ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್-ಬಿಜೆಪಿ ಮಧ್ಯೆ ಘರ್ಷಣೆ ಜೋರು….ಮಾತು ತಪ್ಪಿದ ಶಾಸಕ ಎಂದ ಜೆಡಿಎಸ್ ನಾಯಕರು- ನಾನು ಮಾತು ತಪ್ಪಿಲ್ಲ, ಕೊಟ್ಟ ಮಾತಿನಂತೆ ನಡೆಯುತ್ತೇನೆ – ಶಾಸಕ ಧೀರಜ್ ಮುನಿರಾಜು

ರಾಜ್ಯ ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಡಿಕೆಶಿ ಬ್ರದರ್ ಡಿಕೆ ಸುರೇಶ್ ಪದೆ ಪದೇ ಹೇಳುತ್ತಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನತ್ತ ಬೊಟ್ಟು ಮಾಡಿ ಹೈಕಮಾಂಡ್ ಹೇಳಿದಂತೆ ಇಬ್ಬರು ನಡೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಅಂತೆಯೇ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ವಿಚಾರದಲ್ಲಿ ರಾಜಕೀಯ ಹಗ್ಗಜಗ್ಗಾಟ ಶುರುವಾಗಿದೆ. ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕೊಟ್ಟ ಮಾತನಿಂತೆ ಶಾಸಕ ಧೀರಜ್ ಮುನಿರಾಜು ನಡೆದುಕೊಳ್ಳಬೇಕು, ಜೆಡಿಎಸ್ ಗೆ ನಗರಸಭೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಮಾತು ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡರು ಒತ್ತಾಯಿಸಿದ್ದಾರೆ. ಇತ್ತ ಶಾಸಕ ಧೀರಜ್ ಮುನಿರಾಜು ನಾನು ಮಾತು ತಪ್ಪುವುದಿಲ್ಲ. ಇದು ಆಂತರಿಕ ವಿಷಯವಾಗಿದೆ ಎಂದು ಹೇಳುತ್ತಿದ್ದಾರೆ. ಮುಂದೆ ಮೈತ್ರಿಯನ್ನು ಉಳಿಸಿಕೊಳ್ಳಲು ಪರಸ್ಪರ ಭೂಮಿತೂಕದ ತಾಳ್ಮೆ ತಾಳುತ್ತಾರಾ ಅಥವಾ ನಿಮ್ಮ ದಾರಿ ನಿಮ್ಮದು ನಮ್ಮ ದಾರಿ ನಮ್ಮದು ಅನ್ನುತ್ತಾರಾ? ದೊಡ್ಡಬಳ್ಳಾಪುರದ ಎನ್.ಡಿ.ಎ ಮೈತ್ರಿಕೂಟಕ್ಕೆ ಸಿಗಲಿದೆಯಾ ಉತ್ತಮ ಪರಿಹಾರ.

ಮೈತ್ರಿಧರ್ಮದಡಿ ಅಧಿಕಾರ ಹಂಚಿಕೆ ಮಾತು:

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೂ ಮುನ್ನವೇ ಅಂದರೆ 2021ರಲ್ಲಿಯೇ ಪರಸ್ಪರ ಮೈತ್ರಿ ಮಾಡಿಕೊಂಡು ಬಿಜೆಪಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೇರಿತು. ಜೆಡಿಎಸ್ ಗೆ ಉಪಾಧ್ಯಕ್ಷ, ಮತ್ತು ಸ್ಥಾಯಿ ಸಮಿತಿ ಸ್ಥಾನಗಳನ್ನ ಬಿಟ್ಟುಕೊಡಲಾಯಿತು. ನಗರಸಭೆಯ ಮೊದಲ ಅವಧಿಯ ಎರಡೂವರೆ ವರ್ಷ ಅಧಿಕಾರ, ಉಳಿದ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪ್ರಬಲ ಪಟ್ಟು ಹಿಡಿದಿತ್ತು. ಆದರೆ, ಈ ವೇಳೆಗೆ ಶಾಸಕರಾಗಿದ್ದ ಧೀರಜ್ ಮುನಿರಾಜು ಪ್ರಾಬಲ್ಯ ಸಾಧಿಸಿ ಮೈತ್ರಿಯಲ್ಲಿ ಮತ್ತೆ ಬಿಜೆಪಿಗೆ ಅಧ್ಯಕ್ಷ ಸ್ಥಾನ ಸಿಗುವಂತೆ ನೋಡಿಕೊಂಡಿದ್ದರು. ಇದೀಗ ಉಳಿದ ಕೊನೆಯ ಏಳು ತಿಂಗಳ ಅವಧಿಯನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದಾರೆ.

