Categories: ಕೋಲಾರ

ದಲಿತ ಸಂಘಟನೆಗಳಲ್ಲಿನ ಉಪ ಜಾತಿಗಳ ವಿಂಗಡಣೆಯಿಂದ ಸಂಘಟನೆಗೆ ಹಿನ್ನಡೆ- ಹೆಣ್ಣೂರು ಶ್ರೀನಿವಾಸ್

ಕೋಲಾರ: ದಲಿತ ಸಮುದಾಯಗಳ ಮಧ್ಯೆ ಉಪ ಜಾತಿಗಳ ಸೃಷ್ಟಿ ಸೇರಿದಂತೆ ನಮ್ಮೊಳಗಿಳ ಭಿನ್ನಾಭಿಪ್ರಾಯ, ಭಿನ್ನ ಚಿಂತನೆ ಹಾಗೂ ಜಾತಿ ವ್ಯವಸ್ಥೆಯನ್ನು ಛಿದ್ರಗೊಳಿಸಿ ಸಂಘಟನೆಗಳ ಬಲ ಹಿನ್ನಡೆಯಿಂದಾಗಿ ಕೇಂದ್ರ ಸಚಿವ ಅಮಿಶ್ ಷಾ ಅಂತಹವರು ಕೂಡ ಅಂಬೇಡ್ಕರ್ ಬಗ್ಗೆ ಹೀನಾಯವಾಗಿ ಅಪಮಾನ ಮಾಡುವ ಸಂದರ್ಭ ಬಂದಿದೆ ಎಂದು ದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು

ನಗರದ ನಚಿಕೇತನ ನಿಲಯದ ಬುದ್ದ ವಿಹಾರದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಸಂಘಟನೆಯ ವತಿಯಿಂದ ಜಿಲ್ಲಾ ಸಂಘಟನಾ ಸಂಚಾಲಕ ರೋಜರಪಲ್ಲಿ ವೆಂಕಟರಮಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜಕೀಯ ಇಚ್ಛಾಶಕ್ತಿಗಾಗಿ ಜಾತಿ ಜಾತಿಗಳ ಮಧ್ಯೆ ದ್ವೇಷವನ್ನು ಉಂಟು ಮಾಡಿದ್ದು ಅಲ್ಲದೇ ಜನಕ್ಕೆ ತಪ್ಪು ಸಂದೇಶಗಳನ್ನು ನೀಡಲು ಹೊರಟಿದ್ದಾರೆ ದಲಿತ ಸಂಘಟನೆಗಳು ಒಗ್ಗೂಡುವಿಕೆಯಿಂದ ಸಮಾಜದಲ್ಲಿ ಶೋಷಣೆ ದಬ್ಬಾಳಿಕೆ ತಡೆಗಟ್ಟಲು ಸಾಧ್ಯವಿದೆ ಎಂದರು.

ಶತಶತಮಾನಗಳಿಂದ ಸಮಾಜದ ಕೆಳವರ್ಗದವರು ಶೋಷಣೆಗೊಳಗಾಗುತ್ತಿದ್ದಾರೆ. ಅಧಿಕಾರ ಪಡೆಯುವ ಸಂದರ್ಭದಲ್ಲಿಯೇ ದಲಿತ ಸಮುದಾಯ ಒಡೆಯಿತು. ದಲಿತರಲ್ಲಿನ ಭಿನ್ನಾಭಿಪ್ರಾಯ ಹಾಗೂ ಅಸಹಾಯಕತೆಯಿಂದಾಗಿಯೇ ದಲಿತ ಸಂಘಟನೆ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ
ವಿವಿಧ ಕಾರಣಗಳಿಗೆ ದೂರವಾಗಿರುವ ಶೋಷಿತ ಸಮುದಾಯಗಳನ್ನು ಒಗ್ಗೂಡಿಸುವುದಕ್ಕೆ ಮೊದಲು ಆದ್ಯತೆ ನೀಡಬೇಕಿದೆ ಈ ಮೂಲಕ ಸಂಘಟನೆ ಬಲಪಡಿಸಿ ಶೋಷಿತರ ಪರ ಹೋರಾಟಕ್ಕೆ ಮುಂದಾಗಬೇಕಿದೆ. ಎಲ್ಲಿಯವರೆಗೆ ಶೋಷಿತರು ಜಾತಿ, ಉಪಜಾತಿ ವ್ಯವಸ್ಥೆಯಿಂದ ಹೊರಬರುವುದಿಲ್ಲವೋ ಅಲ್ಲಿವರೆಗೆ ಹೋರಾಟಗಳಿಗೆ ಬೆಲೆ ದೊರೆಯಲ್ಲ ಎಂದರು.

ಶೋಷಿತರ ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನೂ ಗೌರವಿಸುವ ವಾತಾವರಣ ಬೆಳೆಯಬೇಕು. ಒಗ್ಗಟ್ಟಿನ ಹೋರಾಟವಿಲ್ಲದೇ ಅಧಿಕಾರಕ್ಕೇರುವುದು ಅಸಾಧ್ಯ ಹೃದಯವಂತಿಕೆಯ ನಾಯಕತ್ವ ಸಂಘಟನೆಗೆ ಅವಶ್ಯಕ. ಆಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ ದಲಿತರ ಅಭಿವೃದ್ಧಿಗೆ ನ್ಯಾ ನಾಗಮೋಹನ್ ದಾಸ್ ಅಯೋಗದ ವರದಿಯಿಂದ ದಲಿತರ ಅಭಿವೃದ್ಧಿ ಸಾಧ್ಯ ಮನುವಾದಿ ಅಂತಹ ಮನಸ್ಥಿತಿಯನ್ನು ದೂರ ಇಡುವಂತೆ ಸಂಘಟಿತರಾಗಿ ಕೆಲಸ ಮಾಡೋಣ ಎಂದರು.

ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಕಟ್ಟಿ ವೆಂಕಟರಮಣ, ರೋಜರಪಲ್ಲಿ ವೆಂಕಟರಮಣ ಅವರ ಸಹೋದರ ನಾರಾಯಣಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಗೌನಪಲ್ಲಿ ವೆಂಕಟರಮಣ, ಚವ್ವೇನಹಳ್ಳಿ ವಿಜಿ, ಮುನಿಚೌಡಪ್ಪ, ಮುದವತ್ತಿ ಕೇಶವ, ಗೋವಿಂದರಾಜು, ವೆಂಕಟೇಶ್, ಚಂದ್ರಪ್ಪ, ಕೂಸಂದ್ರ ರೆಡ್ಡೆಪ್ಪ, ಮುನಿರಾಜು, ಚಂದ್ರಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

6 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

10 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

13 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

16 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

1 day ago