Categories: Home

ನಗರದಲ್ಲಿ ನವೆಂಬರ್‌ 30 ರಿಂದ ಡಿಸೆಂಬರ್ 15ರ ವರೆಗೆ “ಬೆಂಗಳೂರು ಹಬ್ಬ” ಆಚರಣೆ

ಬೆಂಗಳೂರು: ಇದೇ ನವೆಂಬರ್‌ 30 ರಿಂದ ಡಿಸೆಂಬರ್ 15ರ ವರೆಗೆ “ಬೆಂಗಳೂರು ಹಬ್ಬ”ವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ.

ಬೆಂಗಳೂರಿನ ಶ್ರೀಮಂತ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಅನ್‌ಬಾಕ್ಸಿಂಗ್‌ ಬೆಂಗಳೂರು ಫೌಂಡೇಷನ್‌, ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ “ಬೆಂಗಳೂರು ಹಬ್ಬ” ಎರಡನೇ ಆವೃತ್ತಿಯನ್ನು ಅದ್ಧೂರಿಯಿಂದ ಆಚರಿಸಲು ಸಜ್ಜಾಗಿದೆ.

ನವೆಂಬರ್‌ 30ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿರುವ ಬೆಂಗಳೂರು ಹಬ್ಬ 16 ದಿನಗಳ ಕಾಲ ನಡೆಯಲಿದ್ದು, ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ವಿವಿಧ ರೀತಿಯ ಮಳಿಗೆಗಳ ಆಯೋಜನೆ ಸೇರಿದಂತೆ ಸಾರ್ವಜನಿಕರನ್ನು ಮನಸೂರೆಗೊಳಿಸುವ 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಗರದ 40ಕ್ಕೂ ಹೆಚ್ಚು ಸ್ಥಳದಲ್ಲಿ ಆಯೋಜಿಸಲಾಗಿದೆ. ಪ್ರಮುಖವಾಗಿ ನಗರದ ಫ್ರೀಡಂ ಪಾರ್ಕ್, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ (BIC), ಮಲ್ಲೇಶ್ವರದ ಪಂಚವಟಿ, ಕಾಮರಾಜ್ ರಸ್ತೆಯ ಸಭಾ ಮತ್ತು NGMA ನಂತಹ ಜನಪ್ರಿಯ ಸ್ಥಳಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ.

*ಕಾರ್ಯಕ್ರಮಗಳ ವಿವರ:*

ನವೆಂಬರ್‌ ೩೦ ರಿಂದ ಪ್ರತಿದಿನ ೧೦ಕ್ಕೂ ಅಧಿಕ ಕಾರ್ಯಕ್ರಮಗಳು ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಗೋಡೆ ಚಿತ್ರ, ಕಲಾ ಪ್ರದರ್ಶನ, ಬೆಂಗಳೂರು ಸಮಸ್ಯೆ ಬಗೆಹರಿಸುವ “ಬೆಂಗಳೂರು ಚಾಲೆಂಜ್‌”, 38 ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಬೃಹತ್‌ ಜಾನಪದ ಸಂಗೀತ ಕಾರ್ಯಕ್ರಮ, ಬೊಂಬೆಯಾಟ, ನಾಟಕ ಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು https://blrhubba.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದ್ದು, ಈ ವೆಬ್‌ಸೈಟ್‌ ಮೂಲಕವೇ ನಿಮ್ಮ ಹಾಜರಾತಿಯನ್ನು ಸಹ ಕಾಯ್ದಿರಿಸಬಹುದು, ನೇರವಾಗಿಯೂ ಸಹ ಕಾರ್ಯಕ್ರಮಕ್ಕೆ ತೆರಳಬಹುದು. ಬಹುತೇಕ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶವಿರಲಿದ್ದು, ನಿಮ್ಮ ನೆಚ್ಚಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀವೂ ಸಹ ಬೆಂಗಳೂರು ಹಬ್ಬದ ಅನುಭವ ಪಡೆಯಬಹುದು.

