ಅನಿತಾ ಅವರನ್ನು ಕರೆ ತಂದಿದ್ದಾನೆ. ಮಣಿಕಂಠ ಮದುವೆಯಾದ ಅನಿತಾ ಪರಿಶಿಷ್ಠ ಜಾತಿಯವಳು ಎಂಬ ಕಾರಣವೊಡ್ಡಿ ನಾವು ಸವರ್ಣಿಯರು ನಮ್ಮ ಮನೆಗೆ ಸೇರಿಸುವುದಿಲ್ಲ ಎಂದು ಮಣಿಕಂಠನ ತಾಯಿ ಸಾವಿತ್ರಮ್ಮ, ಅಕ್ಕ ಕುಸುಮ, ಬಾವನಾದ ರಾಘವೇಂದ್ರ ಗಲಾಟೆ ಮಾಡಿ ಮನೆಯೊಳಗೆ ಸೇರಿಸಿಕೊಳ್ಳದ ಕಾರಣಕ್ಕೆ ಜೋಡಿಗಳು ಕಳೆದ ಆರು ತಿಂಗಳಿಂದ ಆರೋಪಿ ಮಣಿಕಂಠ ಅವರ ಹಳೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಭೂ- ಮಾಪನ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಮಣಿಕಂಠ ಸಂಬಂಧಿಕರ ಮಾತು ಕೇಳಿ ಅವರ ಜೊತೆಗೂಡಿ ಪ್ರೀತಿಸಿ ಮದುವೆಯಾದ ಅನಿತಾಳಿಗೆ ನಾನಾ ವಿಧದಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಅನಿತಾ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನರಕಯಾತನೆ ಅನುಭವಿಸಿತ್ತಿದ್ದರು, ಮಣಿಕಂಠ ಮತ್ತು ಆತನ ಸಂಬಂಧಿಕರು ಏನಾದರೂ ಮಾಡಿ ಅನಿತಾಳನ್ನು ಸಾಯಿಸಬೇಕೆಂದು ಹಲವು ಬಗೆಯಲ್ಲಿ ಹೊಂಚು ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.
ಸದ್ಯ ಭೂ- ಮಾಪನ ಇಲಾಖೆಯ ಗುಮಾಸ್ತ ಮಣಿಕಂಠ ಚಾಕವೇಲು ಗ್ರಾಮದಲ್ಲಿರುವ ಪೊಲೀಸ್ ಚೌಕಿಯೊಳಗೆ ಗುರುವಾರ ರಾತ್ರಿ ಬಂದು ಶರಣಾಗಿದ್ದಾನೆ.
ರಾತ್ರಿ ಹತ್ತಾರು ವಾಹನಗಳಲ್ಲಿ ಮೃತ ಅನಿತಾಳ ಸಂಬಂಧಿಕರು ಹಾಗೂ ಗ್ರಾಮಸ್ಥರು ಸುಮಾರು 50 ರಿಂದ 60 ಜನರಿದ್ದ ಆಂಧ್ರಪ್ರದೇಶದ ತನಕಲ್ಲು ಗ್ರಾಮದಿಂದ ಬಂದು ಚಾಕವೇಲು ಗ್ರಾಮದ ಪೊಲೀಸ್ ಚೌಕಿಗೆ ನುಗ್ಗಿ ತನ್ನ ಮಗಳನ್ನ ಸಾಯಿಸಿರುವ ಇವನನ್ನು ಇಲ್ಲೇ ಸಾಯಿಸುತ್ತೇವೆಂದು ಗಲಾಟೆ ಮಾಡಿ ಚೌಕಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ, ಗಲಾಟೆ ತಿಳಿಗೊಳಿಸಲು ಪೊಲೀಸರು ಹರ ಸಾಹಸ ಮಾಡಿದರಾದರೂ ಪೊಲೀಸರಿಗೆ ಕೇರ್ ಮಾಡದ ಆಂಧ್ರ ಜನರು ಚೌಕಿಗೆ ನುಗ್ಗಲು ಯತ್ನಿಸಿದರು ಎನ್ನಲಾಗಿದೆ.
ಇದೇ ಸಮಯಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್ ಅವರು ದಿಢೀರನೇ ಭೇಟಿ ನೀಡಿ ವಸ್ತು ಸ್ಥಿತಿ ಕಣ್ಣಾರೇ ಕಂಡು ಪರಸ್ಥಿತಿ ತಿಳಿಗೊಳಿಸಿ ನಿಮಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ರೊಚ್ಚಿ ಗೆದ್ದ ಜನರನ್ನು ಸಮಾಧಾನ ಮಾಡಿದ್ದಾರೆ.
ನಂತರ ಆರೋಪಿಯನ್ನು ಪೊಲೀಸ್ ಜೀಪ್‍ನಲ್ಲಿ ಚಿಕ್ಕಬಳ್ಳಾಪುರ ಜೈಲಿಗೆ ಕಳುಹಿಸುತ್ತಿರುವಾಗ ನೂರಾರು ಜನರ ಗುಂಪು ಪೊಲೀಸ್ ಜೀಪಿಗೆ ಅಡ್ಡ ಹೋಗಿ ಮುಗಿಬಿದ್ದ ಜನರು ಪೊಲೀಸ್ ವಾಹನವನ್ನು ಜಖಂಗೊಳಿಸಲು ಪ್ರಯತ್ನಿಸಿದ್ದಾರೆ.
ಪೊಲೀಸರ ಸಮಯ ಪ್ರಜ್ಞೆಯಿಂದ ನಡೆಯಬಹುದಾದ ಅನಾಹುತವನ್ನು ತಪ್ಪಿಸಿ ಆರೋಪಿ ಮಣಿಕಂಠನನ್ನು ಚಿಕ್ಕಬಳ್ಳಾಪುರ ಜೈಲಿಗೆ ಕಳುಹಿಸಿದ್ದಾರೆ.
ಅನಿತಾಳ ತಾಯಿ ನಾಗಮ್ಮ ಅವರು ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಚೇಳೂರು ಸಬ್ ಇನ್ಸ್ ಪೆಕ್ಟರ್ ಜಿ.ಜಿ. ನರಸಿಂಹ ನಾಯುಡು. ತನಿಖೆ ಮುಂದುವರಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…