Categories: ಲೇಖನ

ಲವ್ ಜಿಹಾದ್ ಮತ್ತೊಮ್ಮೆ ಇಡೀ ದೇಶಾದ್ಯಂತ ಮಾಧ್ಯಮಗಳಲ್ಲಿ ಚರ್ಚೆ

ಲವ್ ಜಿಹಾದ್…….

ಪ್ರೀತಿ – ಪ್ರೇಮದ ಧರ್ಮ ಯುದ್ಧ…..

ಒಂದು ಆತ್ಮಾವಲೋಕನ,…..

ನಿಜ ಪ್ರೀತಿಯನ್ನು ಅನುಮಾನದಿಂದ ನೋಡುವ ಅತ್ಯಂತ ಕೆಟ್ಟ, ದುಷ್ಟ ಸಮಾಜ ನಿರ್ಮಾಣವಾಗದಿರಲಿ, ಹಾಗೆಯೇ ಪ್ರೀತಿಯ ಮುಗ್ಧತೆ ಧರ್ಮದ ಹೆಸರಿನಲ್ಲಿ ನಾಶವಾಗದಿರಲಿ……

ಈಗಿನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಟಿಸಿಎಸ್ ಕಂಪನಿಯ ಲವ್ ಜಿಹಾದ್ ಪ್ರಕರಣ, ಹಾಗೆಯೇ ಕರ್ನಾಟಕದ ಹುಬ್ಬಳ್ಳಿ ಸೇರಿ ಕೆಲವು ಜಿಲ್ಲೆಗಳ ಘಟನೆಗಳು, ಕೇರಳ ಸೇರಿ ಕೆಲವು ರಾಜ್ಯಗಳ ಕಡೆ ಒಂದಷ್ಟು ಪ್ರಕರಣಗಳು ಹೀಗೆ ಆಗಾಗ ಸುದ್ದಿಗಳು ಬರುತ್ತಿರುತ್ತವೆ.

ಲವ್ ಜಿಹಾದ್ ಮತ್ತೊಮ್ಮೆ ಇಡೀ ದೇಶಾದ್ಯಂತ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಹಾಗೆಯೇ ನಾಸಿಕ್ ಘಟನೆ ಪೊಲೀಸ್ ತನಿಖೆಯ ಹಂತದಲ್ಲಿದೆ. ದಿನದಿಂದ ದಿನಕ್ಕೆ ಒಂದಷ್ಟು ಆತಂಕಕಾರಿ ಸುದ್ದಿಗಳು ಹೊರ ಬರುತ್ತಿವೆ. ಇದರ ಸತ್ಯಾಸತ್ಯತೆಯ ಬಗ್ಗೆ ಚರ್ಚಿಸಲು ಇನ್ನೊಂದಿಷ್ಟು ಸಮಯ ಬೇಕಾಗುತ್ತದೆ. ಆದರೂ ಮೂಲಭೂತವಾಗಿ ಲವ್ ಜಿಹಾದ್ ಬಗ್ಗೆ ಒಂದಷ್ಟು ಆತ್ಮಾವಲೋಕನ ಮತ್ತು ಅಭಿಪ್ರಾಯ….

ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ………

ಇದು ನಿಜವೇ, ಆರೋಪ ಮಾತ್ರವೇ,
ಎಲ್ಲೋ ಅಪರೂಪದ ಸಣ್ಣ ಘಟನೆಗಳೇ, ವ್ಯವಸ್ಥಿತ ಜಾಲವೇ, ಸಹಜ ಪ್ರೀತಿ ಪ್ರೇಮದ ಪ್ರಕರಣಗಳೇ…..