“ನಾನು ಮಾತು ತಪ್ಪಲ್ಲ.. ಇದು ಆಂತರಿಕ ವಿಚಾರ”

ನಗರಸಭೆ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಬಿಟ್ಟುಕೊಡುವ ವಿಚಾರ ತಾರಕ್ಕೇರಿದೆ. ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ವಿ ಮಂಜುನಾಥ ಮೈತ್ರಿ ಧರ್ಮಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಶಾಸಕ ಧೀರಜ್ ಮುನಿರಾಜು, ನಗರಸಭೆ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಉತ್ತರ ಕೊಡಬೇಕಾದದ್ದು ಜೆಡಿಎಸ್ ನ ಹಾಲಿ ಉಪಾಧ್ಯಕ್ಷ ಮಲ್ಲೇಶ್ ಅವರು, ಅಧಿಕಾರ ಸೂತ್ರ ಹಂಚಿಕೆ ಸಂದರ್ಭದಲ್ಲಿ ನಾಯಕರಾದ ಸಂಸದ ಸುಧಾಕರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಪ್ರಭು, ದಿ.ಅಪ್ಪಯ್ಯಣ್ಣ ಸೇರಿದಂತೆ ಒಟ್ಟು ಆರು ಮಂದಿ ಮಧ್ಯೆ ನಡೆದ ಮಾತುಕತೆ ಆಗಿದೆ. ಅಂದಿನ ಸಭೆಯಲ್ಲಿ ಹೇಳಿದ್ದು ನಾನು ಒಂದೆ.. ಇವತ್ತು ಹೇಳುತ್ತಿರುವುದು ಒಂದೆ.. ನಾನು ಮಾತಿಗೆ ತಪ್ಪಲ್ಲ.. ಜೆಡಿಎಸ್ ನ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ.. ಉಪಾಧ್ಯಕ್ಷ ಸ್ಥಾನದ ಚುನಾವಣೆ ಆದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ. ತಪ್ಪು ಸಂದೇಶವನ್ನ ಜನರಿಗೆ ನೀಡಬಾರದು, ಎರಡೂವರೆ ವರ್ಷ ಕೇವಲ ಅಧ್ಯಕ್ಷ ಸ್ಥಾನ ಬಿಜೆಪಿಗೆ ಬಿಟ್ಟಿದ್ದು, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಎರಡು ಜೆಡಿಎಸ್ ಗೆ ನೀಡಲಾಗಿದೆ. ಈಗ ನಾವು ಕೇಳುತ್ತಿರುವುದು ಒಂದೇ ಉಪಾಧ್ಯಕ್ಷ ಸ್ಥಾನ, ಅಧ್ಯಕ್ಷ ಸ್ಥಾನ ತೆಗೆದುಕೊಳ್ಳಿ, ಸ್ಥಾಯಿ ಸಮಿತಿ ನಾವು ಕೇಳುತ್ತಿಲ್ಲವೆಂದು ಶಾಸಕ ಧೀರಜ್ ಮುನಿರಾಜು ಹೇಳಿದ್ದಾರೆ.

ಜೆಡಿಎಸ್ ಬಗ್ಗೆ ಎಲ್ಲೂ ಮಾತನಾಡಬೇಡಿ ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಅಲ್ಲದೆ ಜೆಡಿಎಸ್ ಪಕ್ಷದವರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ, ಅಧಿಕಾರ ಹಂಚಿಕೆ ಮಾತುಕತೆ ಆಗಿದ್ದು ನಿಜ, ಸಭೆಯ ಮಾತಿಗೆ ಇಂದು ಕೂಡ ಬದ್ಧ. ಉಪಾಧ್ಯಕ್ಷ, ಸ್ಥಾಯಿ ಸಮಿತಿಯನ್ನು ಕೊಟ್ಟಿದ್ದೇವೆ. ಪಿಎಲ್ಡಿ ಬ್ಯಾಂಕ್ ನಲ್ಲಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಅಧಿಕಾರ ಹಂಚಿಕೆ ಮಾತುಕತೆ ಆಂತರಿಕ ವಿಚಾರವಾಗಿದೆ ಎಂದು ಹೇಳಿದ್ದಾರೆ.

