ನವರಾತ್ರಿ ಉತ್ಸವ: ಒಂಭತ್ತನೆ ದಿನದಂದು ಸ್ವರ್ಣಲಂಕಾರದಿಂದ ಕಂಗೊಳಿಸಿದ ಶ್ರೀ ಮುತ್ಯಾಲಮ್ಮ ದೇವಿ: ದೇವಿಯ ದರ್ಶನ ಪಡೆದು ಪುನೀತರಾದ ಭಕ್ತರು

ನವರಾತ್ರಿಯ ಉತ್ಸವ ನಾಡಿನೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ. ವಿಶೇಷವಾಗಿ ದೇವತೆಗಳಿಗೆ ಶರನ್ನವರಾತ್ರಿ ಪೂಜೆ, ಹೋಮವನ್ನು ಅರ್ಪಿಸಲಾಗುತ್ತಿದೆ. ನಗರದ ದೇವತೆ ಶ್ರೀ ಮುತ್ಯಾಲಮ್ಮ ದೇವಿಗೆ ನವರಾತ್ರಿಯ ಒಂಭತ್ತನೇ ದಿನದಂದು ಬಂಗಾರದ ಸ್ವರ್ಣಲಂಕಾರ ಮಾಡಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.

ಇಂದು ಬೆಳಗ್ಗೆಯಿಂದಲೇ ದೇವಿಯ ದರ್ಶನ ಪಡೆಯಲು ಭಕ್ತಾಧಿಗಳ ದಂಡು ಹರಿದು ಬರುತ್ತಿದೆ. ಈ ಬಾರಿಯ ನವರಾತ್ರಿಯು ಅಕ್ಟೋಬರ್‌ 3 ರಿಂದ ಪ್ರಾರಂಭವಾಗಿತ್ತು. ಚಾಮುಂಡೇಶ್ವರಿ ದೇವಿಗೆ ಒಂಭತ್ತು ದಿನ ಯಾವ ರೀತಿ‌ ಅಲಂಕಾರ ಮಾಡಿ ಪೂಜಿಸಲಾಗುವುದೋ ಅದೇರೀತಿ ಶ್ರೀ ಮುತ್ಯಾಲಮ್ಮ ದೇವಿಗೂ ಅಲಂಕರಿಸಿ ಪೂಜಿಸಲಾಗುತ್ತಿದೆ.

ದೇವಿಗೆ ಈ ಒಂಭತ್ತು‌ ದಿನಗಳಿಂದಲೂ ವಿಧವಿಧವಾದ ಅಲಂಕಾರ ಮಾಡಲಾಗಿತ್ತು, ಮೊದಲನೇ ದಿನದಂದು ಕರಗದ ಅಲಂಕಾರ, ಎರಡನೇ ದಿನ ಮುತ್ತಿನ ಅಲಂಕಾರ, ಮೂರನೇ ದಿನ ಹೂವಿನ ಅಲಂಕಾರ, ನಾಲ್ಕನೇ ದಿನ ಅರ್ಧನಾದೇಶ್ವರ ಅಲಂಕಾರ, ಐದನೇ ದಿನ ಲಿಂಗದಾಲಂಕಾರ, ಆರನೇ ದಿನ ಚಾಮುಂಡೇಶ್ವರಿ ಅಲಂಕಾರ, ಏಳನೇ ದಿನ ಶಾರದಾಂಬೆ ಅಲಂಕಾರ, ಎಂಟನೇ ದಿನ ನವ ಹೂಗಳ ಅಲಂಕಾರ, ಇಂದು ಸ್ವರ್ಣಾಲಂಕಾರ ಮಾಡಲಾಗಿದೆ. ಈ ಒಂಭತ್ತು ದಿನಗಳ ಕಾಲ ದೇವಿಯ ಒಂಭತ್ತು ರೂಪಗಳನ್ನು ಪೂಜಿಸಲಾಗುತ್ತಿದೆ.

ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ರಂಗೋಲಿ, ದೇವಿಯನ್ನು ಒಲಿಸಿಕೊಳ್ಳಲು ಹಾಡುಗಳನ್ನು ಹಾಡಲಾಗುತ್ತದೆ. ಆ ತಾಯಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಸಿರಿ ಸಂಪತ್ತು ಆಯಸ್ಸು ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ಎಂದು ಪೂಜಿಸಲಾಗುತ್ತಿದೆ…

Ramesh Babu

Journalist

Recent Posts

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲು

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ. ವಿಧೇಯಕ ಅಂಗೀಕಾರವಾಗಲು 326 ಸದಸ್ಯರ ಬೆಂಬಲ‌ ಬೇಕಿತ್ತು.‌ ಒಟ್ಟಾರೆ 489 ಸದಸ್ಯರು ಮತ…

3 hours ago

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಹಾಲಿ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

2016ರಲ್ಲಿ ಧಾರವಾಡದಲ್ಲಿ ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡ ಹತ್ಯೆ ಪ್ರಕರಣದಲ್ಲಿ ದೋಷಿಗಳಾದ ಮಾಜಿ ಸಚಿವ ಹಾಗೂ ಹಾಲಿ…

6 hours ago

ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆ

ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆಯಾಗಿದೆ. ಕ್ಯಾಂಟೀನ್ ನೌಕರ 100ಕ್ಕೂ ಹೆಚ್ಚು ಐಪಿಎಲ್ ಟಿಕೆಟ್‌ಗಳನ್ನು…

9 hours ago

ಲವ್ ಜಿಹಾದ್ ಮತ್ತೊಮ್ಮೆ ಇಡೀ ದೇಶಾದ್ಯಂತ ಮಾಧ್ಯಮಗಳಲ್ಲಿ ಚರ್ಚೆ

ಲವ್ ಜಿಹಾದ್....... ಪ್ರೀತಿ - ಪ್ರೇಮದ ಧರ್ಮ ಯುದ್ಧ..... ಒಂದು ಆತ್ಮಾವಲೋಕನ,..... ನಿಜ ಪ್ರೀತಿಯನ್ನು ಅನುಮಾನದಿಂದ ನೋಡುವ ಅತ್ಯಂತ ಕೆಟ್ಟ,…

16 hours ago

ಪ್ರಸ್ತುತ 114 ತಾಲೂಕುಗಳ 598 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ- ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರುಗಳ…

1 day ago

LKG, UKG ತರಗತಿಗಳಿಗೆ ಉಚಿತ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

2026-27ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ನಿದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು (ವಿಜಯಪುರ) ದಲ್ಲಿ ಕಾರ್ಯನಿರ್ವಹಿಸುತ್ತಿರುವ…

1 day ago