Categories: ಕೋಲಾರ

ನಗರಸಭೆ ಸಾಮಾನ್ಯ ಸಭೆ: ಆಡಳಿತಾಧಿಕಾರಿ ಅವಧಿಯಲ್ಲಿನ ಬಿಲ್ ಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ತೀರ್ಮಾನ

ಕೋಲಾರ: ನಗರಸಭೆಯ ನೂತನ ಸಮಿತಿ ಆಯ್ಕೆಗೂ ಮೊದಲಿಂದ ಆಡಳಿತಾಧಿಕಾರಿ ಅವಧಿಯಲ್ಲಿ ನಗರದಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಬಿಲ್ ಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ತನಿಖೆ ನಡೆಸಲು ಲೋಕಾಯುಕ್ತಗೆ ದೂರು ನೀಡಲು ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ನಿರ್ಧರಿಸಲಾಯಿತು.

ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ತಮ್ಮ ತಮ್ಮ ವಾರ್ಡ್ ಗಳಲ್ಲಿ ಏನು ನಡೆದಿದೆ ಅಂತ ನಮಗೆ ಮಾಹಿತಿನೇ ಇರಲ್ಲ ನಗರಸಭೆಯ ಸದಸ್ಯರಿಗೆ ಗೊತ್ತಿಲ್ಲ ಆದರೂ ವಾರ್ಡ್ ಗೆ ಸಂಬಂಧಿಸಿದಂತೆ ಬಿಲ್ ಪಾವತಿಯಾಗಿದೆ ಇದಕ್ಕೆ ಯಾರು ಹೊಣೆ ಇದನ್ನು ಈಗೇ ಬಿಟ್ಟರೆ ಮುಂದೆ ಇಂತಹ ಅಕ್ರಮ ಬಿಲ್ ಗಳು ಹೆಚ್ಚಾಗುತ್ತದೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಲೋಕಾಯುಕ್ತ ಸಂಸ್ಥೆಯಿಂದ ತನಿಖೆಯಾಗಲೇ ಬೇಕು ಮುಂದೆ ಯಾವುದೇ ಕಾರಣಕ್ಕೂ ಅಧ್ಯಕ್ಷರು ಪರಿಶೀಲನೆ ನಡೆಯದೆ ಬಿಲ್ ಪಾವತಿ ಮಾಡಬಾರದು ಎಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ನಗರಸಭೆ ಅಧಿಕಾರಿಗಳು ಎಂದರೆ ನೀವು ಏನು ಅಂದುಕೊಂಡಿದ್ದರಾ ನೀವೇನೇ ಸುಪ್ರೀಂ ಅನ್ನೊದನ್ನು ಬಿಡಿ ನೀವು ಕುದುರೆ ಅಲ್ಲ ಬರೀ ಬಾಲ ಅಷ್ಟೇ ಸಾರ್ವಜನಿಕರು ಕೆಲಸವಾಗಿಲ್ಲ ಎಂದರೆ ಯಾರು ಅಧಿಕಾರಿಗಳ ಮನೆ ಬಾಗಿಲು ತಟ್ಟಲ್ಲ ನಗರಸಭೆ ಸದಸ್ಯರ ಮನೆ ಬಾಗಿಲು ತಟ್ಟೋದು ಅಧಿಕಾರಿಗಳು ನಗರಸಭೆ ಕಚೇರಿಯೊಳಗೆ ಕುಳಿತುಕೊಂಡು ಬಿಲ್ ಗಳು ಮಾಡಿಕೊಂಡು ಇದ್ದುಬಿಡಿ ಎಂದರು.

ನಗರಕ್ಕೆ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಸಂಬಂಧ ತಮಿಳುನಾಡಿನ ಏಜೆನ್ಸಿಯವರು ಬಂದಿದ್ದರು. ನೆಲ ‌ಅಗೆಯುವಾಗ ಕೇಬಲ್ ಅಥವಾ ಪೈಪ್ ಗೆ ಧಕ್ಕೆಯಾದರೆ ತಾವೇ ಸರಿಪಡಿಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಹೇಳಿದ್ದೇನೆ.‌ ಚರ್ಚೆ ಹಂತದಲ್ಲಿದ್ದು, ನಗರಸಭೆ ಸದಸ್ಯರ ಜೊತೆ ಚರ್ಚೆ ಮಾಡಬೇಕು. ಒಪ್ಪಂದ ಇಲ್ಲದಿದ್ದರೆ ಕೊಡಲ್ಲ ಎಂದು ಈಗಾಗಲೇ ಅವರಿಗೆ ಹೇಳಲಾಗಿದೆ ಎಂದರು.

