ಸಂಕಷ್ಟದಲ್ಲಿದ್ದ ನೇಯ್ಗೆ ಉದ್ಯಮಕ್ಕೆ 10HP ವರಗೆ ಉಚಿತ ವಿದ್ಯುತ್ ಜಾರಿಗೆ ತಂದು ನೇಯ್ಗೆ ಉದ್ಯಮಕ್ಕೆ ಶಕ್ತಿ ತುಂಬಿರುವ ಸರ್ಕಾರದ ತಿರ್ಮಾನದಿಂದ ರಾಜ್ಯದ 25 ಸಾವಿರ ವಿದ್ಯುತ್ ಮಗ್ಗದ ಘಟಕಗಳಿಗೆ ಅನುಕೂಲವಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಹೇಳಿದರು.
ಈ ಕುರಿತು ನಗರದ ಸಿನಿಮಾ ರಸ್ತೆಯಲ್ಲಿರುವ ನೇಕಾರರ ಹೋರಾಟ ಸಮಿತಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರ ಸಮ್ಮಾನ್ ಯೋಜನೆಯ ಮೂಲಕ 83 ಸಾವಿರ ಜನ ನೇಕಾರರು ಮತ್ತು ನೇಕಾರ ಕಾರ್ಮಿಕರಿಗೆ ತಲಾ ಐದು ಸಾವಿರ ರೂಪಾಯಿ ಹಣವನ್ನ ಖಾತೆಗೆ ಜಮಾ ಮಾಡುವ ಮೂಲಕ ರಾಜ್ಯ ಸರ್ಕಾರ ನೇಕಾರರಿಗೆ ಅಸರೆಯಾಗಿದೆ ಎಂದರು.
2004ರಲ್ಲಿ ಅವಸಾನದ ಅಂಚಿನಲ್ಲಿದ್ದ ನೇಯ್ಗೆ ಉದ್ಯಮಕ್ಕೆ ಇದೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಉಪ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು, ವಿದ್ಯುತ್ ರಿಯಾಯಿತಿ ಜಾರಿಗೆ ತಂದು ನೇಯ್ಗೆ ಉದ್ಯಮಕ್ಕೆ ಆಸರೆ ಆಗಿದ್ದು ಅದೇ ಸಮಯದಲ್ಲಿ. ನೇಕಾರರ ಸಾಲದ ಮೇಲಿನ ಬಡ್ಡಿ ಮನ್ನಾ, ವಸತಿ ಯೋಜನೆ, ಗುಂಪು ವಿಮಾ ಯೋಜನೆ, ನೇಕಾರ ಮಕ್ಕಳಿಗೆ 9 ರಿಂದ 12 ತರಗತಿ ಓದುವ ವಿದ್ಯಾರ್ಥಿಗಳಿಗೆ 1,200 ರೂ. ವಿದ್ಯಾರ್ಥಿವೇತನ, ಯಶಸ್ವಿನಿ ಅರೊಗ್ಯ ವಿಮಾ ಯೋಜನೆ, ಎರಡು ಮಗ್ಗ ಯೋಜನೆ ಎಲೆಕ್ಟ್ರಾನಿಕ್ ಜಕಾರ್ಡ್ ಯೋಜನೆ, ಶೇ3.ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ನೇಯ್ಗೆ ಉದ್ಯಮಕ್ಕೆ ಜೀವ ತುಂಬಿದ್ದರು.
ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ನೇಕಾರರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಉಚಿತ ವಿದ್ಯುತ್ ಜಾರಿಗೆ ತರಲು ಕರ್ನಾಟಕ ರಾಜ್ಯ ನೇಕಾರ ಮಹಾ ಮಂಡಳಿಯ ಜೊತೆ ನಿಂತು ಸಹಕರಿಸಿದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ ಎಂ ವೀರಪ್ಪ ಮೊಯ್ಲಿ ರವರು ಹಾಗು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಟಿ ವೆಂಕಟರಮಣಯ್ಯ ರವರು ಕಳೆದ ಚುನಾವಣೆಯಲ್ಲಿ ಅವರಿಗೆ ಅನ್ಯಾಯ ವಾಗಿದ್ದರೂ ಸಹ ಅವರು ಉಚಿತ ವಿದ್ಯುತ್ ಜಾರಿಗೆ ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದರು.
ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು…
ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…
ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…
ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…
ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…
ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…