ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯಕರ, ಶುಚಿತ್ವದ, ರುಚಿಕರವಾದ ಆಹಾರದ ಅರಿವು ಮೂಡಿಸಲು ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಮೊಳಕೆಕಾಳಿನ ದಿನಾಚರಣೆ(Spourts day) ಕಾರ್ಯಕ್ರಮವನ್ನ ಯಶಸ್ವಿಯಾಗಿ ಆಚರಿಸಲಾಯಿತು.
ಶಾಲೆಯ ಅವರಣದಲ್ಲಿ ಮೊಳಕೆಕಾಳಿನ ದಿನಾಚರಣೆಯನ್ನ ಅಯೋಜನೆ ಮಾಡಲಾಗಿದ್ದು, ವಿಶೇಷವಾಗಿ ಪ್ರಿ-ಸ್ಕೂಲ್‌ನ ಪುಟಾಣಿ ಮಕ್ಕಳಿಗಾಗಿ ಮೊಳಕೆಕಾಳಿನ (Spourts day) ದಿನಾಚರಣೆಯ ಮಹತ್ವವನ್ನ ನುರಿತ ಶಿಕ್ಷಕರು ತಿಳಿಸಿಕೊಟ್ಟರು.
ಮೊಳಕೆ, ತುರಿದ ಕ್ಯಾರೆಟ್, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ದಾಳಿಂಬೆ, ನಿಂಬೆ ಮತ್ತು ಉಪ್ಪಿನೊಂದಿಗೆ ರುಚಿಕರವಾದ ಮೊಳಕೆ ಸಲಾಡ್ ಮಾಡುವ ಬಗ್ಗೆ ಶಿಕ್ಷಕರು ವಿವರಿಸಿದರು. ಆನಂತರ ಮಕ್ಕಳು ರುಚಿಕರವಾದ ಮೊಳಕೆಕಾಳುಗಳನ್ನ ತಿಂದು ಆನಂದಿಸಿದರು. ಆರೋಗ್ಯಕರ ಆಹಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಈ ಚಟುವಟಿಕೆಯನ್ನು ನಡೆಸಲಾಯಿತು. ಆರೋಗ್ಯಕರ ಆಹಾರ ಸೇವನೆಯ ಅಗತ್ಯತೆ ಮತ್ತು ಆಹಾರದ ನಾರಿನಂಶದಿಂದ ಸಮೃದ್ಧವಾಗಿರುವ ಮೊಳಕೆಕಾಳುಗಳ ಮಹತ್ವವನ್ನು ಶಿಕ್ಷಕರು ಮಕ್ಕಳಿಗೆ ಕಲಿಸಿದರು.
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…
ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…
ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…
ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…
ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…