Categories: ರಾಜ್ಯ

ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ: ಎಲ್ಲೆಲ್ಲಿ ಮತ ಎಣಿಕೆ ನಡೆಯಲಿದೆ? ಇಲ್ಲಿದೆ ಮಾಹಿತಿ…

2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಗೆ ಮತದಾನ ಮುಕ್ತಾಯಗೊಂಡಿದ್ದು, ಮತ ಎಣಿಕೆ ಘಟ್ಟಕ್ಕೆ‌ ಬಂದಿದೆ. ನಾಳೆ(ಮೇ.13) ಈಗಾಗಲೇ ಗುರುತಿಸಿರುವ ರಾಜ್ಯದ 34 ಕೇಂದ್ರಗಳಲ್ಲಿ ಮತ ಎಣಿಕೆ‌ ಕಾರ್ಯ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ ನಡೆಸಲಾಗಿದೆ.

ಈಗಾಗಲೇ ಆಯಾ ಪಕ್ಷಗಳಿಂದ ಕಣಕ್ಕೆ ಇಳಿದಿದ್ದ ಅಭ್ಯರ್ಥಿಗಳಿಗೆ ಎದೆಯಲ್ಲಿ ಢವ ಢವ ಶುರುವಾಗಿದೆ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬಿತ್ಯಾದಿಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಅರೆಸೇನಾ ಪಡೆಗಳು ಸ್ಟ್ರಾಂಗ್ ರೂಮ್‌ಗಳಲ್ಲಿ ಕಾವಲು ಕಾಯುತ್ತಿದ್ದರೆ, ಮತ ಎಣಿಕೆ ಕೇಂದ್ರಗಳ ಆವರಣವನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್‌ಆರ್‌ಪಿ) ಪಡೆಯ ಸಿಬ್ಬಂದಿ ಮತ್ತು ನಗರ ಅಥವಾ ಜಿಲ್ಲಾ ಪೊಲೀಸರು ಮತ ಎಣಿಕೆ ಕೇಂದ್ರಗಳ ಪ್ರವೇಶ ದ್ವಾರದಲ್ಲಿ ಕಾವಲು ಕಾಯುತ್ತಿದ್ದಾರೆ. ಪ್ರತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನಿಯೋಜಿಸಲಾಗಿದೆ.

ಮತ ಎಣಿಕೆ ನಡೆಯುವ ಕೇಂದ್ರಗಳ ವಿವರ

1. ಯಾದಗಿರಿ -ಸರ್ಕಾರಿ ಪದವಿ ಪೂರ್ವ ಕಾಲೇಜು

2 ವಿಜಯಪುರ – ಸೈನಿಕ ಶಾಲೆ ಕ್ಯಾಂಪಸ್

3.ಚಾಮರಾಜನಗರ – ಸರ್ಕಾರಿ ಇಂಜಿನಿಯರ್ ಕಾಲೇಜು

4.ಹಾಸನ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಡೈರಿ ಸರ್ಕಲ್

5.ಮಂಡ್ಯ – ಮಂಡ್ಯ ವಿವಿ

6.ರಾಮನಗರ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ

7.ಬೆಂಗಳೂರು ಗ್ರಾಮಾಂತರ – ಅಕಾಶ್ ಇಂಟರ್ನ್ಯಾಷನಲ್ ಸ್ಕೂಲ್, ಪ್ರಸನ್ನಹಳ್ಳಿ, ದೇವನಹಳ್ಳಿ ಟೌನ್

8.ಬೆಂಗಳೂರು ನಗರ – ಸೈಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮತ್ತು ಪಿಯು ಕಾಲೇಜು, ಬೆಂಗಳೂರು

9.ಬಿಬಿಎಂಪಿ – ದಕ್ಷಿಣ ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು, ಜಯನಗರ

10.ಬಿಬಿಎಂಪಿ ಉತ್ತರ – ಮೌಂಟ್ ಕಾರ್ಮೆಲ್ ಪಿಯು ಕಾಲೇಜು

11.ಬಿಬಿಎಂಪಿ ಸೆಂಟ್ರಲ್ – ಬಿಎಂಎಸ್‌ ಮಹಿಳಾ ಕಾಲೇಜು, ಬಸವನಗುಡಿ

12.ಮೈಸೂರು- ಸರ್ಕಾರಿ ಮಹಾರಾಣಿ ಮಹಿಳಾ ಕಾಲೇಜು

13.ಕೊಡಗು – ಸೈಂಟ್ ಜೋಸೆಫ್‌ ಕಾನ್ವೆಂಟ್

14.ದಕ್ಷಿಣ ಕನ್ನಡ – ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್

15.ಕೋಲಾರ – ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು

16.ಚಿಕ್ಕಮಗಳೂರು – ಐಡಿಎಸ್‌ಜಿ ಕಾಲೇಜು

17.ಉಡುಪಿ – ST.CECILY’s ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಬ್ರಹ್ಮಗಿರಿ, ಉಡುಪಿ

18.ಶಿವಮೊಗ್ಗ – ಸೈಹಾದ್ರಿ ಆರ್ಟ್ಸ್ ಕಾಲೇಜು

19.ಧಾರವಾಡ – ಕೃಷಿ ವಿಜ್ಞಾನ ವಿವಿ

20.ಗದಗ- ಶ್ರೀ ಜಗದ್ಗುರು ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು, ಗದಗ

21.ಕೊಪ್ಪಳ- ಶ್ರೀ ಗವಿಸಿದ್ದೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಕೊಪ್ಪಳ

22.ದಾವಣಗೆರೆ – ಶಿವಗಂಗೋತ್ರಿ ದಾವಣಗೆರೆ ವಿವಿ

23.ಚಿತ್ರದುರ್ಗ- ಸರ್ಕಾರಿ ವಿಜ್ಞಾನ ಕಾಲೇಜು

24.ಬಳ್ಳಾರಿ – ರಾವ್ ಬಹಾದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ

25.ವಿಜಯನಗರ – ಪ್ರೌಢದೇವರಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೊಸಪೇಟೆ

26.ಹಾವೇರಿ – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ದೇವಗಿರಿ

27.ಉತ್ತರ ಕನ್ನಡ – ಡಾ. ಎ.ವಿ ಬಾಳಿಗಾ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು ಕುಮಟಾ

28.ರಾಯಚೂರು – ಎಲ್‌ ವಿ ಡಿ ಕಾಲೇಜು

29.ಬೀದರ್ – ಬಿವಿಬಿ ಕಾಲೇಜು, ಬೀದರ್

30.ಕಲಬುರಗಿ – ಗುಲ್ಬರ್ಗ ವಿ.ವಿ

31.ಚಿಕ್ಕಬಳ್ಳಾಪುರ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿ ರಸ್ತೆ

32.ತುಮಕೂರು – ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಿಎಚ್ ರಸ್ತೆ / ತುಮಕೂರು ವಿವಿ ವಿಜ್ಞಾನ ಕಾಲೇಜು / ತುಮಕೂರು ವಿವಿ ಆರ್ಟ್‌ ಕಾಲೇಜು

33.ಬಾಗಲಕೋಟೆ – ತೋಟಗಾರಿಕಾ ವಿವಿ

34.ಬೆಳಗಾವಿ – ಆರ್‌ ಪಿ ಡಿ ಕಾಲೇಜು ಬೆಳಗಾವಿ

Ramesh Babu

Journalist

Recent Posts

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

2 hours ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

3 hours ago

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

15 hours ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

15 hours ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

17 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

1 day ago