Categories: ಲೇಖನ

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ ನಮ್ಮ ಸಾಮರ್ಥ್ಯ ಹೆಚ್ಚುವುದಿಲ್ಲ, ಬದಲಾಗಿ ನಮ್ಮಗರಿವಿಲ್ಲದೆ ನಮ್ಮ ಮೇಲೆ ಮಿತಿ ಹೇರುತ್ತದೆ. ಆ ನಿಟ್ಟಿನಲ್ಲಿ ಯೋಚಿಸಿದಾಗ…..

ಸಾಮಾಜಿಕ ಜಾಲತಾಣಗಳ ಮೂಲಕವೇ ನಮ್ಮಂತಹ ಹಲವರು ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದು, ಈಗ ಕನ್ನಡದ ಈ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗ್ಗೆ ವಿಧವಿಧವಾದ ಚಿತ್ರ ವಿಮರ್ಶೆಗಳು ಪ್ರಕಟವಾಗುತ್ತಿವೆ. ಬಹುತೇಕ ವಿಮರ್ಶೆಗಳು ಚಿತ್ರವನ್ನು ಟೀಕಿಸಿದರೆ, ಸ್ವಲ್ಪ ಮಾತ್ರ ಸಮಾಧಾನಕರ ಎಂತಲೂ, ಅವರೂ ಸಹ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಯಶ್ ಎಂಬ ನಟನ ಜನಪ್ರಿಯತೆ, ಹಣಕಾಸಿನ ವಹಿವಾಟನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಸ್ವಲ್ಪಮಟ್ಟಿಗೆ ಪ್ರಶಂಸೆ ಮಾಡುತ್ತಿದ್ದಾರೆ.

ನಾನು ಚಿತ್ರವನ್ನು ನೋಡಿಲ್ಲ. ಮುಂದೆ ಅವಕಾಶವಾದರೆ ಮಾತ್ರ ನೋಡುವೆ. ನೋಡದಿರುವ ಸಾಧ್ಯತೆಯೂ ಇದೆ. ಆದರೆ ಈ ವಿಷಯದಲ್ಲಿ ಚಿತ್ರದ ವಿಮರ್ಶೆಗಿಂತ, ವಿಮರ್ಶಕರ ಒಟ್ಟು ದೃಷ್ಟಿಕೋನ ಹೇಗಿರಬೇಕು ಎಂಬ ಬಗ್ಗೆ ನನ್ನದೂ ಒಂದು ಅಭಿಪ್ರಾಯ.

ಸಿನಿಮಾ, ಸಾಹಿತ್ಯ, ಸಂಗೀತ, ಉದ್ಯಮ, ಕ್ರೀಡೆ, ರಾಜಕೀಯ ಮುಂತಾದ ಯಾವುದೇ ಕ್ಷೇತ್ರವೇ ಆಗಿರಲಿ, ಅಲ್ಲಿ
ಅತಿಮಾನುಷ ಶಕ್ತಿ ಅಥವಾ ಸೂಪರ್ ಮ್ಯಾನ್ ಶಕ್ತಿಗೆ ಅವಕಾಶವಿರುವುದಿಲ್ಲ. ಅದೆಲ್ಲವೂ ಅತ್ಯಂತ ಸಹಜವಾಗಿ ನಡೆಯುತ್ತದೆ. ದೃಶ್ಯಗಳ ಜೋಡಣೆಯಲ್ಲಿ ಸೂಪರ್ ಮ್ಯಾನ್ ಅನ್ನು ಸೃಷ್ಟಿಸಬಹುದಷ್ಟೇ. ಆದರೆ ಇಂಗ್ಲೀಷಿನಲ್ಲಿ ಎಕ್ಸ್ಟ್ರಾಡಿನರಿ ಎನ್ನುವ, ಕನ್ನಡದ ಅತ್ಯದ್ಭುತ ಎಂದು ಹೇಳುವ ಸಾಮರ್ಥ್ಯಕ್ಕೆ ಸದಾ ಅವಕಾಶವಿರುತ್ತದೆ. ಇಲ್ಲಿ ಪವಾಡ, ಅತಿಮಾನುಶ ಶಕ್ತಿ ಮತ್ತು ಅದ್ಬುತ ಸಾಮರ್ಥ್ಯ ಇವುಗಳ ನಡುವಿನ ವ್ಯತ್ಯಾಸವನ್ನು ಗಮನಿಸಬೇಕು. ಪವಾಡ ಮತ್ತು ಅತಿಮಾನುಶಶಕ್ತಿ ಒಂದು ನಂಬಿಕೆ ಮತ್ತು ಭ್ರಮೆ. ಅದ್ಭುತ ಪ್ರತಿಭೆ ಮಾತ್ರ ವಾಸ್ತವ.

