ಕಾರ್ಪೋರೆಟ್ ವಲಯದ ವ್ಯಕ್ತಿಗಳು ಜನರ ಶೋಷಣೆಯ ಮೂಲಕ ಬಂಡವಾಳ ಮಾಡುವುದು ಅಪಾಯಕಾರಿ- ಲೇಖಕ ಮಂಜುನಾಥ ಎಂ.ಅದ್ದೆ

ಯಾವುದೇ ವ್ಯಕ್ತಿ ನ್ಯಾಯಯುತ ಮಾರ್ಗದ ದುಡುಮೆಯಲ್ಲಿ ಬಂಡವಾಳ ಮಾಡುವುದು ತಪ್ಪಲ್ಲ. ಆದರೆ ಅದನ್ನು ತನ್ನ ಸುತ್ತಲಿನ ಸಮಾಜಕ್ಕು ಹಂಚಿ ಬದುಕಿದಾಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಆದರೆ ಕಾರ್ಪೋರೆಟ್ ವಲಯದ ವ್ಯಕ್ತಿಗಳು ಜನರ ಶೋಷಣೆಯ ಮೂಲಕ ಬಂಡವಾಳ ಮಾಡುವುದು ಅಪಾಯಕಾರಿ ಎಂದು ಪ್ರಗತಿಪರ ಚಿಂತಕ, ಲೇಖಕ ಮಂಜುನಾಥ ಎಂ.ಅದ್ದೆ ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ಭಾನುವಾರ ನಡೆದ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ ಅವರಿಗೆ ‘ಕನ್ನಡ ಜನಪರ ಸತ್ಯ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಕಾರ್ಪೋರೇಟ್ ನೀತಿಯನ್ನ ವಿರೋಧಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಜನಪರವಾಗಿ ಹೋರಾಟ ಮಾಡುವ ತನ್ನ ಸುತ್ತಲಿನ ಜನರ ಒಳಿತಿಗಾಗಿ ಶ್ರಮಿಸಿದವರು ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ. ಹೀಗಾಗಿಯೇ ಕರ್ನಾಟಕ 50ನೇ ವರ್ಷಾಚರಣೆ ಸಂದರ್ಭದಲ್ಲಿ ಸಮಾನ ಮನಸ್ಕರು ನಗದು ಪುರಸ್ಕಾರ ನೀಡುವ ಮೂಲಕ ಅಭಿನಂದಿಸುತ್ತಿರುವುದು ಅರ್ಥಪೂರ್ಣವಾಗಿದೆ. ಇದು ಇತರೆ ಹೋರಾಟಗಾರರಿಗೆ ಜನರಪರವಾಗಿ ಕೆಲಸ ಮಾಡುವ ಸ್ಫೂರ್ತಿ ತುಂಬದಲಿದೆ  ಎಂದರು.

ಚಳುವಳಿಗಾರರು ಸಂವಿಧಾನದ ಚೌಕಟ್ಟಿನಲ್ಲಿ ದುಡುಮೆಗು ಮಾರ್ಗಮಾಡಿಕೊಳ್ಳದೇ ಹೋದರೆ ಹೋರಾಟಗಳು ಸೋಲುತ್ತವೆ. ಇದರಿಂದ ಸಮಾಜಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಹೇಳಿದರು.

ನಗರಸಭಾ ಸದಸ್ಯ ಹಾಗೂ ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ಪ್ರಾರಂಭದ ದಿನಗಳಲ್ಲಿ ಪರಭಾಷಾ ಚಿತ್ರಗಳ ವಿರುದ್ಧದ ಪ್ರತಿಭಟನೆಗೆ ಸೀಮಿತವಾಗಿದ್ದ ನಮ್ಮ ಹೋರಾಟಗಳು ನಂತರ ದಿನಗಳಲ್ಲಿ ನಾಡಿನ ನೆಲ,ಜಲ ಹಾಗೂ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಹೋರಾಟಗಳಾಗಿ ರೂಪುಗೊಂಡಿದ್ದು ಈಗ ಇತಿಹಾಸ. 80ರ ದಶಕದಲ್ಲಿ ನಗರದಲ್ಲಿ ಹುಟ್ಟಿಕೊಂಡ ಕನ್ನಡ ಜಾಗೃತ ಪರಿಷತ್ ಅಡಿಯಲ್ಲಿ ಇಡೀ ರಾಜ್ಯವೇ ಇಲ್ಲಿನ ಕನ್ನಡಪರ, ರೈತರಪರ ಹಾಗೂ ದಲಿತಪರ ಚಳುವಳಿಗೆಗಳನ್ನು ಗುರುತಿಸುವಂತೆ ಹಲವಾರು ದಾಖಲರ್ಹ ಹೋರಾಟಗಳು ನಡೆದಿವೆ ಎಂದರು.

