ಪ್ರಿಯತಮೆಗಾಗಿ ಮಾಜಿ ಹಾಗೂ ಹಾಲಿ ಲವ್ವರ್ ಗಳ ನಡುವೆ ಜಗಳ:‌ ಹಾಲಿ ಲವ್ವರ್ ಗೆ ಚಾಕುವಿನಿಂದ ಹಿರಿದು ಕೊಲೆ ಮಾಡಿದ ಮಾಜಿ ಲವ್ವರ್

ಯುವಕ ತಾನು ಪ್ರೀತಿ ಮಾಡ್ತಿದ್ದ ಯುವತಿಯನ್ನ, ಮತ್ತೊಬ್ಬ ಯುವಕ ಪ್ರೀತಿಸಿದ್ದ ಅನ್ನೋ ಕಾರಣಕ್ಕಾಗಿ ಪಾರ್ಟಿ ಮಾಡೋ ನೆಪದಲ್ಲಿ ಫಾರ್ಮ್​ಹೌಸ್​​ಗೆ ಕರೆದು ಮನೋಸೋ ಇಚ್ಚೆ ಚಾಕುವಿನಲ್ಲಿ ಇರಿದು ಕೊಲೆ ಮಾಡಿರುವ ಘಟನೆ ನೆಲಮಂಗಲದ ರೈಲ್ವೇ ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ.

ವೇಣುಗೋಪಲ್​ ಎಂಬಾತ ದರ್ಶನ್​ ಎಂಬ ಯುವಕನನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ.

ವೇಣುಗೋಪಾಲ್​ ಪ್ರೀತಿಸುತ್ತಿದ್ದ ಯುವತಿಯನ್ನ, ದರ್ಶನ್​ ಕೂಡ ಪ್ರೀತಿಸುತ್ತಿದ್ದ. ಆಕೆ ವೇಣುಗೋಪಾಲ್​ನನ್ನು ಬಿಟ್ಟು, ದರ್ಶನ್​ನನ್ನ ಪ್ರೀತಿಸುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ವೇಣುಗೋಪಾಲ್​ ದರ್ಶನ್​ ಕೊಲೆ ಮಾಡಲು ಸಂಚು ರೂಪಿಸಿದ್ದನು.

ಇದೇ ಕಾರಣಕ್ಕೆ ಪಾರ್ಟಿ ಮಾಡೋ ನೆಪದಲ್ಲಿ ರಾತ್ರಿ 9.30ರ ಸುಮಾರಿಗೆ ಯುವತಿಯ ಮಾಜಿ ಲವ್ವರ್ ವೇಣುಗೋಪಾಲ್​ ಹಾಲಿ ಲವ್ವರ್​ ದರ್ಶನ್​​ರನ್ನು ತೋಟದ ಮನೆಗೆ ಕರೆಸಿದ್ದನು.

ಈ ವೇಳೆ ಮಾತಿಗೆ ಮಾತು ಬೆಳೆದು ವೇಣು ಗೋಪಾಲ್​, ಹಾಲಿ ಲವ್ವರ್​ ದರ್ಶನ್​ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡ್ತಿದ್ದಂತೆ ಮಾಜಿ ಪ್ರಿಯತಮ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಸದ್ಯ ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಂಡ ರಚನೆ ಮಾಡಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಎಸ್ಪಿ ಸಿ.ಕೆ ಬಾಬಾ ಪ್ರತಿಕ್ರಿಯಿಸಿದ ಅವರು, ರಾತ್ರಿ 9:30 ರ ವೇಳೆ ರೈಲ್ವೆಗೊಲ್ಲಹಳ್ಳಿ ಬಳಿ ಘಟನೆ ನಡೆದಿದೆ.‌ ತೋಟದ ಮನೆಯಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದೆ. ಘಟನೆಯಲ್ಲಿ ದರ್ಶನ್(26) ಕೊಲೆಯಾಗಿದ್ದಾನೆ. ಯುವತಿಯ ವಿಚಾರಕ್ಕೆ ತೋಟದ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ. ಹೊಸ ಲವರ್ ಜೊತೆ ಯುವತಿ ಮದುವೆ ಮಾಡಿಕೊಳ್ಳುವ ಪ್ಲಾನ್ ಇತ್ತು. ಯುವಕ-ಯುವತಿಯ ಪೋಷಕರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂದರು.

ಕೊಲೆ ಆರೋಪಿಯನ್ನು ವಶಕ್ಕೆ ಪಡೆಯಲು ಹೀಗಾಗಲೇ ಒಂದು ತಂಡ ರಚನೆ ಮಾಡಿದ್ದೇವೆ. ಆರೋಪಿಯನ್ನು ಕೂಡಲೇ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದರು.

Ramesh Babu

Journalist

Recent Posts

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

2 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

6 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

13 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

14 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

1 day ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

1 day ago