ನಗರಸಭೆ ಸದಸ್ಯ ಮುರಳಿಗೌಡ ಮಾತನಾಡಿ ನಗರಕ್ಕೆ ನೀರು ಸರಬರಾಜು ಮಾಡುವ ಅಮ್ಮೇರಹಳ್ಳಿ ಕೆರೆಯಿಂದ ವಾರ್ಡ್‌ಗಳಿಗೆ ನೀರು ಬರತ್ತಾ ಇಲ್ಲ ಆದರೂ ಬಿಲ್ ಗಳು ಆಗಿವೆ ವರ್ಷಕ್ಕೆ ಎಷ್ಟು ಬಾರಿ ಪಂಪ್ ಹೌಸ್ ರಿಪೇರಿ ಅಂತ ಬಿಲ್ ಮಾಡತ್ತಾರೆ ಪರಿಶೀಲನೆ ಮಾಡಬೇಕು ಬಸವನತ್ತದಲ್ಲಿರುವ ನಗರಸಭೆಗೆ‌ ಸೇರಿದ ಜಮೀನು ಸರ್ವೇ‌ ಮಾಡಿ ಎಂದು‌ ಕೋರಿದರು‌.

ಸದಸ್ಯ ಪ್ರವೀಣ್ ಗೌಡ ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ನಿವೇಶನಗಳು ಇವೆ ಹೊರಗಡೆ‌ ಪ್ರದೇಶದ ಎಷ್ಟು ಜಮೀನು ನಗರಸಭೆಗೆ ಮಂಜೂರು ಆಗಿದೆ ಮಾಹಿತಿ ಕೊಡಿ ಖಾದ್ರಿಪುರದಲ್ಲಿ ಎರಡು ಸರ್ವೇ ನಂಬರ್ ಗಳಲ್ಲಿ ನಗರಸಭೆಯ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾತೆ‌ ಮಾಡಿಕೊಡಲಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ‌ ಪ್ರಯೋಜನವಾಗಿಲ್ಲ. ಬಡವರಿಗೆ‌ ವಿತರಿಸಲು ಮೀಸಲಿರುವ ಜಾಗ ಉಳಿಸಿಕೊಳ್ಳಿ ವಶಕ್ಕೆ ಪಡೆದು ಬೇಲಿ ಹಾಕಿ ನಗರಸಭೆ ವ್ಯಾಪ್ತಿಯ ಗುಂಡುತೋಪುಗಳಲ್ಲಿ ಅಕ್ರಮ ನಡೆದಿದೆ ಎಂದು ದೂರಿದರು.

ಭೂಮಾಫಿಯಾದಿಂದ ನಕಲಿ‌ ದಾಖಲೆ‌ ಸೃಷ್ಟಿಸಿ ಮಾರಾಟ ಆರೋಪ.‌ ಈ ಬಗ್ಗೆ ೩೫ ವಾರ್ಡ್ ಗಳ ಮಾಹಿತಿ ‌ಕೊಡಿ. ರಕ್ಣಣೆಗೆ‌ ಮುಂದಾಗಿ.‌ಮಹಿಳಾ ಸಮಾಜ ‌ಜಾಗ ನಗರಸಭೆಗೆ‌ ಸೇರಿದ್ದು ನಗರಸಭೆ ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳು ಬದ್ಧತೆ ತೋರಬೇಕು. ಭೂಗಳ್ಳರ ಜೊತೆ ಕೈಜೋಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು ಆಗ‌ ಅಧಿಕಾರಿಗಳು ಸುಮಾರು ೧೪೫‌ ನಿವೇಶನ, ೨೮ ಸಿಎ‌ ನಿವೇಶನ, ೩೦ಪಾರ್ಕ್‌ ಇವೆ ಎಂದು‌ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯ ಸುರೇಶ್ ಬಾಬು ಮಾತನಾಡಿ ಸ್ವಚ್ಛ ಭಾರತ್ ಮಿಷನ್ 1-0 ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು ಎಲ್ಲಾ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಬೆಲೆಗೆ ಖರೀದಿಸಿದ್ದಾರೆ ತನಿಖೆ ಮಾಡಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಿ ಉಳಿದ ಅಧಿಕಾರಿಗಳಿಗೆ ಎಚ್ಚರಿಕೆ ಬರುತ್ತದೆ ಎಂದು ಒತ್ತಾಯಿಸಿದರು.

