ವಿದ್ಯಾರ್ಥಿಗಳು ಕಥೆಗಳನ್ನು, ಕಾದಂಬರಿಗಳನ್ನ, ಇತಿಹಾಸ ಕುರಿತಾದ ಕೃತಿಗಳನ್ನು ಓದುವ ನಿಟ್ಟಿನಲ್ಲಿ ನಿರತರಾಗಬೇಕು ಎಂದು ಶಾಸಕ ಟಿ ವೆಂಕಟರಮಣಯ್ಯ ತಿಳಿಸಿದರು. ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಸಾಹಿತ್ಯ ವೇದಿಕೆ ಕನ್ನಡ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು, ಅಂಕನಹಳ್ಳಿ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ಡಾ. ಎಂ ಚಿಕ್ಕಣ್ಣ ಅವರ ಟಿ.ಕೆ. ರಾಮರಾವ್ ಅವರ ಕಾದಂಬರಿಗಳು ಮತ್ತು ಸಾಮಾಜಿಕ ಸಂದರ್ಭ ಎಂಬ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಇತಿಹಾಸವನ್ನು ತಿರುಚುವ, ಮರೆಮಾಚುವ ಕೆಲಸಗಳು ಕಣ್ಮುಂದೆ ನಡೆಯುತ್ತಿವೆ, ವರ್ತಮಾನದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಕುಸಿತವನ್ನು ಕಂಡಿದೆ ಹೀಗಾಗಿ ಇಂದು ಖಾಸಗಿ ವಿದ್ಯಾಸಂಸ್ಥೆಗಳನ್ನು ನಡೆಸುವುದು ಕಷ್ಟವಾಗಿದೆ ಎಂದರು.
ಆಂಧ್ರ ಪ್ರದೇಶದ ಕುಪ್ಪಂನಾ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ಎಂ.ಎಸ್. ದುರ್ಗಾ ಪ್ರವೀಣ್ ಕೃತಿಯ ಕುರಿತು ಮಾತನಾಡಿ ಅಂತರ್‌ಶಿಸ್ತೀಯ ಅಧ್ಯಯನಗಳಿಗೆ ಆಕರವಾಗಬಲ್ಲ ಕೃತಿ ಡಾ. ಚಿಕ್ಕಣ್ಣನವರ ಈ ಟಿ.ಕೆ. ರಾಮರಾವ್ ಅವರ ಕಾದಂಬರಿಗಳು ಮತ್ತು ಸಾಮಾಜಿಕ ಸಂದರ್ಭ ಎಂಬ ಈ ಗ್ರಂಥವಾಗಿದೆ. ಡಾ. ರಾಜಕುಮಾರ್ ಅವರ ಪ್ರಖ್ಯಾತ ಚಲನಚಿತ್ರ ಬಂಗಾರದ ಮನುಷ್ಯ ಟಿ.ಕೆ. ರಾಮರಾವ್ ಅವರ ಕಾದಂಬರಿಯನ್ನು ಆಧರಿಸಿದ್ದು, ಕನ್ನಡದ ಯುವ ಜನತೆಗೆ ಚಲನಚಿತ್ರವಾಗಿಯೂ, ಕಾದಂಬರಿ ಆಗಿಯೂ ಸ್ಪೂರ್ತಿಯನ್ನು ನೀಡಿದಂತಹುದು, ಪ್ರಗತಿಶೀಲದ ನಂತರ ಕನ್ನಡಿಗರ ವಾಚನಾಭಿರುಚಿಯನ್ನು ಹೆಚ್ಚಿಸಿ ಓದುಗ ವಲಯಗಳನ್ನು ವಿಸ್ತರಿಸಿದ ಕೃತಿ ಟಿ. ಕೆ.ರಾಮರಾವ್ ಅವರದು.
ಅಶ್ಲೀಲತೆಯಿಂದ ದೂರವಾದ ಶುದ್ಧ ಪತ್ತೇದಾರಿ ಸಾಹಿತ್ಯಕ್ಕೆ ನಾಂದಿ ಹಾಡಿದ ಟಿ.ಕೆ ರಾಮರಾವ್ ಅವರ ಸಮಗ್ರ ಸಾಹಿತ್ಯವನ್ನು ಸೂಕ್ಷ್ಮವಾಗಿ ಸಂಶೋಧನೆಗೆ ಒಳಪಡಿಸಿದ ಡಾ.ಚಿಕ್ಕಣ್ಣ ಅವರು ಕನ್ನಡ ಮಹತ್ವದ ಲೇಖಕರ ಬಗ್ಗೆ ಒಂದು ಒಳನೋಟವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ, ಮಾಮೂಲು ಜಾಡಿಗಿಂತ ಭಿನ್ನವಾಗಿ ಹೊಸ ಸ್ವರೂಪದ ಸಂಶೋಧನೆಯನ್ನು ಡಾ. ಚಿಕ್ಕಣ್ಣನವರು ನೀಡಿದ್ದಾರೆ ಎಂದರು.
ಕೆ.ಎಂ ಎಫ್ ಹಾಗೂ ಬಮೂಲ್‌ನ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ವಿದ್ಯೆ, ಉದ್ಯೋಗ ಪಡೆದ ನಂತರ ಬಡವರಿಗೆ, ವೃದ್ಧರಿಗೆ, ಗುರು ಹಿರಿಯರಿಗೆ ಸಹಾಯ ಮಾಡುವ ಮನೋಧರ್ಮವನ್ನು ರೂಡಿಸಿಕೊಳ್ಳಬೇಕು ಎಂದರು.
ಶ್ರೀ ದೇವರಾಜ್ ಅರಸ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜೆ. ರಾಜೇಂದ್ರ ಮಾತನಾಡಿ ವಿದ್ಯಾಸಂಸ್ಥೆಯಲ್ಲಿ ಬೋಧಿಸುವ ಪ್ರಾಧ್ಯಾಪಕರು ಕೇವಲ ಬೋಧನೆಗೆ ಸೀಮಿತಗೊಳ್ಳದೆ ಸಂಶೋಧನ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಇಂದು ಜಾಗತಿಕ ಸಂದರ್ಭದಲ್ಲಿ ಸಂಶೋಧನೆಯು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರಿಗೂ ಸಂಸ್ಥೆಯು ಅನುಕೂಲವನ್ನು ಮಾಡಿಕೊಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಚ್.ಆರ್. ಮ್ಯಾನೇಜರ್ ಬಾಬುರೆಡಿ, ಪ್ರಾಂಶುಪಾಲ ಡಾ. ಸಿ.ಎಂ. ಸುರೇಂದ್ರರೆಡ್ಡಿ, ಕನ್ನಡಪರ ಹಿರಿಯ ಹೋರಾಟಗಾರರಾದ ತ.ನ ಪ್ರಭುದೇವ್, ಸಂಜೀವ್ ನಾಯಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳ ಮಹದೇವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶೈಲ.ಎ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ಆರ್ ರವಿಕಿರಣ್ ಮತ್ತಿತರರು ಹಾಜರಿದ್ದರು.
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…