ಪ್ರೀತಿ ನೆಪದಲ್ಲಿ ವಿದ್ಯಾರ್ಥಿನಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ ಪೊಲೀಸ್ ಪೇದೆ: ಪ್ರಿಯತಮೆಯನ್ನು ಮದುವೆಯಾಗಲು ಅಡ್ಡಿಯಾದ ಜಾತಿ: ಮದುವೆ ನಿರಾಕರಿಸಿದ ಹಿನ್ನೆಲೆ ಮೂರನೇ ಬಾರಿ ವಿಷ ಸೇವಿಸಿ ಆಸ್ಪತ್ರೆ ಪಾಲಾದ ಯುವತಿ

ಪ್ರೀತಿಸಿ ಇಬ್ಬರೂ ಒಟ್ಟೊಟ್ಟಿಗೆ ಪ್ರಣಯ ಪಕ್ಷಿಗಳಂತೆ ಸುತ್ತುತ್ತಿದ್ದರು. ಪ್ರೀತಿಗೆ ಅಡ್ಡವಾಗದ ಜಾತಿ ಮದುವೆಗೆ ಅಡ್ಡಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಪೇದೆ ಮತ್ತು ಯುವತಿ ಇಬ್ಬರೂ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಬೆಡ್ ಮೇಲೆ ನರಳಾಡುತ್ತಿದ್ದಾರೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ….

ಹೌದು, ಮದುವೆಯಾಗಲು ಜಾತಿ ಅಡ್ಡಿಯಾದ ಹಿನ್ನೆಲೆ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ತಿಮ್ಮಣ್ಣರಾಮಪ್ಪಭೂಸರೆಡ್ಡಿ ಎಂಬ ವ್ಯಕ್ತಿ, ಶಿರಿಷಾ ಎಂಬ ಯುವತಿಯೊಂದಿಗೆ ಪ್ರೀತಿ ಮಾಡುತ್ತಿದ್ದ. ಪೊಲೀಸ್ ಪೇದೆಯ ಪ್ರೀತಿಯನ್ನು ನಂಬಿ ಯುವತಿ ಆತನೊಂದಿಗೆ ದೈಹಿಕ‌ ಸಂಪರ್ಕ ಕೂಡ ಬೆಳೆಸಿದ್ದಾಳೆ ಎನ್ನಲಾಗಿದೆ.

ಮದುವೆಯ ದಿನಾಂಕ ಕೂಡ ನಿಗದಿ ಮಾಡಿ ಲಗ್ನ ಪತ್ರಿಕೆಯನ್ನೂ ಸಹ ಪ್ರಿಂಟ್ ಮಾಡಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಯುವಕನಿಗೆ ಅದೇನಾಯ್ತೋ ಏನು. ಮದುವೆ ಬೇಡ, ನೀವು ಬೇರೆ ಜಾತಿ ನಾವು ಬೇರೆ ಜಾತಿ ಎಂದು ನೆಪ ಹೇಳಿ ಮದುವೆಗೆ ನಿರಾಕರಿಸಿದ್ದಾನೆ ಆರೋಪ ಕೇಳಿಬಂದಿದೆ.

ಇನ್ನು, ಈ ಮೊದಲು ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿ ವಿಷ ಸೇವನೆ ಮಾಡಿದ್ದಳು. ಆಗ ರಾಜಿ ಸಂಧಾನಕ್ಕೆ ಮುಂದಾದ ಪೊಲೀಸ್ ಪೇದೆ, ಮದುವೆ ಆಗುವುದಾಗಿ ಹೇಳಿದ್ದಾನೆ. ಇದೇ ರೀತಿ ಪದೇ ಪದೇ ಜಗಳ ಆಗುತ್ತಿತ್ತು. ಎರಡು ಬಾರಿ ವಿಷ ಸೇವನೆ ಮಾಡಿದ್ದ ಯುವತಿ ಈಗ ಮೂರನೇ ಬಾರಿಗೆ ವಿಷ ಸೇವನೆ ಮಾಡಿದ್ದಾಳೆ ಎನ್ನಲಾಗಿದೆ. ನನ್ನನ್ನು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ನನಗೆ ಆತನೇ ಬೇಕು ಎಂದು ಯುವತಿ ಪಟ್ಟು ಹಿಡಿದಿದ್ದಾಳೆ.

ಇನ್ನೂ, ಇವರಿಬ್ಬರು ಕರೆಸ್ಪಾಂಡೆನ್ಸ್ ನಲ್ಲಿ ಬಿಎ ವ್ಯಾಸಂಗ ಮಾಡಲು ಚಿಕ್ಕಬಳ್ಳಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರುತ್ತಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಎಲ್ಲರು ಸೇರಿ ಒಂದು ವಾಟ್ಸ್ ಆಪ್ ಗ್ರೂಪ್ ಮಾಡುತ್ತಾರೆ. ಅಲ್ಲಿಂದ ನಂಬರ್ ತೆಗೆದುಕೊಂಡು ಅಲ್ಲಿಂದ ಆರಂಭ ಆದ ಪ್ರೀತಿ ಈಗ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಮಲಗುವ ಹಂತಕ್ಕೆ ತಲುಪಿದೆ.

