Categories: ಕೋಲಾರ

ದಲಿರಿಗೆ, ರೈತರಿಗೆ, ಬಡವರಿಗೆ ಅನ್ಯಾಯ: ತಹಶಿಲ್ದಾರ್ ನಯನ ಅವಧಿಯ ಸಾಗುವಳಿ ಚೀಟಿ ಆದೇಶಗಳ ತನಿಖೆಗೆ ಒತ್ತಾಯ

ಕೋಲಾರ: ತಹಶೀಲ್ದಾ‌ರ್ ನಯನ ಅವರ ಅವಧಿಯಲ್ಲಿನ ಆರ್.ಆರ್.ಟಿ.ಕೇಸಸ್, ಆರ್.ಆರ್.ಟಿ ತಿದ್ದುಪಡಿ, ಎಲ್.ಎಸ್.ಡಿ.ಖಾತೆ, ಹಾಗೂ ಸಾಗುವಳಿ ಚೀಟಿ ಸಂಬಂಧಿಸಿದ ಎಲ್ಲಾ ಆದೇಶಗಳನ್ನು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳವಾರ ತಹಶಿಲ್ದಾರ್ ಕಛೇರಿ ಎದುರು ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎನ್.ಅಂಬರೀಷ್ ಮಾತನಾಡಿ ತಹಶಿಲ್ದಾರ್ ನಯನ ಅವರು ಕೋಲಾರ ತಾಲೂಕಿಗೆ ಕಳೆದ ವರ್ಷ 2024 ರ ಆಗಸ್ಟ್ ತಿಂಗಳಲ್ಲಿ ಕಾರ್ಯಭಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆವಿಗೂ ಆರ್.ಆರ್.ಟಿ ಕೇಸಸ್‌ಗಳಲ್ಲಿ ನ್ಯಾಯ ಸಮ್ಮತವಾದ ಆದೇಶಗಳನ್ನು ಮಾಡುವಲ್ಲಿ ಲೋಪವಾಗಿರುವ ಅನುಮಾನಗಳು ದಟ್ಟವಾಗಿದೆ ಆರ್.ಆರ್.ಟಿ ತಿದ್ದುಪಡಿ ಆದೇಶಗಳು ಕೆಲವು ಆಮಿಷಗಳಿಗೆ ಒಳಗಾಗಿ ಕಾನೂನಿನ ವ್ಯತಿರಿಕ್ತವಾಗಿ ಆದೇಶಗಳು ಮಾಡಿ ಸಾರ್ವಜನಿಕರು ಮತ್ತು ರೈತಾಪಿ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ ಇದರ ವಿರುದ್ದ ಒಂದು ವಾರದೊಳಗೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ಮಾಡಬೇಕು ಇಲ್ಲದೇ ಹೋದರೆ ಬೆಂಗಳೂರು ಕಛೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ರಾಜ್ಯ ಮುಖಂಡ ಮಾಲೂರು ವೆಂಕಟರಾಮ್ ಮಾತನಾಡಿ ರೈತರಿಗೆ ನೀಡುವ ಎಲ್.ಎನ್.ಡಿ.ಖಾತೆ ಮತ್ತು ಸಾಗುವಳಿ ಚೀಟಿ ವಿಭಾಗದಲ್ಲಿ ಕಾನೂನು ಉಲ್ಲಂಘನೆಯಾಗಿದ್ದು ಕಂದಾಯ ಇಲಾಖೆಯನ್ನು ಸರಿದಾರಿಗೆ ತರುವ ಸರ್ಕಾರದ ಪ್ರಯತ್ನವನ್ನು ತಹಶಿಲ್ದಾರ್ ನಯನ ಮಣ್ಣುಪಾಲು ಮಾಡಿದ್ದು ಸರ್ಕಾರಕ್ಕೆ ಮತ್ತು ಕಂದಾಯ ಇಲಾಖೆಗೆ ಕಪ್ಪುಚುಕ್ಕೆ ತಂದಿದ್ದಾರೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಅವರ ಅವಧಿಯ ಎಲ್ಲಾ ಆದೇಶಗಳನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಎಂ ಬಾಲಗೋವಿಂದ್ ಮಾತನಾಡಿ ಸಣ್ಣ ಕೆಲಸಕ್ಕಾಗಿ ದಿನನಿತ್ಯ ಅಲೆದರು ಕೆಲಸವಾಗಲ್ಲ ಅದೇ ಹಣವಂತರು ಬಂಡವಾಳಗಾರ ಕೆಲಸಗಳು ಮಾತ್ರ ಹೇಗೆ ಬೇಗ ಮಾಡಿಕೊಡುತ್ತಾರೆ ದಲಿತರು, ರೈತರು ಮತ್ತು ಬಡವರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕಾದ ತಹಶಿಲ್ದಾರ್ ನಯನ ಅವರು ಕೆಲವು ಪ್ರಭಾವಿಗಳಿಗೆ ಅನುಕೂಲವಾಗುವಂತೆ ಕೆಲಸ ಮಾಡಿಕೊಡಲು ಹೊರಟಿದ್ದಾರೆ ಇಂತಹ ಅಧಿಕಾರಿಯಿಂದ ರೈತರಿಗೆ ಬಡವರಿಗೆ ದ್ರೋಹ ಮಾಡಿದ್ದಾರೆ ಕೂಡಲೇ ಇವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ಮಾತನಾಡಿ ನರಸಾಪುರ ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ 1956 ರಲ್ಲಿ ಬಡವರಿಗಾಗಿ ಅದರಲ್ಲೂ ವಾಲ್ಮೀಕಿ ಸಮಾಜದ ಬಡವರಿಗೆ ಹಂಚಿಕೆ ಮಾಡಿದ್ದ ಹಿಡುವಳಿ ಜಮೀನನ್ನು 1977 ರಲ್ಲಿ ಹಿಂಡಿಕರಣ ಮಾಡಿ ಹೊಸ ಸರ್ವೆ ನಂಬರ್ ಕೊಟ್ಟಿದ್ದರು ಆದರೆ 2023-24 ರಲ್ಲಿ ಬ ಬೇರೆಯವರಿಗೆ ಹಕ್ಕು ಪತ್ರ ಕೊಟ್ಟು ವಾಲ್ಮೀಕಿ ಸಮಾಜಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಪ್ರತಿಭಟನೆಯಲ್ಲಿ ವಾಲ್ಮೀಕಿ‌ ಸಮಾಜದ ಮುಖಂಡರಾದ ಕುಡುವನಹಳ್ಳಿ ಆನಂದ್, ಸಂಗೊಂಡಹಳ್ಳಿ ಪಿಳ್ಳಪ್ಪ, ಈನೆಲ ಈಜಲ ವೆಂಕಟಾಚಲಪತಿ, ಅಡ್ಡಗಲ್ ನರೇಶ್, ನರಸಿಂಹಪ್ಪ, ಬೈರಂಡಹಳ್ಳಿ ನಾಗೇಶ್, ತಿರುಮಲೇಶ್, ಕಲ್ಲಂಡೂರು ನಾರಾಯಣಸ್ವಾಮಿ, ದಿಂಬಚಾಮನಹಳ್ಳಿ ರಾಮಪ್ಪ, ಶಂಕರಪ್ಪ, ಅಮ್ಮೇರಹಳ್ಳಿ ಕೃಷ್ಣಪ್ಪ, ಚಲಪತಿ, ಕಲ್ವಮಂಜಲಿ ರವಿ, ದೇವರಾಜ್, ಕೃಷ್ಣಾಪುರ ನರೇಶ್, ವಕ್ಕಲೇರಿ ನಾಗೇಂದ್ರ, ರಾಜು, ಕುರಗಲ್ ವೆಂಕಟೇಶ್ ಮುಂತಾದವರು ಇದ್ದರು.

