ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ 400 ಫಾರ್ಮಸಿ ಅಧಿಕಾರಿಗಳು ಹಾಗೂ 150 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಇತ್ತೀಚಿಗೆ ನಿಧನರಾದ ದೊಡ್ಡಬಳ್ಳಾಪುರದ ಪತ್ರಕರ್ತರು (ಶ್ರೀವಾಣಿ ಪತ್ರಿಕೆ ಸಂಪಾದಕರು) ಆದ ಸಿ .ವಾಸುದೇವಮೂರ್ತಿ ರವರಿಗೆ ನಗರದ ಪ್ರವಾಸಿ ಮಂದಿರದಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜೆ.ಎಸ್. ನರಸಿಂಹಸ್ವಾಮಿ ರವರು ಅಗಲಿದ ಸಿ.ವಾಸುದೇವಮೂರ್ತಿ ರವರಿಗೆ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿ ಆರ್ ರಮೇಶ್ 90ರ ದಶಕದಲ್ಲಿ ಬೆರಳೆಣಿಕೆಯಷ್ಟು ಪತ್ರಿಕೆಗಳ ಸಾಲಿನಲ್ಲಿ ಶ್ರೀ ವಾಣಿ ಪತ್ರಿಕೆಯು ಒಂದು.
ಸಮಾಜಮುಖಿ ಲೇಖನಗಳ ಮೂಲಕ ಜನರ ಗಮನ ಸೆಳೆದಿದ್ದ ವಾಸುದೇವಮೂರ್ತಿ ರವರು ಮೂಲತಹ ಕೇಬಲ್ ಆಪರೇಟರ್ ಆಗಿದ್ದರು. ಅಂದಿನ ಕಾಲದಲ್ಲೇ ಸ್ಥಳೀಯ ಕೇಬಲ್ ವಾಹಿನಿಯನ್ನು ನೆಡೆಸುತ್ತಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅದ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕರಾದ ಆರ್.ಸತೀಶ್ ಮಾತನಾಡಿ, ನಾವುಗಳಿಬ್ಬರು ಒಂದೇ ಪೇಟೆಯವರಾಗಿದ್ದು ವಾಸುದೇವಮೂರ್ತಿ ರವರು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ನಗರದಲ್ಲಿ ಪತ್ರಕರ್ತರಾಗಿ ಉತ್ತಮ ಹೆಸರು ವ್ಯಕ್ತಿತ್ವ ಉಳ್ಳವರಾಗಿದ್ದಾರೆ ಎಂದರು.
ಈ ವೇಳೆ ಪತ್ರಕರ್ತರಾದ ರಾಜು ಸಣ್ಣಕ್ಕಿ, ಜೆ.ಮುನಿರಾಜು, ರಹೀಂ, ಎ.ಉಮೇಶ್, ಕೊತ್ತೂರಪ್ಪ, ಗುರುಪ್ರಸಾದ್, ರಾಘವೇಂದ್ರ, ನವೀನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…
ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…
ದೊಡ್ಡಬಳ್ಳಾಪುರ ನಗರದ ಶಾಲಾ ಆವರಣದ ಸುತ್ತಮುತ್ತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಏ.4ರಂದು ದೊಡ್ಡಬಳ್ಳಾಪುರ…
ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…