ಎಲ್ಲಾ ಹೋರಾಟಗಳಲ್ಲೂ ಡಾ.ವೆಂಕಟರೆಡ್ಡಿ, ಜಿ.ಸತ್ಯನಾರಾಯಣ ಸೇರಿದಂತೆ ಹಲವಾರು ಜನ ತೊಡಗಿಸಿಕೊಂಡಿದ್ದರು. ಇದರ ಫಲವಾಗಿಯೇ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳು ದೊರೆಯಲು ಕಾರಣವಾಯಿತು. ಇದರಿಂದ ಕನ್ನಡಿಗರು ಆರ್ಥಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಇಂದಿನ ಯುವ ಪೀಳಿಗೆ ಹೋರಾಟಗಳ ಇತಿಹಾಸವನ್ನು ತಿಳಿಯುವ ಮೂಲಕ ಸ್ವಾಭಿಮಾನದ ಬದುಕು ರೂಪಿಕೊಳ್ಳಲು ನಾಡಿನ ಏಳಿಗೆಗೆ ಶ್ರಮಿಸಲು ಸಜ್ಜಾಗಬೇಕು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ, ಚಳುವಳಿಗಾರರು ಎಂದೂ ಸಹ ಪ್ರಶಸ್ತಿ, ಅಭಿನಂದನೆಗಳಿಗಾಗಿ ಹೋರಾಟಗಳನ್ನು ನಡೆಸುವುದಿಲ್ಲ. ಸದಾ ತಮ್ಮ ಸುತ್ತಲಿನ ಸಮಾಜದ ನೆಮ್ಮದಿಗಾಗಿ ತುಡಿಯಲಿದೆ. ಆದರೆ ಈ ತುಡಿತವನ್ನು ಇಳಿ ವಯಸ್ಸಿನಲ್ಲಿ ಗುರುತಿಸಿ ಗೌರವಿಸಿದಾಗ ಹೋರಾಟಗಾರರ ಬದುಕು ಸಾರ್ಥಕವಾಗಲಿದೆ ಎಂದರು.

ಧಾರವಾಡದಲ್ಲಿನ ವಿದ್ಯಾವರ್ಧಕ ಸಂಘದಂತೆ ಇಲ್ಲಿನ ಕನ್ನಡ ಜಾಗೃತ ಪರಿಷತ್ ಹಲವಾರು ಜನಪರ ಹೋರಾಟಗಳಲ್ಲಿ ಕೇಂದ್ರ ಸಂಸ್ಥೆಯಾಗಿ ಇಂದಿಗೂ ಕ್ರೀಯಾಶೀಲವಾಗಿದೆ. ಇದರ ಹೆಸರಿನಲ್ಲಿ ಪ್ರತಿ ವರ್ಷ ಇಬ್ಬರು ಹಿರಿಯರು, ಒಬ್ಬ ಯುವ ಬರಹಗಾರರು ಅಥವಾ ಹೋರಾಟಗಾರರನ್ನು ಗುರುತಿಸಿ ನಗದು ಪುರಸ್ಕಾರ ನೀಡುವ ಸಮಾರಂಭ ನಿರಂತರವಾಗಿ ನಡೆಯಬೇಕು. ಇದಕ್ಕೆ ಅಗತ್ಯ ಆರ್ಥಿಕ ನೆರವನ್ನು ನೀಡುವ ಭರವಸೆಯನ್ನು ಲೇಖಕ ಮಂಜುನಾಥ ಎಂ.ಅದ್ದೆ ಘೋಷಣೆ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೇಜರ್ ಎಸ್.ಮಹಾಬಲೇಶ್ವರ್ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಕನ್ನಡ ಜಾಗೃತಿ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಸೇರಿದಂತೆ ಹಲವಾರು ಜನ ಹೋರಾಟಗಾರರು ಭಾಗವಹಿಸಿದ್ದರು.

Ramesh Babu

Journalist

Recent Posts

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

3 hours ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

4 hours ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

7 hours ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

7 hours ago

ಬರ ಪರಿಹಾರಕ್ಕೆ 60 ಸಾವಿರ ಕೋಟಿ ನಷ್ಟದ ಅಂದಾಜು- ಡಿಸಿಎಂ ಡಾ.ಜಿ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…

9 hours ago

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

14 hours ago