ಕೋಲಾರ: ತಾಲ್ಲೂಕಿನ ಸುಗಟೂರು ಹೋಬಳಿಯ ತುರಾಂಡಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯು ಅಧ್ಯಕ್ಷ ಟಿ.ಎಂ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆಯಿತು,
ಈ ಸಂದರ್ಭದಲ್ಲಿ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ, ಸಂಘದ ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ಸಹಕಾರದಿಂದ 2023-24ನೇ ಸಾಲಿನಲ್ಲಿ 8.46 ಲಕ್ಷದಷ್ಟು ಲಾಭಾಂಶ ಬಂದಿದ್ದು, ನಿವ್ವಳ ಲಾಭವು 4.86 ಲಕ್ಷ ಬಂದಿದೆ ಸುಮಾರು 15 ವರ್ಷದ ಹಿಂದೆ ಪ್ರಾರಂಭವಾದ ಡೇರಿಗೆ ಸ್ವಂತ ಕಟ್ಟಡವಿಲ್ಲವಾಗಿದ್ದು ಬಾಡಿಗೆ ಕಟ್ಟಡದಲ್ಲಿ ಇದ್ದು ಮುಂದೆ ಸ್ವಂತ ಕಟ್ಟಡವನ್ನು ನಿರ್ಮಿಸಲು ಸಂಘದ ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರ ಸಹಕಾರವು ಮುಖ್ಯವಾಗಿದೆ ಎಂದರು.
ಸಹಕಾರಿ ವ್ಯವಸ್ಥೆಯಲ್ಲಿ ರಾಜಕಾರಣವನ್ನು ತರದೇ ಪಕ್ಷಾತೀತವಾಗಿ ಅಭಿವೃದ್ಧಿಗೆ ಸಹಕರಿಸಬೇಕು ಹಾಲು ಡೇರಿಗಳು ಅಭಿವೃದ್ಧಿಯಾಗ ಬೇಕಾದರೆ ರೈತರು ಉತ್ತಮ ಕೊಬ್ಬಿನ ಅಂಶವಿರುವ ಹಾಲು ಸರಬರಾಜು ಮಾಡಿದಾಗ ಮಾತ್ರ ಡೇರಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೋಮುಲ್ ವಿಸ್ತಾರಣಾಧಿಕಾರಿ ನಾಗೇಂದ್ರ, ಡೇರಿ ಉಪಾಧ್ಯಕ್ಷ ಟಿ.ಸಿ ಶ್ರೀನಿವಾಸ್, ನಿರ್ದೇಶಕರಾದ ವೆಂಕಟಪ್ಪ, ಅಮರಾವತಮ್ಮ, ಟಿ.ವಿ.ನಾಗರಾಜ್, ಟಿ.ಕೆ.ಮಂಜುನಾಥ್, ಟಿ.ಕೆ.ವೆಂಕಟೇಶ್, ಟಿ.ಎನ್.ವೆಂಕಟೇಶ್, ಟಿ.ಎಂ.ಈರೇಗೌಡ, ಮುನಿಶಾಮಪ್ಪ ಸೇರಿದಂತೆ ಗ್ರಾಮದ ಮುಖಂಡರಾದ ಟಿ.ಎನ್.ರವಿ, ವಿಶ್ವನಾಥ್, ದಿನ್ನೂರು ನಾರಾಯಣಸ್ವಾಮಿ, ವೆಂಕಟೇಶಗೌಡ, ಟಿ.ಕೆ.ಶ್ರೀರಾಮ್ ಎನ್.ಶ್ರೀನಿವಾಸ್ ಕಾರ್ಯದರ್ಶಿ ಸಿ.ಆನಂದ್, ಹಾಲು ಪರೀಕ್ಷಕ ವೆಂಕಟೇಶ್ ಸಹಾಯಕ ನಾರಾಯಣಸ್ವಾಮಿ ಗ್ರಾಮಸ್ಥರು ಇದ್ದರು
ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…