ತಲಾ ಎರಡೂವರೆ ವರ್ಷ ಅಧಿಕಾರ ಸೂತ್ರ ರಚಿಸಿದ್ದು:

2021ರ ನಗರಸಭೆ ಚುನಾವಣೆಯಲ್ಲಿ ಯಾರು ಯಾರೊಂದಿಗೆ ಮೈತ್ರಿ ಮಾಡಿಕೊಂಡಿರಲಿಲ್ಲ. ಅತಂತ್ರ ಫಲಿತಾಂಶ ಬಂದಾಗ ನಮ್ಮನ್ನು ಕಾಂಗ್ರೆಸ್, ಬಿಜೆಪಿ ಇಬ್ಬರೂ ನಾಯಕರು ಸಂಪರ್ಕಿಸಿದ್ದರು. ಇಬ್ಬರಿಗೂ ನಮ್ಮ ಹೈಕಮಾಂಡ್ ಹೆಚ್.ಡಿ ಕುಮಾರಸ್ವಾಮಿಯನ್ನ ಕೇಳಿ ಹೇಳುತ್ತೇನೆ ಎಂದು ಹೇಳಿದ್ದೆ, ಬಿಜೆಪಿಯ ಆರ್.ಅಶೋಕ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಕುಮಾರಸ್ವಾಮಿ ಜೊತೆ ಮಾತನಾಡಿ, ನನಗೆ ಕರೆ ಮಾಡಿಸಿ ಬಿಜೆಪಿ ಜೊತೆ ಮುಂದುವರೆಯುವಂತೆ ಸೂಚಿಸಿದ್ದರು. ಆ ಸಮಯದಲ್ಲಿ ೫ ವರ್ಷಗಳ ಪೂರ್ಣ ಅವಧಿಯಲ್ಲಿ ತಲಾ ಎರಡೂವರೆ ವರ್ಷ ಅಧ್ಯಕ್ಷ ಸ್ಥಾನ ಹಂಚಿಕೆ ಎಂದು ಮಾತುಕತೆ ಆಗಿತ್ತು. ಆದರೆ ಈಗ ಎರಡನೇ ಅವಧಿ ವೇಳೆಗೆ ಜೆಡಿಎಸ್ ಗೆ ಅಧಿಕಾರ ಬಿಟ್ಟುಕೊಡಬೇಕಾದ ಬಿಜೆಪಿ ಮಾತು ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಜೆಡಿಎಸ್ ಮುಖಂಡ ಬಿ.ಮುನೇಗೌಡ ಹೇಳಿದ್ದಾರೆ.

‘ಮಾತು ತಪ್ಪಿದ ಶಾಸಕ ಧೀರಜ್ ಮುನಿರಾಜು’:

ಇನ್ನು, ಎರಡನೇ ಅವಧಿ ವೇಳೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಹೈಕಮಾಂಡ್ ಮಟ್ಟದಲ್ಲಿ ಆಗಿದ್ದರಿಂದ ಅಧಿಕಾರ ಹಂಚಿಕೆ ಕುರಿತು ಮತ್ತೆ ಚರ್ಚಿಸಲಾಯಿತು. ಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು ನಾನು ಶಾಸಕನಾಗಿದ್ದೀನಿ ಎರಡೂವರೆ ವರ್ಷ ಅವಧಿಯಲ್ಲಿ ಮೊದಲ ಒಂದು ವರ್ಷ ಬಿಜೆಪಿಗೆ ನೀಡಿ ಬಳಿಕ ಒಂದೂವರೆ ವರ್ಷ ಜೆಡಿಎಸ್ ಗೆ ಬಿಟ್ಟುಕೊಡಲಾಗಿವುದು ಎಂದು ಹೇಳಿದ್ದರು. ಈಗ ಶಾಸಕರು ಬೇರೆ ಡ್ರಾಮಾ ಮಾಡುತ್ತಿದ್ದಾರೆ. ಸಭೆಯಲ್ಲಿ ಹೇಳಿದ್ದ ಮಾತಿಗೆ ಬದ್ಧವಾಗದೆ, ಮಾತು ತಪ್ಪಿದ್ದಾರೆ. ಶಾಸಕ ಧೀರಜ್ ಮೇಲೆ ನಂಬಿಕೆ ಇಲ್ಲ. ಮೊದಲು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ, ಇವತ್ತು ಮಾತಿಗೆ ತಪ್ಪಿದ್ದಾರೆ ನಾಳೆ ಮಾತಿಗೆ ತಪ್ಪಲ್ಲ ಎಂದು ಏನು ಗ್ಯಾರಂಟಿ ಎಂದು ಬಿ.ಮುನೇಗೌಡ ಪ್ರಶ್ನಿಸಿದ್ದಾರೆ.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲೂ ಎನ್.ಡಿ.ಎಗೆ ಶಾಸಕ ಧೀರಜ್ ಸಹಕಾರ ಕೊಟ್ಟಿಲ್ಲ, ನಮ್ಮ ಜೆಡಿಎಸ್ ನಾಯಕರಿಗೆ ಬಿಜೆಪಿಯಿಂದ ಸ್ಪರ್ಧಿಸಿದರೂ ಎನ್.ಡಿ.ಎ ಆಗುತ್ತದೆ ಎಂದು ದಾರಿ ತಪ್ಪಿಸಿ ಬಿಜೆಪಿಗೆ ಸೆಳೆದಿದ್ದಾರೆ. ಪ.ಪಂಯಲ್ಲಿ ಗೆದ್ದಿರುವ ಬಹುತೇಕರು ಜೆಡಿಎಸ್ ನವರೇ ಆಗಿದ್ದಾರೆ. ಇಂತಹ ಕುತಂತ್ರಕ್ಕೆ ಜೆಡಿಎಸ್ ನ ಡಾ.ವಿಜಯ್ ಕುಮಾರ್ ಸೇರಿದಂತೆ ಹಲವು ಮುಖಂಡರು ಕೈಜೋಡಿಸಿದ್ದಾರೆ. ಮುಂದೆ ಜನರು ಇದಕ್ಕೆಲ್ಲಾ ಉತ್ತರ ನೀಡುತ್ತಾರೆ ಎಂದು ಬಿ.ಮುನೇಗೌಡ ಹೇಳಿದ್ದಾರೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ
ಇಬ್ಬರು ಒಟ್ಟಿಗೆ ರಾಜೀನಾಮೆ ನೀಡೋಣ ಎಂದು ಮಾತುಕತೆ ಆಗಿತ್ತು. ಇದನ್ನು ಯಾವ ದೇವರ ಮೇಲೆ ಆಣೆ ಮಾಡಲು ನಾನು ಸಿದ್ದ. ಶಾಸಕರು ಸಿದ್ದನಾ, ನಮ್ಮಿಂದ ಅಧಿಕಾರ ಪಡೆದು ನಮ್ಮನ್ನು ಕಾಲಿನಿಂದ ಒದೆಯುತ್ತಿದ್ದಾರೆ. ನೂತನ ತಾಲ್ಲೂಕು ಸಮಿತಿ ರಚನೆ ಬಳಿಕ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ ಹರೀಶ್ ಗೌಡ ಹೇಳಿದ್ದಾರೆ.

2021ರ ಸೆ.3ರಂದು ನಗರಸಭೆ ಚುನಾವಣೆ ನಡೆದು ಸೆ.6 ರಂದು ಮತ ಎಣಿಕೆ ನಡೆಯಿತು. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುತಬರದೆ ಅಂತತ್ರವಾಗಿತ್ತು. 31 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್, ಜೆಡಿಎಸ್ -7, ಮತ್ತು ಪಕ್ಷೇತರರು ಮೂವರು ಆಯ್ಕೆಯಾಗಿದ್ದರು.

ಆಗ ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡು ಮೊದಲ ಎರಡೂವರೆ ವರ್ಷಕ್ಕೆ ಬಿಜೆಪಿಯ ಸುಧಾರಾಣಿ ಲಕ್ಷ್ಮೀನಾರಯಣ್ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಜೆಡಿಎಸ್ ನ ಫರ್ಹಾನ್ ತಾಜ್ ಆಯ್ಕೆಯಾಗಿದ್ದರು.