ಮನುಷ್ಯರನ್ನೇ ಧರ್ಮದ ಆಧಾರದ ಮೇಲೆ ಒಡೆದು, ನಮ್ಮದೇ ಶ್ರೇಷ್ಠ ಎಂಬ ಮನೋಭಾವ ಬೆಳೆಸಿ, ಜೊತೆಗೆ ಇತರ ಧರ್ಮಗಳ ವಿರುದ್ಧ ದ್ವೇಷ ಭಾವನೆ ಮೂಡಿಸಿ ಅದರ ನಾಶಕ್ಕೆ ಪ್ರಯತ್ನಿಸುತ್ತಾ ಇರುವ ಧಾರ್ಮಿಕ ಮುಖಂಡರುಗಳು ಹೆಚ್ಚಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಖಚಿತವಾಗಿ ಏನನ್ನಾದರೂ ಹೇಳುವುದು ಕಷ್ಟ. ಭಾರತದಲ್ಲಿ ರಾಜಕೀಯ ಕಾರಣದಿಂದಾಗಿ ಸತ್ಯ ಮತ್ತು ಸುಳ್ಳುಗಳ ನಡುವಿನ ಅಂತರ ತುಂಬಾ ಕಡಿಮೆಯಾಗಿದೆ.

ಲವ್ ಜಿಹಾದ್ ಎಂಬುದು ನನಗೆ ಅರ್ಥವಾಗಿರುವುದೇನೆಂದರೆ ,
ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಸಿ ಅಥವಾ ಪ್ರೀತಿಯ ನಾಟಕವಾಡಿ ಅವರನ್ನು ಮದುವೆಯಾಗಿ, ಅವರನ್ನು ಮತ್ತು ಅವರ ಮಕ್ಕಳನ್ನು ಇಸ್ಲಾಮೀಕರಣ ಮಾಡಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಒಳಸಂಚು ಎಂದು.

ಇದು ನಿಜವೇ ಅಥವಾ ಹಿಂದೂ ಮೂಲಭೂತವಾದಿಗಳ ಕುತಂತ್ರ ಆರೋಪವೇ ಅಥವಾ ಓಟ್ ಬ್ಯಾಂಕಿನ ರಾಜಕೀಯವೇ ?
ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಏಕೆಂದರೆ ಪ್ರೀತಿ ಮತ್ತು ಅಪರಾಧಗಳು ಸಾಮಾನ್ಯ ಗ್ರಹಿಕೆಗೆ ಸ್ಪಷ್ಟವಾಗಿ ನಿಲುಕುವುದಿಲ್ಲ.

ನಿಜವಾಗಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧ ಮತ್ತು ದೇಶದ್ರೋಹ ಹಾಗು ಮಾನವ ದ್ರೋಹ. ಸುಳ್ಳಾಗಿದ್ದಲ್ಲಿ ಆ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ತಮ್ಮ ಸ್ವಾರ್ಥ ಸಾಧನೆಗೆ ದೇಶ ಮತ್ತು ಧರ್ಮವನ್ನು ಉಪಯೋಗಿಸಿಕೊಳ್ಳುವವರೂ ದೇಶ ಮತ್ತು ಧರ್ಮ ದ್ರೋಹಿಗಳೇ.

ಆದರೆ ಮುಖ್ಯ ಪ್ರಶ್ನೆ ಎಂದರೆ……,.

ಭಾರತೀಯ ಹಿಂದೂ ಯುವತಿಯರು ಪ್ರೀತಿಯ ನಾಟಕವಾಡುವ ವ್ಯಕ್ತಿಗಳ ಆಕರ್ಷಣೆಗೆ ಸುಲಭವಾಗಿ ಬಲಿಯಾಗುವಷ್ಟು ದುರ್ಬಲರೇ ? ಅಥವಾ ನಮ್ಮ ಸಾಮಾಜಿಕ ವ್ಯವಸ್ಥೆ ನಮ್ಮ ಹೆಣ್ಣುಮಕ್ಕಳನ್ನು ಅಷ್ಟೊಂದು ಕೆಳಮಟ್ಟದಲ್ಲಿ ಬೆಳೆಸಿದೆಯೇ ? ಅಥವಾ ನಿಜ ಪ್ರೀತಿ ಮತ್ತು ಕಪಟತೆ ಅರಿಯದಷ್ಟು ಮುಗ್ಧರೇ ? ಅಥವಾ ಮಾತು, ರೂಪ, ಬಟ್ಟೆ, ಕಾರು, ಹಣದ ಆಸೆಗೆ ಸುಲಭವಾಗಿ ಮರುಳಾಗುವ ಚಂಚಲೆಯರೆ ? ( ಬಲವಂತವಾಗಿ ಅಥವಾ ಒತ್ತಾಯಪೂರ್ವಕವಾಗಿ ಪ್ರಯತ್ನಿಸುವುದು ಅತ್ಯಾಚಾರಕ್ಕೆ ಸಮ. ಅದು ಈ ವ್ಯಾಪ್ತಿಗೆ ಒಳಪಡುವುದಿಲ್ಲ)

ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ……….

