ಆ ಹುಡುಗ ಶಾಲಾ ರಜಾ ದಿನಗಳಲ್ಲಿ ತನ್ನ ಸೋದರ ಮಾವನ ಮನೆಗೆ ಹೋಗುತ್ತಿದ್ದ. ಈ ವೇಳೆ ಎದುರು ಮನೆಯಲ್ಲಿದ್ದ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿದ್ದ ಯುವತಿ ಮೇಲೆ ಪ್ರೀತಿಯಾಗಿದೆ. ಶಾಲೆ ಬಿಟ್ಟು ಚಿಕ್ಕವಯಸ್ಸಿನಲ್ಲೇ ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು, ಕುಟುಂಬ ನಿರ್ವಹಣೆಗೆ ಕೆಲಸಕ್ಕೆ ಹೋಗುತ್ತಿದ್ದ. ತನಗಿಂತ ಎರಡು ವರ್ಷ ದೊಡ್ಡವಳಾದ ಡಾಕ್ಟರಮ್ಮನ ಪ್ರೀತಿ ಮಾಡಿದ ತಪ್ಪಿಗೆ ಬೀದಿ ಹೆಣವಾಗಿದ್ದಾನೆ. ಇನ್ನು ಎಲ್ಲಿ ಏನು ಅಂತೀರಾ ಈ ಸ್ಟೋರಿ ನೋಡಿ………..
ಮಗನನ್ನು ಕಳೆದುಕೊಂಡು ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ…
ಪ್ರೀತಿ ಮಾಡಿದ ತಪ್ಪಿಗೆ ಬೀದಿ ಹೆಣವಾಗಿ ಬಿದ್ದಿರುವ ಯುವಕ…. ಹೌದು ಇನ್ನು ಈ ಫೋಟೋದಲ್ಲಿ ಕಾಣುತ್ತಿರುವ ಯುವಕನ ಹೆಸರು ಪ್ರೀತಮ್(19). ಪ್ರೀತಿಸಿದ ತಪ್ಪಿಗೆ ಹೆಣವಾಗಿಬಿದ್ದಿದ್ದಾನೆ. ಈ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಬಳಿಯ ನೀರುಗುಂಟೆಪಾಳ್ಯದಲ್ಲಿ ನಡೆದಿದೆ.
ಇನ್ನು ಯುವಕ ತನ್ನ ಚಿಕ್ಕವಯಸ್ಸಿನಲ್ಲೇ ತನ್ನ ತಂದೆಗೆ ಅಪಘಾತವಾಗಿ ಕಾಲು ಮುರಿದಿದ್ದರಿಂದ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದ. ಹೀಗೆ ಸುಖವಾಗಿ ಜೀವನ ನಡೆಸುತ್ತಿದ್ದ ಯುವಕನ ಬಾಳಲ್ಲಿ ಬರ ಸಿಡಿಲಿನಂತೆ ಬಂದ ತನಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವಳಾದ ಯುವತಿಯ ಮೇಲೆ ಸ್ನೇಹ ಮಾಡಿ ಕೊನೆಗೆ ಪ್ರೀತಿಗೆ ತಿರುಗಿತ್ತು..