ಈಗ ಇರುವ ವ್ಯವಸ್ಥೆಯಲ್ಲಿಯೇ ಸಾಮಾನ್ಯ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಮರ್ಥ್ಯ ಪ್ರದರ್ಶಿಸಿ, ಅದ್ಭುತ ಸಾಧನೆ ಮಾಡುವ ಸಾಧ್ಯತೆ ಮತ್ತು ಅವಕಾಶ ಸದಾ ಇರುತ್ತದೆ. ಅದು ಎಲ್ಲರಿಂದಲೂ ಸಾಧ್ಯವಾಗದಿದ್ದರೂ ಅಪರೂಪದಲ್ಲಿ ಅಪರೂಪಕ್ಕೆ ಒಬ್ಬೊಬ್ಬರು ಬೃಹತ್ ಮಟ್ಟದ ಸಾಧನೆ, ವಿಶ್ವಮಟ್ಟದ ಸಾಧನೆ ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಆ ಸಾಧನೆಯನ್ನು ನಿರಂತರವೂ, ಅತಿಮಾನುಷವೂ, ಸೋಲೇ ಇಲ್ಲದ ಸಾಧನೆ ಎಂಬಂತೆ ಜನಮಾನಸದಲ್ಲಿ ಬಿತ್ತವುದು ಒಂದು ಟ್ರೆಂಡ್ ಆಗಿದ್ದು, ಇದು ಅಸಹಜ ಚಿಂತನೆ ಎಂಬಂತೆ ಕಾಣಬರುತ್ತದೆ.

