ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ, ಪ್ರದೀಪ್ ಸಿಂಗ್ ಎಂಬ ವ್ಯಕ್ತಿ ತನ್ನ ಪತ್ನಿ ಬೇಬಿ ಯಾದವ್ ಅವರಿಂದ ಫೋನ್ ತೆಗೆದುಕೊಂಡಿದ್ದಕ್ಕೆ ಕೋಪಗೊಂಡು ಪತಿಗೆ ವಿದ್ಯುತ್ ಶಾಕ್ ನೀಡಿದ್ದಾಳೆ.
33ರ ಹರೆಯದ ಮಹಿಳೆ ಮೊದಲು ಪತಿಗೆ ಮತ್ತು ಬರುವ ಮದ್ದು ನೀಡಿ ಹಾಸಿಗೆಗೆ ಕಟ್ಟಿ ಹಾಕಿದ್ದಾಳೆ. ಅಕೆ ಆತನನ್ನು ಚೆನ್ನಾಗಿ ಥಳಿಸಿ ವಿದ್ಯುತ್ ಶಾಕ್ ನೀಡಲು ಹೋದ್ದಾಳೆ.
ಅವರ 14 ವರ್ಷದ ಮಗ ತನ್ನ ತಂದೆಯನ್ನು ಉಳಿಸಲು ಪ್ರಯತ್ನಿಸಿದಾಗ, ಮಗನಿಗೂ ಥಳಿಸಲಾಗಿದೆ.
ಸದ್ಯ, ಪ್ರದೀಪ್ ಸಿಂಗ್ ಸೈಫೈ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸಿಂಗ್ 2007 ರಲ್ಲಿ ಔರೈಯಾದಿಂದ ದಿವಾನ್ ಸಿಂಗ್ ಅವರ ಮಗಳು ಬೇಬಿ ಯಾದವ್ ಅವರನ್ನು ವಿವಾಹವಾದರು.
“ನನ್ನ ಹೆಂಡತಿ ತನ್ನ ಮೊಬೈಲ್ ಫೋನ್‌ನಲ್ಲಿ ಪ್ರತಿದಿನ ಬೇರೊಬ್ಬರ ಜೊತೆ ಸದಾ ಮಾತನಾಡುತ್ತಿದ್ದಳು. ನಾನು ಅದನ್ನು ವಿರೋಧಿಸಿದೆ ಮತ್ತು ಅವಳ ಕುಟುಂಬಕ್ಕೆ ತಿಳಿಸಿದ್ದೇನೆ. ಅವರ ಅನುಮತಿ ಮೇರೆಗೆ ನಾನು ಅವಳ ಮೊಬೈಲ್ ಫೋನ್ ತೆಗೆದುಕೊಂಡೆ. ಇದರಿಂದ ಕೋಪಗೊಂಡ ಅವಳು ನನ್ನನ್ನು ಮತ್ತು ನಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದಳು. ಕಳೆದ ವಾರದಲ್ಲಿ ಅವಳು ನನ್ನನ್ನು ಕ್ರೂರ ಚಿತ್ರಹಿಂಸೆಗೆ ಒಳಪಡಿಸಿದ್ದಳು. ಅವಳು ಪದೇ ಪದೇ ಕ್ರಿಕೆಟ್ ಬ್ಯಾಟ್‌ನಿಂದ ನನ್ನನ್ನು ಹೊಡೆದಳು, ನನ್ನ ತಲೆ ಮತ್ತು ದೇಹಕ್ಕೆ ತೀವ್ರವಾದ ಗಾಯಗಳನ್ನು ಉಂಟುಮಾಡಿದಳು. ನಂತರ ವಿದ್ಯುತ್ ಶಾಕ್ ನೀಡಿದಳು. ನನ್ನ ಮಗ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವಳು ಅವನ ಮೇಲೂ ಹಲ್ಲೆ ಮಾಡಿದಳು” ಎಂದು ದೂರಿನಲ್ಲಿ ಪತಿ ತಿಳಿಸಿದ್ದಾರೆ.
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…