ಕೇರಳ: ತಿರುರ್ನ 19 ವರ್ಷದ ಸಫಾನಾ ಎಂಬ ಯುವತಿ ತನ್ನ ಪ್ರಿಯಕರನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಸ್ನೇಹಿತರೊಂದಿಗೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾಳೆ.
ಸಫಾನಾಳನ್ನು ಹಿಂಬಾಲಿಸಿಕೊಂಡು ಆಕೆಯ ಪ್ರಿಯಕರ ತಿರುರ್ಗೆ ಬಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಆತನೊಂದಿಗೆ ಮಾತನಾಡಲು ಸಫಾನಾ ತನ್ನ ಸ್ನೇಹಿತರ ಸಹಾಯ ಪಡೆದಿದ್ದಾಳೆ. ಬಳಿಕ ಸಫಾನಾ ಸೇರಿದಂತೆ ಐವರು ಸೇರಿ ಪ್ರಿಯಕರನನ್ನು ಅಪಹರಿಸಲು ಸಂಚು ರೂಪಿಸಿದ್ದಾರೆ.
ತಿರುರ್ ರೈಲು ನಿಲ್ದಾಣದ ಸಮೀಪ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಭೇಟಿಯಾಗಲು ಕರೆಸಿಕೊಂಡಿದ್ದಾರೆ.
ಬಳಿಕ ಇಬ್ಬರನ್ನೂ ಬಲವಂತವಾಗಿ ಕಾರಿನಲ್ಲಿ ಕೂರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಮುಂಜಾನೆ 1:30ರ ಸುಮಾರಿಗೆ ಪ್ರಿಯಕರನನ್ನು ತಾಳೆಪಾಲಂ ನದಿಯ ದಡದಲ್ಲಿ ಬಿಟ್ಟು ಹೋಗಿದ್ದಾರೆ.
ಪ್ರಿಯಕರನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಇಬ್ಬರು ಪುರುಷ ಆರೋಪಿಗಳ ವಿರುದ್ಧ ಮಾದಕ ವಸ್ತು ಕಳ್ಳಸಾಗಣೆ, ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣಗಳ ಹಿಂದಿನ ಅಪರಾಧ ದಾಖಲೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು: ಸಫಾನಾ, ನದಿಯಾ, ರಬೀಬಾ, ಇರ್ಷಾದ್ ಮತ್ತು ಅಜರುದ್ದೀನ್.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕುಣಿಗಲ್, ನ.15: ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ತಂದೆಯೇ ತನ್ನ 16 ವರ್ಷದ ಮಗನನ್ನು ಹಾರೆಕೋಲಿನಿಂದ ಹೊಡೆದು…
ದೊಡ್ಡಬಳ್ಳಾಪುರ: ತಿಂಗಳ ಸಂಬಳಕ್ಕಾಗಿ ಮತ್ತೊಬ್ಬರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಕೃಷಿ ಭೂಮಿಯಲ್ಲೇ ಹೊಸ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕು…
ದೊಡ್ಡಬಳ್ಳಾಪುರ: ನಗರದ ಮಾರುತಿನಗರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಸಿಡಿಸಿ (ಸೆಂಟರ್ ಫಾರ್ ಕ್ರಾನಿಕ್ ಡಿಸೀಸ್ ಕಂಟ್ರೋಲ್) ಸಂಸ್ಥೆಯ ಸಹಯೋಗದೊಂದಿಗೆ ಉಚಿತ…
ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹26.36 ಲಕ್ಷ ನಗದು,…
ಮಕ್ಕಳ ದಿನಾಚರಣೆಯ ಅಂಗವಾಗಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನವೀಕರಣಗೊಂಡ ಹತ್ತು ಅಂಗನವಾಡಿ ಕೇಂದ್ರ ಹಾಗೂ ಒಂದು ಶಾಲೆಯನ್ನು ಕೇಳಚಂದ್ರ ಪ್ರತಿಷ್ಠಾನದ…
ದೊಡ್ಡಬಳ್ಳಾಪುರ: ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸುವುದು ಹಾಗೂ ರಾಜಕೀಯ ಚಪಲಕ್ಕಾಗಿ ಮನಬಂದಂತೆ ಮಾತನಾಡುವುದನ್ನು ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡರು…