ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ

ಬೆಂಗಳೂರು: ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಗಣಪತಿ ಪ್ರಶಾಂತ್ ಎಂ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುಧಾ ಜಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಅಂಗವಾಗಿ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶ, ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ಒದಗಿಸುವ ವ್ಯವಸ್ಥೆ ಹಾಗೂ ನ್ಯಾಯವನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ವಹಿಸುತ್ತಿರುವ ಪಾತ್ರದ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Ramesh Babu

Journalist

Recent Posts

ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ

ದೊಡ್ಡಬಳ್ಳಾಪುರ: ವಡ್ಡರಹಳ್ಳಿ ಮತ್ತು ಮಾಕಳಿದುರ್ಗ ರೈಲು ನಿಲ್ದಾಣಗಳ ನಡುವಿನ ಏಳುಕಮಾನು ರೈಲ್ವೆ ಸೇತುವೆ ಸಮೀಪದ ಘಾಟಿ ಗೋಶಾಲೆ ಬಳಿ ರೈಲ್ವೆ…

1 hour ago

ಹೆದ್ದಾರಿ ದಾಟುತ್ತಿದ್ದ ವೃದ್ಧೆಗೆ ಕಾರು ಡಿಕ್ಕಿ: ಡಿಕ್ಕಿ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯ ಕೆಸ್ತೂರು ಗೇಟ್ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ 70 ವರ್ಷದ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ…

3 hours ago

ವಾರದೊಳಗೆ ತುಮಕೂರಿಗೆ, ವರ್ಷದೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು- ಸಚಿವ ಎನ್. ಚಲುವರಾಯಸ್ವಾಮಿ

ಎತ್ತಿನಹೊಳೆ ಯೋಜನೆ ಸಾಧ್ಯವೇ ಇಲ್ಲ ಎನ್ನುತ್ತಿದ್ದವರಿಗೆ ಈಗ ಉತ್ತರ ನೀಡುವ ಸಮಯ ಬಂದಿದೆ. ತುಮಕೂರಿಗೆ ವಾರದೊಳಗೆ ನೀರು ಹರಿಸಿ, ವರ್ಷಕ್ಕೂ…

3 hours ago

ಮೆಣಸಿನಕಾಯಿ ಬೆಳೆಯಲ್ಲಿ ಕಪ್ಪು ಥ್ರಿಪ್ಸ್ ನಿಯಂತ್ರಣಕ್ಕೆ ಪರಿಸರ ಸ್ನೇಹಿ ಕ್ರಮ

  ದೊಡ್ಡಬಳ್ಳಾಪುರ: ಮೆಣಸಿನಕಾಯಿ ಬೆಳೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಪ್ಪು ಥ್ರಿಪ್ಸ್ ಕೀಟದ ಬಾಧೆ ಹೆಚ್ಚಾಗುತ್ತಿದ್ದು, ಇದರಿಂದ ಶೇ.60ರಷ್ಟು ಇಳುವರಿ ನಷ್ಟ…

4 hours ago

ನ.21 ರಂದು ಜಿಲ್ಲೆಯಲ್ಲಿ ‘ಪ್ರಜಾಸೇವೆ’ ಆಂದೋಲನ ಸಭೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗರೀಕರಿಂದ ಕುಂದುಕೊರತೆಗಳ ಮನವಿ ಸ್ವೀಕರಿಸಿ, ಸ್ಥಳದಲ್ಲೇ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಜಾ…

6 hours ago

ಬಗರ್ ಹುಕುಂ ದಾಖಲೆಗಾಗಿ ಕಚೇರಿಗೆ ಅಲೆದು ಸುಸ್ತು: ತಹಶೀಲ್ದಾರ್ ಕಚೇರಿ ಎದುರೇ ಗೋಣಿಚೀಲ ಹೊದ್ದು ಮಲಗಿದ ವೃದ್ಧ ರೈತ! ಮಧ್ಯರಾತ್ರಿ ಓಡೋಡಿ ಬಂದ ತಹಶೀಲ್ದಾರ್..!!

ತುಮಕೂರು: ಜಮೀನಿನ ದಾಖಲೆ ಪಡೆಯಲು ದಿನವಿಡೀ ತಹಶೀಲ್ದಾರ್ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೇಸತ್ತ ವೃದ್ಧ ರೈತರೊಬ್ಬರು ಕಚೇರಿ ಎದುರೇ…

7 hours ago