ಮೂಲಭೂತವಾಗಿ ಭಾರತದ ಎಲ್ಲಾ ವರ್ಗದ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ಪ್ರೀತಿಗೆ ಅತ್ಯುನ್ನತ ಸ್ಥಾನವಿದೆ. ಪ್ರೀತಿ ಮಾಡುವುದಲ್ಲ ಅದು ಆಗುವುದು – ತನಗರಿವಿಲ್ಲದೆ ಘಟಿಸುವುದು, ಅನುಭವಿಸುವುದು.
ಪ್ರೀತಿ ಎಂಬುದು ಪ್ರೀತಿ, ಪ್ರೇಮ, ಪ್ರಣಯ, ತ್ಯಾಗ, ಸಹಕಾರ, ಆಕರ್ಷಣೆ, ಅವಲಂಬನೆ, ಹೊಂದಾಣಿಕೆ, ಜವಾಬ್ದಾರಿ ಮುಂತಾದ ಅನೇಕ ಅಂಶಗಳ ಹೃದಯದ ಭಾಷೆ, ಭಾವನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಸಮ್ಮಿಲನ.
ಕೇವಲ ಹಣ, ಅಧಿಕಾರ, ಸೌಂದರ್ಯ, ಮಾತಿನ ಕಲೆಗಾರಿಕೆ ಮುಂತಾದವುಗಳಿಗೆ ಒಲಿಯುವುದು ಒಂದು ಮೋಹವೇ ಹೊರತು ನಿಜ ಪ್ರೀತಿಯಲ್ಲ….‌

ಚೆಂಡು ಈಗ ನಮ್ಮ ಅಂಗಳದಲ್ಲೇ ಇದೆ, ನಾವೇ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು….

ಪ್ರೀತಿಸುವ ಮನಸ್ಸುಗಳನ್ನು ಮುಗ್ಧ ಮನಸ್ಸು ಎಂದು ಸಮಾಧಾನ ಮಾಡಿಕೊಳ್ಳಬಾರದು. ಅದು ಆಸೆ, ಅಜ್ಞಾನ, ಆಕರ್ಷಣೆ ಅಥವಾ ನಿಜ ಪ್ರೀತಿಯೇ ಆಗಿರಬೇಕೆ ಹೊರತು ಮುಗ್ಧತೆಯಲ್ಲ.

ಒಂದುವೇಳೆ ಲವ್ ಜಿಹಾದ್ ಶತ್ರುಗಳ ಪ್ರಬಲ ಅಸ್ತ್ರವೇ ಆಗಿದ್ದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆ ದೃಢವಾಗಿದ್ದಲ್ಲಿ ಭಯಪಡುವ ಅವಶ್ಯಕತೆಯೇ ಇಲ್ಲ. ಬಲವಂತವಾದಲ್ಲಿ ಮಾತ್ರ ಅದು ಕಾನೂನು ಸುವ್ಯವಸ್ಥೆಯ ಸಮಸ್ಯೆ.

ಅದಕ್ಕಾಗಿ ಎಲ್ಲಾ ಮುಸ್ಲಿಮರನ್ನು ತೆಗಳಿ ಅವರನ್ನು ಮುಖ್ಯವಾಹಿನಿಯಿಂದ ದೂರತಳ್ಳಿ ಮತ್ತಷ್ಟು ಅವಮಾನಕ್ಕೀಡುಮಾಡುವುದೂ ಸರಿಯಲ್ಲ. ಧರ್ಮಕ್ಕಾಗಿ
ಎಳೆಯ ಪ್ರೀತಿಯ ಮನಸ್ಸುಗಳನ್ನು ನೋಯಿಸುವುದು ತರವಲ್ಲ.