ಸ್ಥಾಯಿ ಸಮಿತಿಯೂ ಜೆಡಿಎಸ್ ಪಾಲಾಗಿ ಆದಿಲಕ್ಷ್ಮೀ ಮತ್ತು ರವಿಕುಮಾರ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಬಳಿಕ 2024ರಲ್ಲಿ ಎರಡನೇ ಅವಧಿಯಲ್ಲಿ ಬಿಜೆಪಿಯ ಸುಮಿತ್ರ ಆನಂದ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಜೆಡಿಎಸ್ ನ ಮಲ್ಲೇಶ್ ಆಯ್ಕೆಯಾಗಿ, ಸ್ಥಾಯಿ ಸಮಿತಿಗೆ ರವಿಕುಮಾರ್ ಮುಂದುವರೆದಿದ್ದರು. ಇದೀಗ ನಗರಸಭೆಯ ಬಾಕಿ ಅವಧಿಯಾದ 8 ತಿಂಗಳ ಅವಧಿಗೆ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕು ಎಂದು ದಳಪತಿಗಳು ಪಟ್ಟುಹಿಡಿದಿದ್ದಾರೆ.

Ramesh Babu

Journalist

Recent Posts

ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು…..

ನಮ್ಮ ನಾಯಕರು ಮತ್ತು ಉಗ್ರ ಧರ್ಮ ಹಾಗು ರಾಷ್ಟ್ರೀಯವಾದ..... ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು..... ತಾವೇ ಸೃಷ್ಟಿಸಿಕೊಂಡ, ನಾವೇ…

3 hours ago

“ದೊಡ್ಡಬಳ್ಳಾಪುರ ಸ್ಯಾರಿ ಸಂತೆ” ರಘು ದೀಕ್ಷಿತ್ ಸಂಗೀತದೊಂದಿಗೆ ತೆರೆ: ಮಹಿಳೆಯರ ಮನ ಗೆದ್ದ ಸ್ಯಾರಿ ಸಂತೆ: 2 ಕೋಟಿಗೂ ಅಧಿಕ ವಹಿವಾಟು

ಕಳೆದ ಮೂರು ದಿನಗಳಿಂದ ನಡೆದ "ದೊಡ್ಡಬಳ್ಳಾಪುರ ಸ್ಯಾರಿ ಸಂತೆ"ಗೆ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿತು. ಮೂರು ದಿನಗಳ ಕಾಲ ಲಕ್ಷಾಂತರ…

14 hours ago

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿ ಮಾರಾಟ ಮಾಡುತ್ತಿದ್ದ ದಂಪತಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ.!

ಉತ್ತರಪ್ರದೇಶ : ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ…

20 hours ago

ಲೋಕಸೇವಾನಿರತ ಡಿ. ಕೊಂಗಾಡಿಯಪ್ಪ ದೊಡ್ಡಬಳ್ಳಾಪುರ ನಗರದ ಸಮಗ್ರ ಅಭಿವೃದ್ಧಿಯ ಹರಿಕಾರ- ಡಿ.ಪಿ.ಆಂಜನೇಯ

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರು ತಮ್ಮ ಸೇವಾ ಮನೋಭಾವದಿಂದ ಸರ್ವಜನ ಮಾನ್ಯರಾಗಿದ್ದರು ಎಂದು ಕನ್ನಡ ಜಾಗೃತ ಪರಿಷತ್ತು…

22 hours ago

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಜಪ್ತಿ

ಕುಮಟಾ: ಬಡವರ ಹಸಿವು ನೀಗಿಸಲು ಸರ್ಕಾರ ನೀಡುವ 'ಅನ್ನಭಾಗ್ಯ' ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋಡೌನ್ ಮೇಲೆ ಕುಮಟಾ ತಹಶೀಲ್ದಾರ್…

22 hours ago

ವಿರೋಧ ಲೆಕ್ಕಿಸದೆ ಪ್ರೀತಿಸಿ ಮದುವೆಯಾದ ಯುವತಿ…ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ…

ಮನೆಯವರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನ ಮದುವೆ ಆದ ಹಿನ್ನಲೆ ಸಿಡಿದೆದ್ದ ಯುವತಿ ತಂದೆ ಅಳಿಯನ ಮನೆಗೆ ಬೆಂಕಿ ಹಚ್ಚಿ…

23 hours ago