ವಿಷ ಸೇವನೆ ಮಾಡುವಾಗ ಪೊಲೀಸ್ ಪೇದೆ, ನನಗೆ ಯುವತಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ, ಮಧ್ಯಸ್ಥಿಕೆ ವಹಿಸಿದ್ದವರು ಹಣ ಕೇಳಿದ್ದರು. ಕೊಟ್ಟರೂ ನನಗೆ ಕಿರುಕುಳ ತಪ್ಪಿಲ್ಲ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇದ್ದೇನೆ ಎಂದು ಹೇಳಿದ್ದಾನೆ.

ಒಟ್ಟಾರೆ ಪ್ರೀತಿಸಿ ಮದುವೆ ಆಗಿ ಸುಖ ಸಂಸಾರ ಸಾಗಿಸಬೇಕಿದ್ದ ಜೋಡಿ, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿದ್ದು ಮಾತ್ರ ವಿಪರ್ಯಾಸ. ಪೊಲೀಸ್ ಪೇದೆಯಾಗಿ ಜನಸಾಮಾನ್ಯರಿಗೆ ನ್ಯಾಯ ಹೇಳಬೇಕಿದ್ದ ವ್ಯಕ್ತಿ, ಈಗ ಯುವತಿಗೆ ಮೋಸ ಮಾಡಿರುವ ಆರೋಪ ಹೊತ್ತಿದ್ದಾನೆ. ಆಸ್ಪತ್ರೆಗೆ ಎಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿ, ತನಿಖೆ ಮುಂದುವರಿಸಿದ್ದಾರೆ.

Ramesh Babu

Journalist

Recent Posts

ಫೆ.26ರಂದು ಪ್ರಸಿದ್ದ ಮಧುರೆ ಶನಿಮಹಾತ್ಮಸ್ವಾಮಿ 71ನೇ ಬ್ರಹ್ಮರಥೋತ್ಸವ

ಫೆ.26ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಚಿಕ್ಕಮಧುರೆ ಶ್ರೀ ಶನಿಮಹಾತ್ಮಸ್ವಾಮಿಯ 71ನೇ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ…

5 hours ago

Accident Update: ನೆಲಮಂಗಲದ ಜಿಂದಾಲ್‌ ಸಮೀಪ ಭೀಕರ ಅಪಘಾತ: ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರ ಸಾವು ಕೇಸ್: ಮೃತರಲ್ಲಿ ಮೂವರ ಕಣ್ಣುಗಳ ದಾನ

ನೆಲಮಂಗಲದ ಜಿಂದಾಲ್‌ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ…

6 hours ago

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಫಾರ್ಮ್ ಪಾರ್ಟಿ: ಸಂತಸದಿಂದ ಪ್ರಾಣಿಗಳ ಜೊತೆಯಲ್ಲಿ ಸಮಯ ಕಳೆದ ವಿದ್ಯಾರ್ಥಿಗಳು ಮತ್ತು ಪೋಷಕರು

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಶನಿವಾರದಂದು ನಡೆದ ಸೈನ್ಸ್ ಫೆಸ್ಟ್ ನಂತರ ಮಕ್ಕಳಿಗೆ ಮತ್ತು ಪೋಷಕರಿಗೆ ಮನರಂಜನೆ ಉಣಬಡಿಸುವ ಪ್ರಯುಕ್ತ ಮಧ್ಯಾಹ್ನ…

7 hours ago

Accident Update: ಹೊಸಕೋಟೆ ಸರಣಿ ಅಪಘಾತ ಪ್ರಕರಣ ಮಾಸುವ ಮುನ್ನವೇ, ನೆಲಮಂಗಲದ ಜಿಂದಾಲ್‌ ಸಮೀಪ ಮತ್ತೊಂದು ಭೀಕರ ಅಪಘಾತ: ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರ ಸಾವು: ಮೃತರ ವಿವರ ಇಲ್ಲಿದೆ ನೋಡಿ…

ನೆಲಮಂಗಲದ ಜಿಂದಾಲ್‌ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 12 ಗಂಟೆಯ ಸುಮಾರಿಗೆ…

14 hours ago

ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿದ ಖದೀಮರು

ದೊಡ್ಡಬಳ್ಳಾಪುರ: ಶಿವರಾತ್ರಿ ಹಬ್ಬಕ್ಕೆಂದು ಮನೆಯ ಮುಂದೆ ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು, ಸರ ಕಳ್ಳರು ಎಸ್ಕೇಪ್…

17 hours ago

ನಿಕ್ಷಯ ಮಿತ್ರ (Nikshay Mitra) ಕಾರ್ಯಕ್ರಮ ವೀಕ್ಷಣೆ ಹಾಗೂ ಫುಡ್ ಕಿಟ್ ವಿತರಣೆ

ಕೇಂದ್ರ ಟಿಬಿ ಡಿವಿಷನ್, ದೆಹಲಿಯಿಂದ ನಿಕ್ಷಯ ಮಿತ್ರ ಕಾರ್ಯಕ್ರಮದ ಪ್ರಗತಿ ವೀಕ್ಷಣೆಗಾಗಿ ತಾಂತ್ರಿಕ ಸಹಾಯ ತಂಡವು ದೊಡ್ಡಬಳ್ಳಾಪುರಕ್ಕೆ ಆಗಮಿಸಿ, ನಿಕ್ಷಯ…

17 hours ago