ಪ್ರೀತಿಯನ್ನು ಪ್ರೀತಿಯಾಗೇ ಉಳಿಸಿಕೊಳ್ಳಲು ಭಾರತೀಯ ಮನಸ್ಸುಗಳು ಪಣ ತೊಡೋಣ.
ಎಲ್ಲಾ ಧರ್ಮಗಳ ಮೂಲಭೂತವಾದಿ ಕ್ರೂರಿಗಳ ಕೈಯಲ್ಲಿ ಪ್ರೀತಿ ಬಂಧಿಯಾಗಿ ನಲುಗದಂತೆ ನೋಡಿಕೊಳ್ಳೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

‘ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು’

ದೊಡ್ಡಬಳ್ಳಾಪುರ: ಇಂದಿನ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಶಿಕ್ಷಕರಿಗೆ ಜ್ಞಾನವಷ್ಟೇ ಸಾಕಾಗುವುದಿಲ್ಲ. ಅಪಾರ ತಾಳ್ಮೆ, ಸಹನೆ, ನಯ-ವಿನಯ ಹಾಗೂ ಮಕ್ಕಳ ಮನಸ್ಸನ್ನು…

14 hours ago

ಬೆಸ್ಕಾಂ ವಿರುದ್ಧ ಒಣ ಮೆಣಸಿನಕಾಯಿ ಹೊಗೆ ಹೋರಾಟಕ್ಕೆ ರೈತರ ನಿರ್ಧಾರ

ಕೋಲಾರ : ಬರ ಹಾಗೂ ಬಿಸಿಲಿನ ತಾಪದಿಂದ ರೈತರ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ…

15 hours ago

ಸೆ.7ರಂದು ದೊಡ್ಡಬಳ್ಳಾಪುರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ

ದೊಡ್ಡಬಳ್ಳಾಪುರ: ನಗರದಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರಂದು ದೊಡ್ಡಬಳ್ಳಾಪುರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 66/11…

21 hours ago

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ

ಚಿಕ್ಕನಾಯಕನಹಳ್ಳಿ : ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸುವಲ್ಲಿ ಹಾಗೂ ಆರ್ಥಿಕವಾಗಿ ಸಬಲಗೊಳಿಸುವಲ್ಲಿ 'ವಿಬಿ-ಜಿ ರಾಮ್ ಜಿ' ಯೋಜನೆಯು ಗ್ರಾಮಸ್ಥರಿಗೆ…

1 day ago

ಬೆನಕನಹಳ್ಳ ಅಭಿವೃದ್ಧಿಗೆ ಮೂಲಸೌಕರ್ಯ ಅಗತ್ಯ: ನಿಸರ್ಗ ನಾರಾಯಣಸ್ವಾಮಿ

ದೊಡ್ಡಬಳ್ಳಾಪುರ: ಪುರಾತನ ದೇವಾಲಯಗಳು, ಧಾರ್ಮಿಕ ಮಹತ್ವ ಹಾಗೂ ಪ್ರಕೃತಿ ಸೌಂದರ್ಯದ ಸಂಗಮವಾಗಿರುವ ಬೆನಕನಹಳ್ಳವನ್ನು ಸಮರ್ಪಕ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿದರೆ ಪ್ರಮುಖ ಧಾರ್ಮಿಕ…

1 day ago

ಮೇಕೆ ವಿಚಾರಕ್ಕೆ ಗಲಾಟೆ; ವ್ಯಕ್ತಿಯ ಕೊಲೆ: ಮೂವರಿಗೆ ಶಿಕ್ಷೆ ಮುಖ್ಯ ಆರೋಪಿಗೆ ಜೀವಾವಧಿ ಶಿಕ್ಷೆ, ಇಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ

ದೊಡ್ಡಬಳ್ಳಾಪುರ: ಮೇಕೆ ಮಗುಗೆ ಗುದ್ದಿದ ವಿಚಾರವಾಗಿ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿರುವ…

1 day ago