ಡಿ.ಕೆ‌ ಸುರೇಶ್ ರಾಜ್ಯಸಭೆಗೆ ಯತ್ನ ವಿಚಾರ: “ನಾನು ಅದರ ಆಕಾಂಕ್ಷಿ ಅಲ್ಲ- ನಾನು ಅಲ್ಲಿಗೆ ಹೋಗೋದು ಇಲ್ಲ”- ಡಿ.ಕೆ‌ ಸುರೇಶ್ ಸ್ಪಷ್ಟನೆ

ಬೆಂಗಳೂರು ಗ್ರಾಮಾಂತರ: ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಬಮೂಲ್ ಅಧ್ಯಕ್ಷ‌ ಡಿ.ಕೆ ಸುರೇಶ್ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ರಾಜ್ಯಸಭೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ನಾನು ರಾಜ್ಯಸಭೆಗೆ ಆಕಾಂಕ್ಷಿ ಅಲ್ಲ, ಅಲ್ಲಿಗೆ ಹೋಗುವುದಿಲ್ಲ” ಎಂದು ಹೇಳಿದರು.

ಸಿಎಂ ಬದಲಾವಣೆ ವಿಚಾರ:

ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಆಗುವ ಪ್ರಶ್ನೆಗೆ ಅವರು ನಗುಮುಖದಲ್ಲಿ “ಕಾದು ನೋಡೋಣ” ಎಂದು ಉತ್ತರಿಸಿ ಕುತೂಹಲ ಮೂಡಿಸಿದರು.

ತಮಿಳುನಾಡು ಸರ್ಕಾರ ರಚನೆ ವಿಚಾರ:

ತಮಿಳುನಾಡು ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ನಡೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಂತಿದೆ ಎಂದು ಆರೋಪಿಸಿದರು. ಹೆಚ್ಚು ಸ್ಥಾನ ಗಳಿಸಿದ ಪಕ್ಷಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದು ಸಂವಿಧಾನಾತ್ಮಕ ಕ್ರಮ ಎಂದು ಹೇಳಿದರು.

ರಾಜ್ಯಪಾಲರು ಸಂವಿಧಾನವನ್ನು ಕಾಪಾಡಬೇಕು, ಆದರೆ ಅವರ ನಡೆ ಸಂವಿಧಾನಕ್ಕೆ ಅಪಮಾನವಾಗುತ್ತಿದೆ ಎಂದು ಟೀಕಿಸಿದರು.

ಟಿವಿಕೆ–ಕಾಂಗ್ರೆಸ್ ಮೈತ್ರಿ ವಿಚಾರ:

ಅಲ್ಲಿ ಸ್ಪಷ್ಟ ಬಹುಮತದ ಪರಿಸ್ಥಿತಿ ಇಲ್ಲದ ಕಾರಣ, ಜಾತ್ಯಾತೀತ ತತ್ವಗಳ ಆಧಾರದಲ್ಲಿ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಇದು ಪ್ರಸ್ತುತ ರಾಜಕೀಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿರುವ ವಿಷಯ ಎಂದು ಹೇಳಿದರು..

Leave a Reply

Your email address will not be published. Required fields are marked *

error: Content is protected !!