ಯಶ್ ಮತ್ತು ಅವರ ಟಾಕ್ಸಿಕ್ ಚಿತ್ರ ಕೂಡ ವಿಫಲವಾಗಲು ಆ ಪವಾಡದ ನಿರೀಕ್ಷೆಯೇ ಕಾರಣವಾಗಿರುತ್ತದೆ. ಅಂದರೆ ಯಶ್ ಎಂಬ ವ್ಯಕ್ತಿ ಒಂದು ಸಾಧಾರಣ ಕುಟುಂಬದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಬಂದು, ಒಂದಷ್ಟು ಹೆಸರು ಮಾಡಿ, ಕೆಜಿಎಫ್ ಎಂಬ ಎರಡು ಭಾಗಗಳ ಚಿತ್ರದಲ್ಲಿ ಸಾಕಷ್ಟು ಸಾಮರ್ಥ್ಯ ಮೆರೆದು, ಹಣ ಮತ್ತು ಜನಪ್ರಿಯತೆ ಗಳಿಸಿ ಬೆಳೆದವರು. ಮುಂದೆ ಕೆಜಿಎಫ್ ಗಿಂತ ದೊಡ್ಡ ಮಟ್ಟದ ಅತ್ಯುತ್ತಮ ಚಿತ್ರ ಮಾಡಬೇಕೆಂದು ಪ್ರಯತ್ನ ಪಟ್ಟಿದ್ದಂತೂ ನಿಜ. ಆದರೆ ಪ್ರಯತ್ನ ಪಟ್ಟ ತಕ್ಷಣ ಎಲ್ಲವೂ ನಮ್ಮ ನಿರೀಕ್ಷಿತ ಮಟ್ಟಕ್ಕೆ ಬರಬೇಕೆಂದೇನೂ ಇಲ್ಲ. ಪ್ರಯತ್ನಕ್ಕೂ, ಸಾಮರ್ಥ್ಯಕ್ಕೂ ಮಿತಿ ಇದ್ದೇ ಇರುತ್ತದೆ. ಅವರು ಶ್ರಮ ಹೆಚ್ಚು ಹಾಕಿದರು, ವ್ಯಾವಹಾರಿಕ ತಂತ್ರಗಾರಿಕೆ ಉಪಯೋಗಿಸಿದರು. ಆದರೆ ಸಿನಿಮಾ ಎಂಬ ಕ್ರಿಯಾತ್ಮಕ ಶಕ್ತಿ ಮೂಲತಃ ಅವರೊಳಗೆ ಅಷ್ಟೊಂದು ತೀವ್ರವಾಗಿ ಇರಲಿಲ್ಲ. ಅಷ್ಟು ಸಾಮರ್ಥ್ಯವೂ ಕಂಡುಬರುವುದಿಲ್ಲ. ಅದರ ನಿರ್ದೇಶಕಿ ಸಹ ಒಂದು ಹಂತದ ಯಶಸ್ವಿ ಪಡೆದವರೆ ಹೊರತು ಅತ್ಯದ್ಭುತ ಎನ್ನುವಂತೆ ಏನು ಮಾಡಿರಲಿಲ್ಲ. ನಮಗೆ ಹಣ ಜನಪ್ರಿಯತೆ ಸಿಕ್ಕ ನಂತರ ಕ್ರಿಯಾತ್ಮಕತೆಯು ಅದೇ ಮಟ್ಟದಲ್ಲಿ ಬೆಳೆಯುತ್ತದೆ ಎಂದೇನೂ ಇಲ್ಲ. ಇದೇ ಸೃಷ್ಟಿಯ ಸಹಜತೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಕ್ರಿಯಾತ್ಮಕ ಚಿಂತನೆ ಎಲ್ಲೋ ಕೆಲವೊಮ್ಮೆ ಅತ್ಯಂತ ಸಹಜವಾಗಿ ಮೂಡಿ ಬರುವಂಥದ್ದು. ಅದನ್ನೇ ನೆಪವಾಗಿಟ್ಟುಕೊಂಡು, ಮತ್ತೆ ಮತ್ತೆ ಅದೇ ಶಕ್ತಿಯ ಮೇಲೆ ತೇಲುವುದು ಅಷ್ಟು ಸುಲಭವಲ್ಲ. ಅಷ್ಟು ಸಾಮರ್ಥ್ಯ ನಮ್ಮೊಳಗೆ ಇರುವುದೂ ಇಲ್ಲ. ಒಮ್ಮೆ ಒಂದು ದೊಡ್ಡ ಮಟ್ಟದ ಯಶಸ್ಸು ನಮ್ಮನ್ನು ಕಂಫರ್ಟ್ ಮತ್ತು ಲಕ್ಜ್ಸುರೀ ಜೋನಿಗೆ ಕೊಂಡೊಯ್ಯುತ್ತದೆ. ಬೇಡ ಬೇಡವೆಂದರೂ ಹಣ, ಜನಪ್ರಿಯತೆ, ಸಂಪರ್ಕಗಳು ದೊಡ್ಡ ಮಟ್ಟದಲ್ಲಿಯೇ ನಮ್ಮನ್ನು ಉಳಿಯುವಂತೆ ಮಾಡುತ್ತದೆ. ಸಮಾಜದ ಮೂಲಬೇರುಗಳೊಂದಿಗೆ ಸಹಜವಾಗಿ ಬೆರೆಯುವುದು ಸಾಧ್ಯವಾಗುವುದಿಲ್ಲ. ಜೊತೆಗೆ ಯಶಸ್ಸಿನ ಅಹಂ ಸ್ವಲ್ಪ ಮಟ್ಟಿಗಾದರೂ ನಮ್ಮ ತಲೆಗೆ ಏರಿರುತ್ತದೆ. ಮಾಧ್ಯಮಗಳು ಸಹ ನಮ್ಮನ್ನು ಬಹುದೊಡ್ಡ ಚಿಂತಕನೆಂತಲೋ, ಸಾಧಕನೆಂತಲೋ ನಮ್ಮ ಪ್ರತಿ ಮಾತನ್ನು ಹೊಗಳುವವರೇ ಆಗಿರುತ್ತಾರೆ. ಅದರ ಪರಿಣಾಮ ನಮಗರಿವಿಲ್ಲದೆ ನಮ್ಮ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಭ್ರಮೆ ಮತ್ತು ವಾಸ್ತವದ ನಡುವೆ ಕಂದಕ ನಿರ್ಮಾಣವಾಗಿರುತ್ತದೆ. ಅದರ ಪರಿಣಾಮವೇ ಟಾಕ್ಸಿಕ್ ರೀತಿಯ ಜನರಿಗೆ ಇಷ್ಟವಾಗದ ಸಿನಿಮಾ ನಿರ್ಮಾಣವಾಗುತ್ತದೆ. ಅದರಲ್ಲಿ ತಪ್ಪೇನು ಅಲ್ಲ, ಅದು ಬದುಕಿನ ಸಹಜ ಕ್ರಿಯೆ. ಮುಂದೆ ತಪ್ಪಿನಿಂದ ಪಾಠ ಕಲಿತರೆ ಯಶಸ್ಸು ಸಿಗಲೂಬಹುದು..