ನಗರಸಭೆಗೆ ಸೇರಿದ ಸರ್ಕಾರಿ ಸ್ವತ್ತುಗಳ ಒತ್ತುವರಿ, ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದು ಮಹಿಳಾ ಸಮಾಜ ಜಾಗವು ೫೦ ಕೋಟಿ‌ ದಯವಿಟ್ಟು ಕ್ರಮಕೈಗೊಳ್ಳಿ, ವಶಕ್ಕೆ ಪಡೆದರೆ ನಗರಸಭೆಗೆ ಆದಾಯ ಬರುತ್ತದೆ ೧೭ನೇ ವಾರ್ಡ್ ನಲ್ಲಿರುವ ಉದ್ಯಾನದಲ್ಲಿ ‌ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಅಧಿಕಾರಿಗಳ ಹೇಳಿದರು ಕನಿಷ್ಠ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಆರೋಪಿಸಿದರು

ಇದಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಕೂಡಲೇ ಅಧಿಕಾರಿಗಳು ಭೇಟಿ ನೀಡಿ ದಾಖಲೆ ‌ಕೇಳಿ ಅಕ್ರಮವಾಗಿ‌ ಕಟ್ಟಿರುವುದು ಗೊತ್ತಾಗುತ್ತದೆ ಕೂಡಲೇ ವಶಕ್ಕೆ ‌ಪಡೆಯಿರಿ ಕಟ್ಟಡ ತೆರವುಗೊಳಿಸಿ ಹೀಗೆ ಉಳಿದ‌ ವಾರ್ಡ್ ಗಳಲ್ಲೂ ಪರಿಶೀಲನೆ ಮಾಡಿ ಪೊಲೀಸರಿಗೆ ಮನವಿ ಮಾಡಿ ರಕ್ಷಣೆ ಪಡೆಯಿರಿ ಇಲ್ಲದಿದ್ದರೆ ‌ಏನೂ‌ ಮಾಡಲು ಸಾಧ್ಯವಿಲ್ಲ ಅಧಿಕಾರಿಗಳು ಕೆಲಸ ‌ಮಾಡದಿದ್ದರೆ ನೋಟಿಸ್ ಕೊಡಿ‌ ಜೊತೆಗೆ ನಗರದಲ್ಲಿ ಕಾಮಗಾರಿ ಸಂಬಂಧ ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟಿಸ್‌ ಕೊಡಿ. ಆಗಲೂ ಉತ್ತರ‌ ಕೊಡದಿದ್ದರೆ ಕಪ್ಪು ಪಟ್ಟಿಗೆ‌ ಸೇರಿಸಿ‌‌‌ ಎಂದು ಸೂಚಿಸಿದರು.

ಸದಸ್ಯ ರಾಕೇಶ್ ಮಾತನಾಡಿ ನಗರಸಭೆಯ ಸಮಸ್ಯೆಗಳಿಗೆ ದೂರು ಕೊಟ್ಟರು ಯಾವುದೇ ಪ್ರಯೋಜನವಿಲ್ಲ ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಎಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ ಯಾರಿಗೂ ಗೊತ್ತಿಲ್ಲ ಆದರೆ ಸಭೆಗೆ ಮಾತ್ರ ಬಿಲ್ ಪಾವತಿಯಾಗಿ ಅಂತ ಬರುತ್ತದೆ ಎಂದರು

ಸಭೆಗೆ ಭಾರಿ ಬಿಗಿ ಭದ್ರತೆ: ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಬಳಿಕ ನಡೆದ ಮೊದಲ ಸಭೆಗೆ ಭಾರಿ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು ಗಲ್ ಪೇಟೆ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು

ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮಿದೇವಮ್ಮ ರಮೇಶ್ ವಹಿಸಿದ್ದರು ಉಪಾಧ್ಯಕ್ಷೆ ಸಂಗೀತಾ ತಹಶಿಲ್ದಾರ್ ನಯನಾ, ನಗರಸಭೆ ಪ್ರಭಾರಿ ಆಯುಕ್ತೆ ಅಂಬಿಕಾ, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್,‌ ಎಂಜಿನಿಯರ್ ಶ್ರೀನಿವಾಸ್ ಇದ್ದರು.

Ramesh Babu

Journalist

Recent Posts

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

5 hours ago

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು- ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ..…

7 hours ago

ದಲಿತರ ಕಾಲೋನಿಗಿಲ್ಲ ಚರಂಡಿ ಭಾಗ್ಯ: ರಸ್ತೆ‌ ಮೇಲೆಯೇ ಹರಿಯುವ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ‌ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…

11 hours ago

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪ.ಪಂ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರಿಂದ ಹಲ್ಲೆ: ದೂರು ದಾಖಲು

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ‌ಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…

12 hours ago

ಬೆಂ.ಗ್ರಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಆಗಿ ಎ.ವಿ ಲಕ್ಷ್ಮಿನಾರಾಯಣ ನೇಮಕ

ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…

14 hours ago

ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ: ದಾಳಿ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ

ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ  14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…

14 hours ago