Ramesh Babu

Journalist

Recent Posts

ಕಾನೂನು ತೊಡಕಿಲ್ಲದ ಅರ್ಜಿಗಳು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ- ಸಚಿವ ಕೆ.ಎಚ್ ಮುನಿಯಪ್ಪ

ಪ್ರಜಾ ಸೇವಾ ಆಂದೋಲದ ಮೂಲಕ ಜನರಿಂದ ಸ್ವೀಕರಿಸುವ ಅರ್ಜಿಗಳಿಗೆ ಕಾನೂನು ವ್ಯಾಪ್ತಿ ಹೊರತುಪಡಿಸಿ ಉಳಿದ ಅರ್ಜಿಗಳಿಗೆ ನಿಗದಿತ ಕಾಲಮಿತಿಯೊಳಗೆ ಪರಿಹಾರ…

2 hours ago

ಸಾಹಿತ್ಯ ಪರಿಷತ್ ಚುನಾವಣೆ…..

ಸಾಹಿತ್ಯ ಪರಿಷತ್ ಚುನಾವಣೆ..... ನನ್ನ ಮತ........? ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕನ್ನಡದ ಅಸ್ಮಿತೆಗೊಂದು ಸವಾಲು. ಭ್ರಷ್ಟರ ವಿರುದ್ಧ ಪ್ರಾಮಾಣಿಕರು,…

12 hours ago

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರದ ಇಬ್ಬರು ಶಿಕ್ಷಕರು ಆಯ್ಕೆ

ದೇವನಹಳ್ಳಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ…

23 hours ago

ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಸಚಿವರ ದೃಢ ಸಂಕಲ್ಪ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಮೇಕೆದಾಟು ಯೋಜನೆಯ ಶೀಘ್ರ ಜಾರಿಗಾಗಿ ಜಲಸಂಪನ್ಮೂಲ ಸಚಿವರು ತೀವ್ರ ಒಲವು ತೋರಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯದ…

1 day ago

ಶ್ರೀರಂಗವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ತೂಬಗೆರೆ: ಹೋಬಳಿಯ ಯದ್ದಲಹಳ್ಳಿ ಸಮೀಪದ ಶ್ರೀರಂಗವನದಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ…

1 day ago

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026: ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆ. 23 ವರೆಗೆ ಅವಕಾಶ-ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿ ಪ್ರಕಟಗೊಂಡಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಮತಗಟ್ಟೆ…

1 day ago