Categories: ಕೋಲಾರ

ನೋಟಿಸ್ ನೀಡದೆ ಕಾಲುವೆ ತೆರೆವು: ಅಧಿಕಾರಿಗಳ ನಡೆಗೆ ರೈತರ ಅಸಮಾಧಾನ

ಕೋಲಾರ: ತಾಲೂಕಿನ ಸುಗಟೂರು ಹೋಬಳಿಯ ಚಿಟ್ನಹಳ್ಳಿ ಗ್ರಾಮದ ಸರ್ವೇ ನಂ158 ರಲ್ಲಿನ ಕಲ್ಲೋಣಿ ಕೆರೆಯ ಕಾಲುವೆಯ ಅಕ್ಕ ಪಕ್ಕದ ರೈತರಿಗೆ ನೋಟಿಸ್ ನೀಡದೆ ಕಾಲುವೆ ತೆರೆವಿಗೆ ಅಧಿಕಾರಿಗಳು ಮುಂದಾಗಿ ರೈತರು ಬೆಳೆದ ಬೆಳೆಗಳಿಗೆ ತೊಂದರೆ ಕೊಡಲು ಹೊರಟಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಚಿಟ್ನಹಳ್ಳಿ ಗ್ರಾಮದಲ್ಲಿ ತಹಶಿಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ಕೆರೆಯ ಕಾಲುವೆ ತೆರವಿಗೆ ತೆರಳಿದ್ದ ಸಂದರ್ಭದಲ್ಲಿ ಅಧಿಕಾರಿಗಳ ಮತ್ತು ರೈತರ ಮಧ್ಯೆ ಗಲಾಟೆಯೂ ನಡೆಯಿತು ನಂತರ ರೈತರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿದರು.

ಈ ಸಂದರ್ಭದಲ್ಲಿ ಚಿಟ್ನಹಳ್ಳಿ ಗ್ರಾಮದ ಸಿ.ಎಂ ರಮೇಶ್ ಮಾತನಾಡಿ ಗ್ರಾಮದಲ್ಲಿ ಹಿಂದೆ ಕರೆಯ ಜಾಗದಲ್ಲಿ ಹಾದುಹೋಗುವ ಕಾಲುವೆಯಿದ್ದು ದಿನ ಕ್ರಮೇಣ ಕೆರೆಯು ಜೀವಾಂಶವನ್ನು ಕಳೆದುಕೊಂಡು ಹಿಡುವಳಿ ನಂಬರ್‌ಗಳಾಗಿ ಪರಿವರ್ತನೆಯಾಗಿ ಅಕ್ಕ ಪಕ್ಕದ ರೈತರಿಗೆ ಮಂಜೂರಾತಿಯಾಗಿದೆ ಈ ಕಾಲುವೆಯನ್ನು ಕೊರುಕುಲು ಕಾಲುವೆ ಎಂದು ಕೂಡ ನಕ್ಷೆಯಲ್ಲಿ ನಮೂದಿಸಿದ್ದಾರೆ ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ರೈತರ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಕೆಲಸದ ದಿನಗಳಲ್ಲಿಯೇ ನಮ್ಮ ಕೆಲಸಗಳಿಗೆ ಸಿಗುವುದು ಅಪರೂಪ ಆದರೆ ಎರಡನೇ ಶನಿವಾರ ರಜಾ ದಿನ ಇದ್ದರೂ ಏಕಾಏಕಿ ತಹಶಿಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ಯಾವುದೇ ರೀತಿಯ ಸರ್ವೆ ಮಾಡದೆ ಹಾಗೂ ಹದ್ದು ಬಸ್ತನ್ನು ಗುರ್ತಿಸದೆ ಕಾಲುವೆಯನ್ನು ಕೊರೆಯಲು ಮುಂದಾಗಿ ನಮ್ಮ ಬೆಳೆಗಳಿಗೆ ತೊಂದರೆ ಕೊಡಲು ಹೊರಟಿದ್ದಾರೆ ಜಮೀನಿಗೆ ಪ್ರವೇಶಿಸುವ ಮುಂಚೆ ಮುಂಗಡವಾಗಿ ನೋಟೀಸ್ ಕೂಡ ಜಾರಿ ಮಾಡಿಲ್ಲ ಸರ್ವೆ ಹಾಗೂ ಹದ್ದು ಬಸ್ತು ಗುರ್ತಿಸದೆ ಜಮೀನಿನಲ್ಲಿದ್ದ ಹಿಪ್ಪು ನೇರಳೆ ಸೊಪ್ಪನ್ನು ಹಾನಿ ಮಾಡಿ ಕೊರಕಲು ಕಾಲುವೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಕೇಳಲು ಹೋದ ರೈತರ ವಿರುದ್ದ ಆವಾಚ್ಯ ಶಬ್ದಗಳಿಂದ ಬೈದು ನಿಮ್ಮ ವಿರುದ್ಧ ಕೇಸು ದಾಖಲಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ತಾಲ್ಲೂಕು ಕಛೇರಿಯ ಅಧಿಕಾರಿಗಳು ಪ್ರಭಾವಿಗಳ ಜಮೀನಿಗೆ ಹೋಗಿ ಬರಲು ನಮ್ಮ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಹುನ್ನಾರ ಮಾಡುತ್ತಾ ಇದ್ದಾರೆ ಹೊರತು ಕಾನೂನು ಬದ್ಧವಾಗಿ ಕೊರಕಲು ಕಾಲುವೆ ತೆರೆಯುವ ಉದ್ದೇಶ ಅವರಿಗಿಲ್ಲ ಜಮೀನುಗಳ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಚಿಟ್ನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಅನಿತ ಎನ್, ಗ್ರಾಮಸ್ಥರಾದ ಚೌಡರೆಡ್ಡಿ, ಸಿ.ಎಂ ನಾರಾಯಣಸ್ವಾಮಿ, ಶ್ರೀನಿವಾಸ್, ದಿವಾಕರ್, ಮಂಜುನಾಥ್, ಆನಂದ್, ಸಂತೋಷ್, ಪುರುಷೋತ್ತಮ್, ಸೇರಿದಂತೆ ರೈತರು ಇದ್ದರು.

Ramesh Babu

Journalist

Recent Posts

ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,…

4 hours ago

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

9 hours ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

12 hours ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

23 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

1 day ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

1 day ago