ಯುವಕ ಮಾಡಿದ್ದು ಇದೇ ತಪ್ಪು ನೋಡಿ, ಪ್ರೀತಿ ಮಾಡಿದ ತಪ್ಪಿಗೆ ಹುಡುಗಿಯ ಸಂಬಧಿಕರಾದ ಶ್ರೀಕಾಂತ್, ಹಾಗೂ ಸಂಜು ಅನ್ನೋ ವ್ಯಕ್ತಿಗಳು ಮೊದಲೇ ಪ್ಲಾನ್ ಮಾಡಿ ಮದುವೆಗೆ ಸಿಂಗಾರ ಮಾಡಿದ್ದ ಬ್ರೇಜ್ಜಾ ಕಾರ್ ನಲ್ಲಿ ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ತಮ್ಮ ಮಗನನ್ನು ಕಳೆದುಕೊಂಡ ತಾಯಿ ಹಾಗೂ ಸಂಬಂಧಿಕರು ನನ್ನ ಮಗನನ್ನ ಚಿಕ್ಕ ವಯಸ್ಸಿನಿಂದ ಏನು ತಪ್ಪು ಮಾಡದ ಹಾಗೆ ಬೆಳೆಸಿದ್ದೇವೆ. ಇಂತಹ ಅಮಾಯಕನನ್ನು ಹಿನಾಯವಾಗಿ ಕೊಂದು ನಮ್ಮ ಕುಟುಂಬಕ್ಕೆ ಆಸರೆ ಇಲ್ಲದೇ ಹಾಗೆ ಮಾಡಿದ್ದಾರೆ ಅಂತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಂದಹಾಗೆ ಯುವಕನ ಕುಟುಂಬ ದೇವನಹಳ್ಳಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೃತಪಟ್ಟ ಯುವಕ ಪಟ್ಟಣದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನೂ ಎಂಬಿಬಿಎಸ್ ವ್ಯಾಸಾಂಗ ಮಾಡ್ತಿದ್ದ ಯುವತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಯುವತಿಯ ಸಂಬಂಧಿಕರು ಯುವಕನಿಗೆ ಮೂರ್ನಾಲ್ಕು ಬಾರಿ ವಾರ್ನಿಂಗ್ ಸಹ ನೀಡಿದ್ದರು.
ವಾರ್ನಿಂಗ್ ಮಾಡಿದ್ರು ಪ್ರೀತಿ ಮುಂದುವರೆಸಿದ್ದ ಹಿನ್ನೆಲೆ, ಕಂಠಪೂರ್ತಿ ಕುಡಿದು ನಾಲ್ಕೈದು ಜನರಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ವೇಳೆ ಯುವಕ ಸಾವನಪ್ಪಿದ್ದು ಮೃತದೇಹವನ್ನು ಆರೋಪಿಗಳು ಬಿಸಾಕಿ ಎಸ್ಕೇಪ್ ಆಗಿದ್ದರು.
ಇನ್ನು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುವಕನ ಸಂಬಂಧಿಕರು ಆರೋಪಿಗಳ ಮೇಲೆ ದೂರು ನೀಡಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಬಂದ ಯುವತಿಯ ತಂದೆ ಹೇಳಿದ್ದೆ ಬೇರೆ ಮೃತಪಟ್ಟ ಯುವಕ ನನ್ನ ಮಗಳೊಂದಿಗೆ ಪ್ರತಿ ದಿನ ಮಾತನಾಡುತ್ತಿದ್ದು, ನನ್ಮ ಮಗಳ ಫೋಟೋಗಳನ್ನು ಇಟ್ಟಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ.. ಆದರೂ ಈ ಕೊಲೆಗೆ ನಮಗೆ ಸಂಬಂಧ ಇಲ್ಲ ಅಂತ ತಿಳಿಸಿದ್ದಾರೆ.
ದೇವನಹಳ್ಳಿ ಪೋಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಾರೆ ಯುವಕನ ಹತ್ಯೆ ಪ್ರಕರಣದಲ್ಲಿ ಪೊಲೀಸರು ಕಿಡ್ನಾಪ್ ಮಾಡಿದ್ದ ಕಾರು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇನ್ನು ಕೊಲೆ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಅಂತ ತನಿಖೆಯಲ್ಲಿ ಮತ್ತಷ್ಟು ಸ್ಟೋಟಕ ಮಾಹಿತಿಗಳು ಹೊರಬೀಳೋದು ಬಾಕಿ ಇದೆ.
ಆದರೆ ಡಾಕ್ಟರಮ್ಮನ ಪ್ರೀತಿಗೆ ಬಿದ್ದಿದ್ದ ಯುವಕ ಬೀದಿ ಹೆಣವಾಗಿದ್ದು ಮಾತ್ರ ದುರ್ದೈವ.
ರಾಜಕೀಯ ಪಕ್ಷಗಳ ಭಿನ್ನಮತದ ಸುತ್ತ, ಅಧಿಕಾರ ಕುರ್ಚಿಯ ಹಾವು ಏಣಿ ಆಟದ ಸುತ್ತ, ಸ್ವಾಮೀಜಿಗಳ ಪೀಠದ ಸುತ್ತ, ಧರ್ಮಸ್ಥಳದ ನಿಗೂಢ…
ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು…
ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…
ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…
ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…
ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…