
ದೊಡ್ಡಬಳ್ಳಾಪುರ: ನಗರದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 6ರಂದು (ಶುಕ್ರವಾರ) ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
66/11 ಕೆ.ವಿ. ಡಿ.ಕ್ಲಾಸ್ ಉಪ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಡಿಎಫ್-10 ವಾಸವಿ ಮತ್ತು ಡಿಎಫ್-16 ಕಂಟನಕುಂಟೆ ಫೀಡರ್ಗಳಲ್ಲಿ ವಿದ್ಯುತ್ ಕಾಮಗಾರಿ ನಡೆಯಲಿರುವುದರಿಂದ ಈ ಮಾರ್ಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ವಿದ್ಯುತ್ ಅಡಚಣೆ ಆಗುವ ಪ್ರದೇಶಗಳು
ಪಾಲನಜೋಗಿಹಳ್ಳಿ, ಪ್ರಿಯದರ್ಶಿನಿ ಬಡಾವಣೆ, ಟಿ.ಬಿ.ನಾರಾಯಣಪ್ಪ ಬಡಾವಣೆ, ಕುವೆಂಪು ನಗರ, ಗಂಗಾಧರಪುರ, ಬಸವಭವನ ರಸ್ತೆ, ಮಲ್ಲತ್ತಹಳ್ಳಿ, ಪಾಲನಜೋಗಿಹಳ್ಳಿ ಸರ್ಕಾರಿ ಶಾಲೆ, ಹಸನ್ ಘಟ್ಟ, ಕಂಟನಕುಂಟೆ, ಅಂತರಹಳ್ಳಿ, ಗೊಲ್ಲಹಳ್ಳಿ, ಗೊಲ್ಲಹಳ್ಳಿ ತಾಂಡ, ಅಳ್ಳಾಳಸಂದ್ರ, ತಪಸೀಹಳ್ಳಿ, ಬಚ್ಚಹಳ್ಳಿ, ಮೇಲಿನ ನಾಯಕರಂಡಹಳ್ಳಿ, ಕೆಳಗಿನ ನಾಯಕರಂಡಹಳ್ಳಿ, ಕಮಲೂರು, ಕಮಲೂರು ಪಾಳ್ಯ, ಕೆರೇನಹಳ್ಳಿ, ನೆಲ್ಲುಕುಂಟೆ, ಮಜರಾಹೊಸಹಳ್ಳಿ ದಿನ್ನೆ ತಾಂಡ, ನಾಗಶೆಟ್ಟಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.