ನವರಾತ್ರಿಯ ಉತ್ಸವ ನಾಡಿನೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ. ವಿಶೇಷವಾಗಿ ದೇವತೆಗಳಿಗೆ ಶರನ್ನವರಾತ್ರಿ ಪೂಜೆ, ಹೋಮವನ್ನು ಅರ್ಪಿಸಲಾಗುತ್ತಿದೆ. ನಗರದ ದೇವತೆ ಶ್ರೀ ಮುತ್ಯಾಲಮ್ಮ ದೇವಿಗೆ ನವರಾತ್ರಿಯ ಒಂಭತ್ತನೇ ದಿನದಂದು ಬಂಗಾರದ ಸ್ವರ್ಣಲಂಕಾರ ಮಾಡಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
ಇಂದು ಬೆಳಗ್ಗೆಯಿಂದಲೇ ದೇವಿಯ ದರ್ಶನ ಪಡೆಯಲು ಭಕ್ತಾಧಿಗಳ ದಂಡು ಹರಿದು ಬರುತ್ತಿದೆ. ಈ ಬಾರಿಯ ನವರಾತ್ರಿಯು ಅಕ್ಟೋಬರ್ 3 ರಿಂದ ಪ್ರಾರಂಭವಾಗಿತ್ತು. ಚಾಮುಂಡೇಶ್ವರಿ ದೇವಿಗೆ ಒಂಭತ್ತು ದಿನ ಯಾವ ರೀತಿ ಅಲಂಕಾರ ಮಾಡಿ ಪೂಜಿಸಲಾಗುವುದೋ ಅದೇರೀತಿ ಶ್ರೀ ಮುತ್ಯಾಲಮ್ಮ ದೇವಿಗೂ ಅಲಂಕರಿಸಿ ಪೂಜಿಸಲಾಗುತ್ತಿದೆ.
ದೇವಿಗೆ ಈ ಒಂಭತ್ತು ದಿನಗಳಿಂದಲೂ ವಿಧವಿಧವಾದ ಅಲಂಕಾರ ಮಾಡಲಾಗಿತ್ತು, ಮೊದಲನೇ ದಿನದಂದು ಕರಗದ ಅಲಂಕಾರ, ಎರಡನೇ ದಿನ ಮುತ್ತಿನ ಅಲಂಕಾರ, ಮೂರನೇ ದಿನ ಹೂವಿನ ಅಲಂಕಾರ, ನಾಲ್ಕನೇ ದಿನ ಅರ್ಧನಾದೇಶ್ವರ ಅಲಂಕಾರ, ಐದನೇ ದಿನ ಲಿಂಗದಾಲಂಕಾರ, ಆರನೇ ದಿನ ಚಾಮುಂಡೇಶ್ವರಿ ಅಲಂಕಾರ, ಏಳನೇ ದಿನ ಶಾರದಾಂಬೆ ಅಲಂಕಾರ, ಎಂಟನೇ ದಿನ ನವ ಹೂಗಳ ಅಲಂಕಾರ, ಇಂದು ಸ್ವರ್ಣಾಲಂಕಾರ ಮಾಡಲಾಗಿದೆ. ಈ ಒಂಭತ್ತು ದಿನಗಳ ಕಾಲ ದೇವಿಯ ಒಂಭತ್ತು ರೂಪಗಳನ್ನು ಪೂಜಿಸಲಾಗುತ್ತಿದೆ.
ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ರಂಗೋಲಿ, ದೇವಿಯನ್ನು ಒಲಿಸಿಕೊಳ್ಳಲು ಹಾಡುಗಳನ್ನು ಹಾಡಲಾಗುತ್ತದೆ. ಆ ತಾಯಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಸಿರಿ ಸಂಪತ್ತು ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ಎಂದು ಪೂಜಿಸಲಾಗುತ್ತಿದೆ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…