ನನಗೆ ರಾಜಕೀಯದ ಗೀಳು ಬರಬೇಕಾದರೆ ಪ್ರೊ. ನಂಜುಂಡಸ್ವಾಮಿ ಹಾಗೂ ಪ. ಮಲ್ಲೇಶ್ ಕಾರಣ. ಅವರು ನನ್ನಂಥ ಯುವಕರಿಗೆ ಮಾರ್ಗದರ್ಶಕರಾಗಿದ್ದರು ಹಾಗೂ ನಮ್ಮ ಏಳಿಗೆಯನ್ನು ಬಯಸುತ್ತಿದ್ದರು. ಬದ್ಧತೆಯ ಪ್ರಾಮಾಣಿಕ ರಾಜಕಾರಣ ಮಾಡಬೇಕು ಎಂದು ತಿಳಿಸುತ್ತಿದ್ದರು. ರಾಜಕೀಯವಾಗಿ ನಮ್ಮ ನಡುವೆ ಆತ್ಮೀಯ ಸ್ನೇಹವಿತ್ತು. ತಪ್ಪು ಮಾಡಿದ್ದನ್ನು ಹೇಳುವ ಎದೆಗಾರಿಕೆ ಅವರಿಗೆ ಇತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ.ಮಲ್ಲೇಶ್ ರಚಿಸಿರುವ ‘ಬುದ್ಧ ನಾಗಾರ್ಜುನರ ಶೂನ್ಯಯಾನ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಒಮ್ಮೆ ಮಲ್ಲೇಶ್ ಅವರು ಊಟಕ್ಕೆ ಕರೆದಿದ್ದ ಸಂದರ್ಭದಲ್ಲಿ ಜೋರು ಜಗಳ ನಡೆದರೂ ಭಂಡತನದಿಂದ ಊಟ ಮುಗಿಸಿಯೇ ಹೊರಬಂದಿದ್ದೆ. ಮರುದಿನವೇ ತಮ್ಮನ್ನು ಕರೆದು ಮಾತನಾಡಿಸುತ್ತಿದ್ದ ನಿರ್ಮಲ ಹೃದಯದ ಮಲ್ಲೇಶ್ ಅವರು ಮನಸ್ಸಿನಲ್ಲಿ ಯಾವುದೇ ದ್ವೇಷ ಅಸೂಯೆಯನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಸಮಾಜದಲ್ಲಿ ಯಾರೂ ಅನ್ಯಾಯಕ್ಕೆ ಒಳಗಾಗಬಾರದು. ಯಾರೇ ಅನ್ಯಾಯಕ್ಕೊಳಗಾದರೂ ಅದರ ವಿರುದ್ಧ ಹೋರಾಟ ಮಾಡುವವರ ಪೈಕಿ ಮಲ್ಲೇಶ್ ಮುಂಚೂಣಿಯಲ್ಲಿರುತ್ತಿದ್ದರು ಎಂದರು.
1971 ರಲ್ಲಿ ಮಲ್ಲೇಶ್ ಅವರ ಪರಿಚಯವಾಗಿತ್ತು. ಪ್ರತಿ ಸೋಮವಾರ ಮಹಾರಾಜ ಕಾಲೇಜಿನ ಕ್ಯಾಂಟೀನಿನಲ್ಲಿ ನಡೆಯುತ್ತಿದ್ದ ಸ್ಟಡಿ ಸರ್ಕಲ್ ಗೆ ತೇಜಸ್ವಿ, ಅನಂತಮೂರ್ತಿ, ಟಿ.ಎನ್. ನಾಗರಾಜ್, ಮಲ್ಲೇಶ್ ಸೇರಿದಂತೆ ಇತರ ಪ್ರಮುಖ ಸಾಹಿತಿಗಳು ಭೇಟಿ ನೀಡುತ್ತಿದ್ದರು ಎಂದು ಹೇಳಿದರು.
ಜೀವನದುದ್ದಕ್ಕೂ ಹೋರಾಟಗಳನ್ನು ಮಾಡಿಕೊಂಡು ಬಂದ ಮಲ್ಲೇಶ್ ಅವರು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಂವಿಧಾನ, ಎಲ್ಲರಿಗೂ ನ್ಯಾಯ ಸಿಗಬೇಕೆಂದು ಶ್ರಮಿಸುತ್ತಿದ್ದರು. ಎಂದಿಗೂ ಜಾತಿ ಮಾಡಲಿಲ್ಲ. ಜಾತ್ಯಾತೀತವಾಗಿ ಎಲ್ಲರನ್ನು ನೋಡುತ್ತಿದ್ದರು. ಅವರ ಬಳಿ ಹೋಗುತ್ತಿದ್ದವರೆಲ್ಲಾ ಕೆಳಜಾತಿಯವರೇ ಆಗಿರುತ್ತಿದ್ದರು ಎಂದರು.
ದೇಶ ಒಟ್ಟಾಗಿ ಉಳಿಯಬೇಕಾದರೆ, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ನೆಲೆಯೂರಬೇಕಾದರೆ, ದ್ವೇಷದ ರಾಜಕಾರಣ ಹೋಗಬೇಕಾದರೆ ನನ್ನಂತವರೇ ಪುನ: ಮುಖ್ಯಮಂತ್ರಿಗಳಾಗಬೇಕೆಂದು ರಾಹುಲ್ ಗಾಂಧಿ ಸೇರಿದಂತೆ ಮಲ್ಲೇಶ್ ಕೂಡ ಬಯಸಿದ್ದರು. ಖಡಕ್ ಆಗಿ ಮಾತನಾಡುತ್ತಿದ್ದ ಮಲ್ಲೇಶ್, ಸಮಾಜದಲ್ಲಿ ಬದಲಾವಣೆಗೆ ಜೆಪಿ ಹೇಳಿದಂತೆ ಸಂಪೂರ್ಣ ಕ್ರಾಂತಿ ಆಗುವ ಕಡೆಗೆ ತುಡಿತವಿತ್ತು. ಎಷ್ಟೇ ತೊಂದರೆಯಿದ್ದರೂ ಹೋರಾಟ ನಿಲ್ಲಿಸುತ್ತಿರಲಿಲ್ಲ. ರಾಜಕೀಯವಾಗಿ ಮೇಲೆ ಬರುವವರಿಗೆ ಪ್ರೋತ್ಸಾಹ ಮಾಡುತ್ತಿದ್ದರು. ಹೇಳಿದಂತೆ ನಡೆದುಕೊಳ್ಳುವ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.
ಮಲ್ಲೇಶ್ ಅವರು ಬಹಳಷ್ಟು ಪುಸ್ತಕಗಳನ್ನು ಬರೆಯಬಹುದಿತ್ತು. ಹೋರಾಟಕ್ಕೆ ಹೆಚ್ಚು ಸಮಯ ನೀಡಿದ್ದರಿಂದ ಹೆಚ್ಚು ಪುಸ್ತಕಗಳನ್ನು ಬರೆಯಲು ಸಾಧ್ಯವಾಗಲಿಲ್ಲ. ಸಾಹಿತ್ಯಾಸಕ್ತಿ, ಬರೆಯುವ ಆಸಕ್ತಿ ಇದ್ದರೂ, ಪುಸ್ತಕ ಬರೆಯುವಾಗ ಸಮಾಜವಾದ, ಸಂಸ್ಕೃಂತಿ, ಭಾಷೆ ಇವುಗಳ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದರು ಎಂದರು.
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…