ಕುವೆಂಪು ಅವರ 120 ನೇ ಜನ್ಮದಿನೋತ್ಸವ ಆಚರಣೆ

ಬೆಂಗಳೂರು ಹಬ್ಬದ ಮತ್ತೊಂದು ವಿಶೇಷವೆಂದರೆ, ಸಾಹಿತ್ಯ ಲೋಕದ ದಿಗ್ಗಜರಾದ ಕವಿ ಕುವೆಂಪು ಅವರ 120 ನೇ ಜನ್ಮ ವಾರ್ಷಿಕೋತ್ಸವದ ಭಾಗವಾಗಿ “ಗಲಗಲ ಗದ್ದಲ” ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು, ಈ ವೇಳೆ ಪ್ರಸಿದ್ಧ ಸಾಹಿತಿಗಳು ಭಾಗವಹಿಸಲಿದ್ದಾರೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, “ಬಿಎಲ್‌ಆರ್ ಹಬ್ಬವು ನಮ್ಮ ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಸೃಜನಶೀಲತೆಯ ಸಾರವನ್ನು ಒಟ್ಟುಗೂಡಿಸಲು ನಡೆಸುತ್ತಿರುವ ಪ್ರಮುಖ ಆಚರಣೆಯಾಗಿದೆ. ಈ ಕಾರ್ಯಕ್ರಮವು ಕರ್ನಾಟಕಕ್ಕೆ ತನ್ನ ಪರಂಪರೆ, ಕಲೆ ಮತ್ತು ನಾವೀನ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಲು ಒಂದು ಅನನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ಹೊಸದನ್ನು ಅಳವಡಿಸಿಕೊಳ್ಳುವಾಗ ನಮ್ಮ ಶ್ರೀಮಂತ ಸಂಪ್ರದಾಯಗಳಲ್ಲಿ ಹೆಮ್ಮೆಯನ್ನು ಬೆಳೆಸುತ್ತದೆ. BLR ಹಬ್ಬಾ ನಮ್ಮ ಸಮುದಾಯದೊಳಗೆ ಆಳವಾದ ಸಂಪರ್ಕಗಳನ್ನು ಪ್ರೇರೇಪಿಸುತ್ತದೆ ಮತ್ತು ಭಾಗವಹಿಸುವ ಎಲ್ಲರ ಕಲ್ಪನೆಯನ್ನು ಪ್ರಚೋದಿಸಲಿದೆ ಎಂದರು.

ಬಿಎಲ್‌ಆರ್ ಹಬ್ಬ ಮುಖ್ಯ ಸಂಚಾಲಕ ರವಿಚಂದರ್ ವಿ. ಮಾತನಾಡಿ, ಬಿಎಲ್‌ಆರ್ ಹಬ್ಬವು ನಗರದ ಸಂಸ್ಕೃತಿ, ಸೃಜನಶೀಲತೆ ಮತ್ತು ಸಮುದಾಯದ ಪ್ರಜ್ಞೆಯ ಆಚರಣೆಯಾಗಿದೆ. ಈ ಹಬ್ಬವು ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸಿ, ಕಲೆ, ಸಂಪ್ರದಾಯ ಮತ್ತು ನಾವೀನ್ಯತೆಯಲ್ಲಿ ಬೆಂಗಳೂರಿನ ವೈಶಿಷ್ಟಯವನ್ನು ಜಗತ್ತಿಗೆ ಸಾರಲಿದೆ. ಹೀಗಾಗಿ ಪ್ರತಿಯೊಬ್ಬರು ನಮ್ಮೂರ ಹಬ್ಬದಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸಿದರು.

ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ನ ಸಿಇಒ ಮತ್ತು ಸಹ-ಸಂಸ್ಥಾಪಕಿ ಮಾಲಿನಿ ಗೋಯಲ್ ಮಾತನಾಡಿ, “ಬಿಎಲ್‌ಆರ್ ಹಬ್ಬ ಬೆಂಗಳೂರಿನ ನಿಜವಾದ ಸಾರವನ್ನು, ಅದರ ವೈವಿಧ್ಯತೆ, ಸೃಜನಶೀಲತೆ ಯನ್ನು ಆಚರಿಸುವ ಆಂದೋಲನವಾಗಿದೆ. ನಮ್ಮ ನಗರ ಕೇವಲ ಉದ್ಯೋಗಕ್ಕಷ್ಟೇ ಸೀಮಿತವಾಗದೇ ಇಲ್ಲಿನ ವಿಶಿಷ್ಟ ಸಂಸ್ಕೃತಿ, ಕಲೆಯನ್ನು ಉಳಿಸುವುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು. ಈ ಹಬ್ಬವನ್ನು ಗೋ ನೇಟಿವ್, ಝೆರೋಧಾ, ಮಣಿಪಾಲ್ ಫೌಂಡೇಶನ್ ಮತ್ತು ಪ್ರೆಸ್ಟೀಜ್ ಗ್ರೂಪ್ ಇತರರ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು.

Ramesh Babu

Journalist

Recent Posts

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

19 minutes ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

1 hour ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

14 hours ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

14 hours ago

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ…

14 hours ago

ಬಾಶೆಟ್ಟಿಹಳ್ಳಿ ಪಪಂಗೆ ಮೂವರು ನಾಮನಿರ್ದೇಶಿತ ಸದಸ್ಯರ ನೇಮಕ

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸರ್ಕಾರವು ಮೂವರು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ…

15 hours ago