ಕೋಲಾರ: ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ನೇರವಾಗಿ ಫಲಾನುಭವಿಗಳ ಕೈಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಾ ಇದ್ದು ನುಡಿದಂತೆ ನಡೆದುಕೊಂಡಿದ್ದೇವೆ ನಿಮ್ಮ ಸಹಕಾರವು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಇರಲಿ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು
ತಾಲೂಕಿನ ಮೂರಾಂಡಹಳ್ಳಿ ಹಾಗೂ ಕೊಂಡರಾಜನಹಳ್ಳಿಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಹತ್ತು ವರ್ಷ ಬಿಜೆಪಿ ಒಂದಾದರೂ ಕೊಟ್ಟ ಭರವಸೆಯನ್ನು ಜಾರಿ ಮಾಡಿದ್ದಾರಾ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಪ್ರತಿ ಮಹಿಳೆಯರಿಗೆ ೧ ಲಕ್ಷ ಕೊಡ್ತೇವೆ ಎಂದು ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದಾರೆ ಇದು ಕಾಂಗ್ರೆಸ್ ಪಕ್ಷದ ಬಡವರ ದಲಿತರ ಬಗ್ಗೆ ಇರುವ ಕಾಳಜಿ ಎಂದರು,
ಕೋಲಾರ ಕ್ಷೇತ್ರವನ್ನು ಈಗಾಗಲೇ ಅಭಿವೃದ್ದಿಯತ್ತ ಕೊಂಡೊಯ್ಯಲಾಗುತ್ತಿದೆ, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಂತ ಪಕ್ಷ ದೇಶಕ್ಕೆ ವಿದ್ಯುತ್, ಟಿವಿ, ಬಡವರಿಗೆ ಭೂಮಿ ನೀಡಿದ್ದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ ಹಾಗಾಗಿಯೇ ಕಾಂಗ್ರೇಸ್ ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತಂದರೆ ಒಂದಲ್ಲ ಒಂದು ರೀತಿಯಲ್ಲಿ ಬಡವರಿಗೆ ಅನುಕೂಲವಾಗುವಂತೆ ಮಾಡುತ್ತಾರೆ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಬೆಂಬಲವಿರಲಿ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಕೋಲಾರದಿಂದ ಕೆವಿ ಗೌತಮ್ ಅವರನ್ನು ಅಧಿಕೃತವಾಗಿ ಅಭ್ಯರ್ಥಿಯಾಗಿದ್ದಾರೆ, ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ವಿದ್ಯಾರ್ಥಿ ಘಟಕದಲ್ಲಿ ಸಂಘಟನೆ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ್ದಾರೆ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ 17 ಚುನಾವಣೆಗಳ ಪೈಕಿ 15 ಚುನಾವಣೆಗಳಲ್ಲಿ 15 ಬಾರಿ ಗೆದ್ದಿದೆ, ನಮ್ಮ ಪಕ್ಷದ ಜಾತ್ಯಾತೀತ ತತ್ವ ಸಿದ್ದಾಂತಗಳನ್ನು ಯೋಜನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಬೇಕಿದೆ ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ೫ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದೆವು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ೫ ಗ್ಯಾರೆಂಟಿಗಳನ್ನು ಜಾರಿ ಮಾಡಿ ಫಲಾನುಭವಿಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರಿಗೆ ತಲುಪಿಸಿದ್ದೇವೆ ಎಂದರು.
