ನ.12ರ ಭಾನುವಾರ ಸಂಜೆ ತಾಲೂಕಿನ ರಾಮೇಶ್ವರ ಗೇಟ್ ಸಮೀಪವಿರುವ ಖಾಸಗಿ ಡಾಬಾವೊಂದರಲ್ಲಿ ಯುವಕರು ಫೋಟೋ ಶೂಟ್ ಮಾಡಿಕೊಳ್ಳುತ್ತಿರವಾಗ ಕಿಡಿಗೇಡಿಗಳ ಗುಂಪೊಂದು ಸ್ಥಳಕ್ಕೆ ಬಂದು ಬೇಕಂತಲೇ ಕಿರಿಕ್ ಮಾಡಿ ಸೂರ್ಯ(ಸೂರಿ) ಎಂಬ ಯುವಕನಿಗೆ ಥಳಿಸಿ, ಕೈಯಲ್ಲಿದ್ದ ಮೊನಚಾದ ವಸ್ತುವಿನಿಂದ ಹೃದಯ ಭಾಗಕ್ಕೆ ಇರಿದು ಕೊಲೆ ಮಾಡಲಾಗಿತ್ತು. ಇರಿತದ ರಭಸಕ್ಕೆ ಸುಮಾರು ಒಂದೂವರೆ ಇಂಚು ಯುವಕನ ಹೃದಯದೊಳಗೆ ಹೊಕ್ಕಿದೆ ಎನ್ನಲಾಗಿದೆ.
ಘಟನೆ ವಿವರ
ಕೊಲೆಗೀಡಾದ ಯುವಕ ಸೂರ್ಯನಿಗೆ ಫೋಟೋಗ್ರಾಫಿಯ ಹವ್ಯಾಸ ಇತ್ತು, ನಿನ್ನೆ ಪ್ರಿವೆಡ್ಡಿಂಗ್ ಶೂಟ್ ಮಾಡಲು ಸ್ನೇಹಿತರಿಂದ ಕ್ಯಾಮೆರಾ ತೆಗೆದುಕೊಂಡು ಬಂದಿದ್ದ, ಪ್ರಿವೆಂಡ್ಡಿಂಗ್ ಶೂಟ್ ಮುಗಿದ ನಂತರ ತನ್ನ ಸ್ನೇಹಿತರ ಜೊತೆ ಫೋಟೋ ಶೂಟ್ ಮಾಡಲು ಎ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಗೆ ಬಂದಿದ್ದ, ರೆಸ್ಟೋರೆಂಟ್ ಮುಂಭಾಗದಲ್ಲಿನ ಸೀನರಿಯ ಮುಂದೆ ಫೋಟೋ ಶೂಟ್ ಮಾಡುವಾಗ, ಮದ್ಯ ಸೇವನೆಗೆಂದು ಬಂದಿದ್ದ ದಿಲೀಪ್ ಮತ್ತು ಆತನ ಸ್ನೇಹಿತರು ಡಾಬಾದಿಂದ ಹೊರಗೆ ಬಂದಿದ್ದಾರೆ, ದಿಲೀಪ್ ಮತ್ತು ಆತನ ಗ್ಯಾಂಗ್ ತಮ್ಮ ಫೋಟೋ ಹಿಡಿಯುವಂತೆ ಸೂರ್ಯನಿಗೆ ಹೇಳಿದ್ದಾರೆ, ಸೂರ್ಯ ಅವರ ಫೋಟೋಗಳನ್ನ ಸೆರೆ ಹಿಡಿದಿದ್ದಾನೆ, ತೆಗೆದ ಫೋಟೋಗಳನ್ನ ಮೊಬೈಲ್ ಗೆ ಕಳಿಸೆಂದು ದಿಲೀಪ್ ಗ್ಯಾಂಗ್ ನಲ್ಲಿದ್ದ ಒಬ್ಬ ಹೇಳಿದ್ದಾನೆ. ಕ್ಯಾಮೆರಾದಿಂದ ಮೊಬೈಲ್ ಗೆ ಫೋಟೋ ಕಳಿಸಲು ಆಗೋದಿಲ್ಲ ಎಂದೇಳಿದ್ದಾನೆ , ಇಷ್ಟಕ್ಕೆ ಕೋಪಗೊಂಡ ದಿಲೀಪ ಸೂರ್ಯನ ಕೈಯಿಂದ ಕ್ಯಾಮೆರಾ ಕಿತ್ತುಕೊಂಡಿದ್ದಾನೆ. ಇದರಿಂದ ಕೆರಳಿದ ಸೂರ್ಯ ದಿಲೀಪನ ಕುತ್ತಿಗೆ ಪಟ್ಟಿಯನ್ನ ಹಿಡಿದುಕೊಂಡಿದ್ದಾನೆ, ಈ ವೇಳೆ ದಿಲೀಪ ತನ್ನ ಕೈಯಲ್ಲಿದ್ದ ಚುಪಾದ ವಸ್ತುವಿನಿಂದ ಎದೆಗೆ ಚುಚ್ಚಿದ್ದಾನೆ, ಎದೆಯನ್ನ ಹಿಡಿದುಕೊಂಡ ಸೂರ್ಯ ಅಲ್ಲಿಯೇ ಕುಸಿದು ಬಿದ್ದಿದ್ದಾನೆ, ತಕ್ಷಣವೇ ಆಸ್ಪತ್ರೆಗೆ ಸೂರ್ಯನನ್ನ ಸಾಗಿಸಲಾಯಿತು, ಆದರೆ ತೀರ್ವ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ...? ವಾರ್ಡ್ ನಂ.: 1 ಹೆಸರು: ಶ್ವೇತಾ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಮತದಾನ ಡಿ.21ರಂದು ನಡೆದಿತ್ತು. ಇಂದು (ಡಿ.24)ರಂದು ಮತ ಎಣಿಕೆ ನಡೆದಿದ್ದು, ಬಿಜೆಪಿ 14, ಕಾಂಗ್ರೆಸ್…
ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…