ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಎಸ್‌ಐಆರ್‌ನಲ್ಲಿ ಅಕ್ರಮಗಳ ಸರಣಿಯೇ ನಡೆದಿದೆ. ಬಿಎಲ್‌ಒಗಳು 450ಕ್ಕೂ ಹೆಚ್ಚು ಫಾರಂ ನಂಬರ್ 7 ವಿತರಣೆ ಮಾಡಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ? ದೇಶದ ಸಂವಿಧಾನದ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕಾದ ಚುನಾವಣಾ ಆಯೋಗವು ಎಸ್‌ಐಆರ್ ಮೂಲಕ ಅಕ್ರಮ ಎಸಗಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗಾಗಿ, ಕರ್ನಾಟಕದ ಪರ ಮಾತನಾಡಬೇಕಿರುವ ವಿರೋಧ ಪಕ್ಷದ ನಾಯಕರು ಕೇಂದ್ರದ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹವರಿಗೆ ಯಾವ ಜನಪರ ಕಾಳಜಿ ಇದೆ? ಯಾವ ಮರ್ಯಾದೆ ಇದೆ?” ಇದೇ ಹಾದಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ ಕೆಲವರಿದ್ದಾರೆ ಎಂದು ಟೀಕಿಸಿದರು.
“ಮೂಲ ಕಾಂಗ್ರೆಸಿಗರು ಮಾತನಾಡುತ್ತಿಲ್ಲ, ವಲಸಿಗರೇ ಮಾತನಾಡುತ್ತಿದ್ದಾರೆ” ಎಂದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಎಚ್.ಡಿ. ಕುಮಾರಸ್ವಾಮಿ ಅವರಿಗೆ ಡಿ.ಕೆ. ಶಿವಕುಮಾರ್ ಹಾಗೂ ನನ್ನನ್ನು ಕಂಡರೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಶಿವಲಿಂಗೇಗೌಡರನ್ನು ಕಂಡರಂತ್ತು ಇನ್ನೂ ಆಗುತ್ತಿಲ್ಲ. ಅವರ ಪಕ್ಷದಲ್ಲೇ ಉಳಿದುಕೊಂಡಿದ್ದರೆ ಬೋರ್ಡ್ ಅಧ್ಯಕ್ಷರನ್ನಾಗಿಯೂ ಯಾರನ್ನೂ ಮಾಡುತ್ತಿರಲಿಲ್ಲ. ರಾಮನಗರದ ಉಸ್ತುವಾರಿ ಸಚಿವರಾಗಿರುವ ಬಾಲಕೃಷ್ಣ, ತಮ್ಮ ವ್ಯಾಪ್ತಿಯಲ್ಲಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಅವರಿಗೇನು ಸಮಸ್ಯೆ?
ನಾನೀಗ ಕಾಂಗ್ರೆಸ್‌ನಲ್ಲಿದ್ದೇನೆ, ನಾನೂ ಕಾಂಗ್ರೆಸಿಗ” ಎಂದರು.
ಮುಂದುವರಿದು ಮಾತನಾಡಿದ ಅವರು, “ಕಳೆದ ಮೂರು ತಿಂಗಳಿಂದ ಅವರು ಮಾಡುತ್ತಿರುವುದು ಸರಿಯೇ? ಪ್ರಧಾನಿಗಳು ಅವರಿಗೆ ಕೆಲಸವನ್ನೇ ನೀಡಿಲ್ಲ ಅನ್ನಿಸುತ್ತದೆ. ವಾರ ಪೂರ್ತಿ ಬೆಂಗಳೂರಿನ ಮಾಧ್ಯಮಗಳ ಮುಂದೆಯೇ ಇರುತ್ತಾರೆ. ನಾನು ಸಚಿವನಾದ ದಿನದಿಂದಲೂ ಒಂದು ಗಂಟೆಯೂ ಪುರುಸೊತ್ತು ಸಿಗುತ್ತಿಲ್ಲ. ಕೇಂದ್ರ ಮಂತ್ರಿಯಾಗಿರುವ ಅವರಿಗೆ ಯಾವ ಕೆಲಸವೂ ಇಲ್ಲವೇ? ಅವರಿಗೆ ತಲೆಯಲ್ಲಿ ಬುದ್ಧಿ ಇರಬೇಕು. ಅವರು ಮಾಡುತ್ತಿರುವುದು ಸರಿಯಾಗಿದೆಯೇ ಎಂದು ನೀವೆ (ಪತ್ರಕರ್ತರು) ಹೇಳಿ. ನೀವು ಸರಿಯಾಗಿದೆ ಎಂದರೆ ನಾನೇ ಅವರನ್ನು ಅಭಿನಂದಿಸುತ್ತೇನೆ” ಎಂದರು.
“ಇನ್ನೊಬ್ಬರ ಬಗ್ಗೆ ದ್ವೇಷ ಸಾಧಿಸುತ್ತಿದ್ದರೆ ಕೆಲಸ ಮಾಡುವುದು ಹೇಗೆ? ನಾನು ಕುಮಾರಸ್ವಾಮಿ ಆಗುವುದಿಲ್ಲ, ಚಲುವರಾಯಸ್ವಾಮಿ ಆಗಿಯೇ ಇರುತ್ತೇನೆ. ಸಿಕ್ಕಿರುವ ಸಮಯದಲ್ಲಿ ಜನರಿಗಾಗಿ ಕೆಲಸ ಮಾಡಿದರೆ ಸಾಕು, ಅಷ್ಟನ್ನೇ ನಾನು ಮಾಡುತ್ತೇನೆ. ಅವರ ರೀತಿ ಬಾಯಿ ಚಪಲಕ್ಕೆ ಮಾತನಾಡುವವನು ನಾನಲ್ಲ” ಎಂದು ತಿರುಗೇಟು ನೀಡಿದರು.
“ಬರ ಅಧ್ಯಯನ ಸಂಬಂಧ ಕೇಂದ್ರದ ತಂಡ ಬಂದಿದೆ. ಅವರು ಯಾವ ರೀತಿ ವರದಿ ನೀಡುತ್ತಾರೋ ನೋಡಬೇಕು. ನಮ್ಮ ರೈತರ ಪರವಾಗಿಯೇ ವರದಿ ನೀಡುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಕೇಂದ್ರ ಸರ್ಕಾರ ಈವರೆಗೂ ನಮ್ಮ ನಿರೀಕ್ಷೆಗೆ ತಕ್ಕಂತೆ ಬರ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ವೇಳೆಯೂ ಸಂಪೂರ್ಣ ಪ್ರಮಾಣದ ಪರಿಹಾರ ಬಿಡುಗಡೆ ಮಾಡಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…