ನಗು ವರ್ಧಿಸುವ ಶಸ್ತ್ರಚಿಕಿತ್ಸೆ ತಂದ ಆಪತ್ತು: ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದ ಭಾವಿ ವರ ಮಸಣಕ್ಕೆ

ನಗು ವರ್ಧಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ನ 28 ವರ್ಷದ ಲಕ್ಷ್ಮಿನಾರಾಯಣ ವಿಂಜಮ್ ಸಾವನ್ನಪ್ಪಿರುವ ವ್ಯಕ್ತಿ. ಲಕ್ಷ್ಮಿನಾರಾಯಣ ವಿಂಜಮ್  ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಹಸೆಮಣೆ ಏರಲು ವಾರವಷ್ಟೇ ಬಾಕಿ ಇತ್ತು. ಹೀಗಿರುವಾಗ, ಮದುವೆಗೆ ಮುಂಚಿತವಾಗಿ ತನ್ನ ಮುಖದ ನಗುವನ್ನು ಹೆಚ್ಚಿಸುವ ಶಸ್ತ್ರ ಚಿಕಿತ್ಸೆಗೆ ದಂತ ಚಿಕಿತ್ಸಾಲಯಕ್ಕೆ ದಾಖಲಾದ ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯಲ್ಲಿ ನೀಡಿದ ಅನಸ್ತೇಸಿಯಾ ಓವರ್‌ಡೋಸ್‌ನಿಂದ ತನ್ನ ಮಗ ಸಾವಿಗೀಡಾಗಿದ್ದಾನೆ ಎಂದು ಲಕ್ಷ್ಮಿನಾರಾಯಣ ವಿಂಜಮ್ ಅವರ ತಂದೆ ರಾಮುಲು ವಿಂಜಂ ಆರೋಪಿಸಿದ್ದಾರೆ.

Ramesh Babu

Journalist

Recent Posts

ಬಿರುಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಬೇವಿನ ಮರ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಸಮೀಪ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಬೃಹತ್ ಬೇವಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ…

9 minutes ago

ರಾಜ್ಯದಲ್ಲಿ ಮಳೆ ಅಬ್ಬರದ ಮುನ್ಸೂಚನೆ: ಮುಂದಿನ 4–5 ದಿನ ಭಾರೀ ವರ್ಷಧಾರೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ.…

4 hours ago

ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ….

ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ.... ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ನನ್ನ ತಾಯಿ ಭಾಷೆಯ ಬಗ್ಗೆ ಒಂದಷ್ಟು ಅನಿಸಿಕೆ............ ಸಾಮಾಜಿಕ…

5 hours ago

ಕೃಷಿಯಲ್ಲೂ ಲಾಭವಿದೆ ಎಂಬ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ ಹೊಸಪಾಳ್ಯ

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಲಾಭ-ನಷ್ಟ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಸದಾ ನಷ್ಟದ ಬಗ್ಗೆಯೇ ಮಾತನಾಡುವ ಬದಲು ಕೃಷಿಯಲ್ಲೂ ಲಾಭವಿದೆ…

16 hours ago

ರಾಮನಗರ, ಕನಕಪುರಕ್ಕೆ ಮಾತ್ರ ಡಿಕೆಶಿ ಸಿಎಂ – ಆರ್. ಅಶೋಕ್: ‘ಕೈ’ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು ಅಧಿಕಾರ ನಡೆಸುತ್ತಿದೆ – ಬಿ.ವೈ ವಿಜಯೇಂದ್ರ ಆರೋಪ

ದೊಡ್ಡಬಳ್ಳಾಪುರ: ಕನಕಪುರದಲ್ಲಿ ಮಾತ್ರ ರೈತರಿಗೆ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಆದರೆ ಬಿಡದಿ, ದೊಡ್ಡಬಳ್ಳಾಪುರ…

22 hours ago

ದೊಡ್ಡಬಳ್ಳಾಪುರ: ಕಾರು–ಬೈಕ್ ಭೀಕರ ಅಪಘಾತ; ದಂಪತಿ ಸಾವು

ದೊಡ್ಡಬಳ್ಳಾಪುರ: ನಾಗಸಂದ್ರ ಸಮೀಪದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ…

1 day ago