ರಾಜಕೀಯ ದ್ವೇಷದಿಂದ ಜಮೀನಿನಲ್ಲಿ ಬೆಳೆದ ಟೊಮೆಟೊ, ಕ್ಯಾಪ್ಸಿಕಂ ಮತ್ತು ಗುಲಾಬಿ ಬೆಳೆಯನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಮಾಜಿ ಯೋಧರೊಬ್ಬರು ಜಿಲ್ಲಾಧಿಕಾರಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ದೇವನಹಳ್ಳಿ ತಾಲೂಕಿನ ಹಾರೋಹಳ್ಳಿಯ ಹೆಚ್.ಎಂ ರಾಜಗೋಪಾಲ್ ಮಾಜಿಯೋಧ, ಬಿಎಸ್ಎಫ್ನಲ್ಲಿ 35 ವರ್ಷ ದೇಶ ಸೇವೆ ಸಲ್ಲಿಸಿರುವ ಅವರು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿದ್ದರು. ಜೈ ಜವಾನ್, ಜೈ ಕಿಸಾನ್ ವಾಕ್ಯದಂತೆ ಕೃಷಿಕನಾಗುವ ಕನಸ್ಸು ಕಂಡಿದ್ದರು. ಆದರೇ ತಂದೆಯಿಂದ ಬಂದ 20 ಗುಂಟೆ ಜಮೀನಿನಲ್ಲಿ ಕೃಷಿ ಮಾಡೋದು ಅಸಾಧ್ಯವಾಗಿತ್ತು. ಆದ ಕಾರಣ ಗ್ರಾಮದ ಸರ್ವೆ ನಂಬರ್ 73ರ ಸರ್ಕಾರಿ ಗೋಮಾಳದ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು.
ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಫಾರಂ 57 ಅರ್ಜಿಯನ್ನೂ ಹಾಕಿದ್ದರು. ಆದರೆ, ರಾಜಕೀಯ ದ್ವೇಷದಿಂದ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ನಿವೇಶನ ಮಾಡಿಸಲು ಮಾಜಿ ಯೋಧನ ಜಮೀನಿನ ಮೇಲೆ ಕಣ್ಣು:
ಹಾರೋಹಳ್ಳಿ ಗ್ರಾಮದ ಸರ್ವೇ ನಂಬರ್ 73ರ ಸರ್ಕಾರಿ ಗೋಮಾಳದಲ್ಲಿ ಗ್ರಾಮದ ಬಹುತೇಕ ಜನರು ಸಾಗುವಳಿ ಮಾಡುತ್ತಿದ್ದಾರೆ. ಜಮೀನು ಮಂಜೂರಿಗಾಗಿ ಫಾರಂ 57 ಅರ್ಜಿ ಹಾಕಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ರಾಜಗೋಪಾಲ್ ಜಮೀನಿನಲ್ಲೇ ನಿವೇಶನ ಮಾಡಿಸಲು ನಿರ್ಣಯ ಕೈಗೊಂಡಿದ್ದಾರೆ. ಇದೇ ನೆಪ ಮಾಡಿಕೊಂಡ ರಾಜಕೀಯ ಮುಖಂಡರು ಏಕಾಏಕಿ ಬಂದು ಜಮೀನು ತೆರವು ಮಾಡಿದ್ದಲ್ಲದೆ, ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ, ಕ್ಯಾಪ್ಸಿಕಂ ಮತ್ತು ಗುಲಾಬಿ ಬೆಳೆ ನಾಶ ಮಾಡಿದ್ದಾರೆಂದು ರಾಜಗೋಪಾಲ್ ಧರಣಿ ನಡೆಸಿದ್ದಾರೆ.
ಮಾಜಿ ಯೋಧನ ಪತ್ನಿ ಪಕ್ಷ ಬಿಟ್ಟಿದ್ದಕ್ಕೆ ಕಿರುಕುಳ :
ರಾಜಗೋಪಾಲ್ ಪತ್ನಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಸೇನೆಯಿಂದ ನಿವೃತ್ತಿಯಾದ ನಂತರ ರಾಜಕೀಯದಿಂದ ಅವರು ದೂರ ಉಳಿದಿದ್ದರು. ಇದು ರಾಜಕೀಯ ದ್ವೇಷ ಸಾಧನೆಗೆ ಕಾರಣವಾಗಿದೆ. ಗ್ರಾಮದ ರಾಘವೇಂದ್ರ, ಸೊಣ್ಣೇಗೌಡ, ಹೆಚ್.ಜಿ ಶ್ರೀನಿವಾಸ್, ಚಂದ್ರಪ್ಪ ಮುನಿಯಪ್ಪ ಎಂಬುವರು ಸರ್ಕಾರದಿಂದ ನಿವೇಶನಕ್ಕಾಗಿ ಜಮೀನು ಮಂಜೂರಾಗದೆ ಇದ್ದರೂ ದ್ವೇಷ ಸಾಧನೆಗಾಗಿ ನಮ್ಮ ಸಾಗುವಳಿ ಜಮೀನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ರಾಜಗೋಪಾಲ್ ಹೇಳಿದ್ದಾರೆ. ಅಲ್ಲದೇ ಗ್ರಾಮದ ರಾಜಕೀಯ ಮುಖಂಡರ ಪಿತೂರಿಗೆ ಬೇಸತ್ತ ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆಗೆ ಕುಳಿತಿದ್ದಾರೆ. ದೇಶ ಸೇವೆ ಮಾಡಿದ ನನಗೆ ಕೃಷಿ ಮಾಡಲು ಎರಡು ಎಕರೆ ಜಮೀನು ಮಂಜೂರು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…
"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…