ಕೇಂದ್ರ ಟಿಬಿ ಡಿವಿಷನ್, ದೆಹಲಿಯಿಂದ ನಿಕ್ಷಯ ಮಿತ್ರ ಕಾರ್ಯಕ್ರಮದ ಪ್ರಗತಿ ವೀಕ್ಷಣೆಗಾಗಿ ತಾಂತ್ರಿಕ ಸಹಾಯ ತಂಡವು ದೊಡ್ಡಬಳ್ಳಾಪುರಕ್ಕೆ ಆಗಮಿಸಿ, ನಿಕ್ಷಯ ಮಿತ್ರ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳನ್ನು ಪರಿಶೀಲನೆ ನಡೆಸಲಾಯಿತು.
ಡಾ. ನಾಗೇಶ್ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ನಿಕ್ಷಯ ಮಿತ್ರ ಕಾರ್ಯಕ್ರಮದ ಮೂಲಕ ಸಾರ್ವಜನಿಕ–ದಾನಿಗಳ ಸಹಕಾರದಿಂದ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಹಾಗೂ ಮಾನಸಿಕ ಬೆಂಬಲ ದೊರಕುತ್ತಿದ್ದು, ರೋಗ ಮುಕ್ತ ಭಾರತದ ಗುರಿಗೆ ಇದು ಮಹತ್ವದ ಹೆಜ್ಜೆಯಾಗಿದೆ.
ನಿಕ್ಷಯ ಮಿತ್ರ (Nikshay Mitra) ಕಾರ್ಯಕ್ರಮ ವೀಕ್ಷಣೆ ಹಾಗೂ ಫುಡ್ ಕಿಟ್ ವಿತರಣೆ ಕಾರ್ಯಕ್ರಮದ ಉದ್ದೇಶ ಬಡ ಕ್ಷಯ ರೋಗಿಗಳಿಗೆ ದಾನಿಗಳ ಮೂಲಕ ಪೌಷ್ಟಿಕ ಆಹಾರ (ಫುಡ್ ಕಿಟ್) ವಿತರಣೆ ಮಾಡಿ ಅವರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮುಂದುವರಿಸಲು ಸಹಾಯ ಮಾಡುವುದಾಗಿದೆ.
ಈ ಸಂದರ್ಭದಲ್ಲಿ ಸುಮಾರು ಐದು ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಬಡ ಕ್ಷಯ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ನಿರಂತರವಾಗಿ ಪೌಷ್ಟಿಕ ಆಹಾರ ಸಹಾಯ ನೀಡುತ್ತಿರುವ ಶ್ರೀನಿವಾಸ ಮೂರ್ತಿ ಎಲ್ ಹಿರಿಯ ಉಪಾಧ್ಯಕ್ಷರು ಸರ್ಕಾರಿ ನೌಕರರ ಸಂಘ ದೊಡ್ಡಬಳ್ಳಾಪುರ, ಅವರನ್ನು ಸನ್ಮಾನಿಸಲಾಯಿತು.
ಅವರ ಸೇವೆಯಿಂದ ಪ್ರೇರಿತರಾಗಿ ಇನ್ನೂ ಅನೇಕ ದಾನಿಗಳು ಮುಂದೆ ಬಂದು ಕ್ಷಯ ರೋಗಿಗಳಿಗೆ ಸಹಾಯ ಮಾಡುವ ಮನೋಭಾವ ತೋರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಡಾ.ಧರ್ಣಾ ರಾವ್ ನ್ಯಾಷನಲ್ ಲೆವೆಲ್ ಟೆಕ್ನಿಕಲ್ ಅಸಿಸ್ಟನ್ಸ್ (TL-TA), ಡಾ. ಅಖಿಲೇಶ್ ಶ್ರೀವಾತ್ಸವ್ ನ್ಯಾಷನಲ್ ಕನ್ಸಲ್ಟಂಟ್, ನಿಕ್ಷಯ ಮಿತ್ರ ಇನಿಶಿಯೇಟಿವ್ ನಮ್ಯ ಎ ಎಸ್ ಸ್ಟೇಟ್ ಪ್ರೋಗ್ರಾಂ ಆಫೀಸರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಡಾ. ರಮೇಶ್ ಪಿಎಸ್, ಡಾ. ಮಂಜುನಾಥ್, ಡಾ. ಪರಮೇಶ್ವರ್, ಡಾ. ಗಾಯತ್ರಿ, ಹಿರಿಯ ನರ್ಸಿಂಗ್ ಆಫೀಸರ್ ಶೈಲಜಾ, ಹಿರಿಯ ಚಿಕಿತ್ಸೆ ಮೇಲ್ವಿಚಾರಕ ಆನಂದ್, DRTB ಸೂಪರ್ವೈಸರ್ ಸಿದ್ದರಾಜು, ಯುವರಾಜ್, ಕಿರಣ್, ಹಿರಿಯ ಮೇಲ್ವಿಚಾರಕ ಪ್ರಭಾಕರ್, ಮಂಜುನಾಥ್, ಕೆ ಸಿ ರುದ್ರೇಶ್, ಸುರೇಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…
ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…
ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…
ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…
ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…