ಬಿಜೆಪಿಯವರು ಸಹ 2014ರ ಚುನಾವಣೆಯ ಪೂರ್ವದಲ್ಲಿ ಕೆಲವು ಆಶ್ವಾಸನೆ ನೀಡಿದ್ದರು. ಅದರಲ್ಲಿ ಪ್ರಮುಖವಾಗಿ ಕಾಂಗ್ರೇಸ್ ನವರು ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ ಅದನ್ನು ತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು ಅಧಿಕಾರಕ್ಕೆ ಬಂದು ೧೦ ವರ್ಷದಲ್ಲಿ ಯಾವೊಬ್ಬರಿಗೂ ೧೫ ಲಕ್ಷ ಹಣ ನೀಡಲಿಲ್ಲ, ಅದರಂತೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಇಳಿಸುತ್ತೇವೆ ಎಂದಿದ್ದರೂ ದುಪ್ಪಟ್ಡು ಬೆಲೆ ಏರಿಕೆ ಮಾಡಿದ್ದಾರೆ, ಬಿಜೆಪಿಯು ಜಾತಿ ಜಾತಿಗಳ ನಡುವೆ ಕೋಮು ಸಂಘರ್ಷ ಉಂಟು ಮಾಡಿ ಗಲಭೆಗಳನ್ನು ಮಾಡುಡುವುದು ಬಿಟ್ಟರೆ ಅಭಿವೃದ್ದಿ ಬಿಜೆಪಿಯಿಂದ ಶೂನ್ಯ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ೪೦೦ ಸೀಟು ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ ಹಾಗಾಗಿ ಪ್ರತಿಯೊಬ್ಬರು ಕಾಂಗ್ರೇಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ,ದೇಶದ ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆ ಅದಕ್ಕೆ ನೀವೆ ಮಾಲೀಕರು ನೀವೇ ಯಜಮಾನರು ನಿಮ್ಮ ಹಕ್ಕು ನಿಮ್ಮ ಜವಾಬ್ದಾರಿ, ದೇಶ ಯಾವ ದಿಕ್ಕಿನಲ್ಲಿ ಹೋಗಬೇಕು ಎನ್ನುವ ಚಿಂತೆಯೊಂದಿಗೆ ಜಾತ್ಯಾತೀತ ಹಾಗೂ ಅಭಿವೃದ್ದಿಗೆ ಮತ್ತೊಂದು ಹೆಸರಾಗಿರುವ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಹೇಗಿತ್ತು, ರೈತರ ಪರವಾದ ಕಾರ್ಯಕ್ರಮಗಳನ್ನು ಮಾಡಿದ್ದಾರೆಯೇ, ಜನರ ಬದುಕಿಗಾಗಿ ಯಾವುದಾದ್ರೂ ಒಂದೇ ಒಂದು ವ್ಯವಸ್ಥೆ ಮಾಡಲಿಲ್ಲ, ಯುವ ಜನತೆ ಕೇಂದ್ರ ಸರ್ಕಾರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ, ದೇಶದ ಚುನಾವಣೆ ರೈತರಿಗೆ ಶೋಷಿತರಿಗೆ, ಮಹಿಳೆಯರಿಗೆ ಯಾವ ರೀತಿ ಸಂಬಲೀಕರಣಕ್ಕಾಗಿ ಯೋಜನೆಗಳನ್ನು ಮಾಡುತ್ತಿದ್ದಾರೆ ಅನ್ನೋದು ಮುಖ್ಯ ಹಾಗಾಗಿ ಪ್ರತಿಯೊಬ್ಬರೂ ಕಾಂಗ್ರೇಸ್ ಅಭ್ಯರ್ಥಿಗೆ ಕೆವಿ ಗೌತಮ್ ಅವರನ್ನು ಬೆಂಬಲಿಸಬೇಕು ಎಂದರು.
ಕಾಂಗ್ರೇಸ್ ಅಭ್ಯರ್ಥಿ ಕೆವಿ ಗೌತಮ್ ಮಾತನಾಡಿ, ಪಕ್ಷಕ್ಕೆ ನಿಷ್ಟೆಯಿಂದ ಕೆಲಸ ಮಾಡಿದ್ದಲ್ಲಿ ಗುರುತಿಸಿ ಒಳ್ಳೆಯ ಸ್ಥಾನ ಕೊಡುತ್ತೆ ಅನ್ನೋದು ನಾನೇ ಉದಾಹಣೆ, ಬೇರೆ ರಾಜ್ಯದಲ್ಲಿ ಬಿಜೆಪಿಯ ಅನಾಚಾರಗಳು ಹೆಚ್ಚಾಗಿದೆ ಗುಜರಾತ್, ಯುಪಿ ಸೇರಿದಂತೆ ಅನೇಕ ಕಡೆಗಳಲ್ಲಿ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದಾರೆ ರೈತರ ಪ್ರತಿಭಟನೆ ವೇಳೆ ೬೦೦ ಜನರು ಸತ್ತರೂ ಒಂದೇ ಒಂದು ಹನಿ ಕಣ್ಣೀರನ್ನು ಹಾಕಲಿಲ್ಲ ಪ್ರಧಾನಿ ಮೋದಿ, ಕಳೆದ ಹತ್ತು ವರ್ಷದಲ್ಲಿ ಬಿಜೆಪಿ ಯವರು ನೀಡಿರುವ ಒಂದೇ ಒಂದು ವಾಗ್ದಾನವನ್ನು ಈಡೇರಿಸಲಿಲ್ಲ ಸಂವಿಧಾನ ಅಪಾಯದಲ್ಲಿದೆ ರೈತರಿಗೆ ಆದಾವಿಲ್ಲ, ಮಹಿಳೆಯರಿಗೆ ರಕ್ಷಣೆ ಇಲ್ಲ, ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಅಭಿವೃದ್ಧಿಗೆ ಕಾಂಗ್ರೆಸ್ ಕಾರಣವಾಗಿದೆ ನನಗೆ ಮತ ಕೊಟ್ಟು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀಕೃಷ್ಣ, ನಾಗನಾಳ ಸೋಮಣ್ಣ,ವ ಮುನಿಅಂಜಿನಪ್ಪ, ಕೆ.ವಿ ದಯಾನಂದ್, ವಕ್ಕಲೇರಿ ರಾಜಪ್ಪ, ಮಂಜುನಾಥ್, ಅಂಬರೀಷ್, ಮೈಲಾಂಡಹಳ್ಳಿ ಮುರಳಿ, ನುಕ್ಕನಹಳ್ಳಿ ಶ್ರೀನಿವಾಸ್, ಕೊಂಡರಾಜನಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್, ಖಾದ್ರಿಪುರ ಬಾಬು, ನಿರಂಜನ್ ರಾಮಚಂದ್ರಪ್ಪ, ಜಯರಾಮ್ ಮುಂತಾದವರು ಇದ್ದರು
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…
ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…