ಆ ಸಿನಿಮಾದ ಬಹುತೇಕ ವಿಮರ್ಶೆಗಳನ್ನು ಗಮನಿಸಿದಾಗ ಸಿನಿಮಾದಲ್ಲಿ ಭಾರತೀಯ ಅಥವಾ ಕನ್ನಡ ಮಣ್ಣಿನ ಸೊಗಡಿನ ಕಥೆಯ ಕೊರತೆ ಎದ್ದು ಕಾಣುತ್ತದೆ. ಒಂದು ಕ್ರಿಯಾತ್ಮಕ ಸಿನಿಮಾಗೆ ಇರಬೇಕಾದ ನೋಡಿಸಿಕೊಳ್ಳುವ ಗುಣ ಕಡಿಮೆಯಾಗಿದೆ. ಹಿಂಸೆ, ಅಬ್ಬರ, ಲೈಂಗಿಕತೆ, ತಂತ್ರಜ್ಞಾನ ಇವುಗಳನ್ನೇ ಬಿಡಿಬಿಡಿಯಾಗಿ ಜೋಡಿಸಿ ದೀರ್ಘ ಸಮಯದವರೆಗೆ ಸಿನಿಮಾವನ್ನು ಎಳೆದು, ತಾನು ತನ್ನ ನಟನಾ ಸಾಮರ್ಥ್ಯದಿಂದಲೇ, ಪ್ರಚಾರದ ಶಕ್ತಿಯಿಂದಲೇ ಗೆಲ್ಲಿಸಿಕೊಳ್ಳಬಹುದು ಎನ್ನುವ ಅಹಂ, ಜೊತೆಗೆ ಕೆಜಿಎಫ್ ಯಶಸ್ಸಿನಿಂದ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅವರೊಳಗಿನ ಸಹಜ ಸಾಮರ್ಥ್ಯ ಕಡಿಮೆಯಾಗಿ, ಕೃತಕ ಸಾಮರ್ಥ್ಯ ಹೆಚ್ಚಾಗಿ ಸಿನಿಮಾ ಎಂಬ ಕಲೆಯ ಮೂಲ ಅಂತ:ಶಕ್ತಿಯನ್ನೇ ಅವರು ಗುರುತಿಸದಾಗದೆ ಗೊಂದಲಕ್ಕೆ ಒಳಗಾಗಿದ್ದಾರೆ. ಅವರಿಗೂ ಮೇಲೆ ಏನೇ ಹೇಳಿದರೂ, ಒಳಗೆ ಸಿನಿಮಾ ಆ ಮಟ್ಟದಲ್ಲಿಲ್ಲ ಎಂಬ ಭಾವನೆ ಅಂತರ್ಯದಲ್ಲಿ ಬಂದಿರಬಹುದು. ಆದರೆ ಅದನ್ನು ಮತ್ತೆ ಮತ್ತೆ ಬದಲಾಯಿಸಲು ಸಾಧ್ಯವಿರುವುದಿಲ್ಲ. ಮತ್ತೆ ಬದಲಾಯಿಸಿ ಏನು ಮಾಡಬೇಕೆಂದು ಕೂಡ ಗೊಂದಲಕ್ಕೆ ಒಳಗಾಗುತ್ತಾರೆ.

ಕ್ರಿಯಾತ್ಮಕತೆ ಎಂಬುದೇ ಹಾಗೆ. ಅದು ಅಷ್ಟು ಸುಲಭವಲ್ಲ. ಪ್ರತಿ ದೃಶ್ಯವನ್ನು ಕಟ್ಟುವ ಕ್ರಿಯೆ, ಜನರ ನಾಡಿಮಿಡಿತವನ್ನು ಹಿಡಿದಿಡುವುದು ಅಷ್ಟು ಸುಲಭವಲ್ಲ. ಇದು ಕೇವಲ ಯಶ್ ಅವರಿಗೆ ಮಾತ್ರ ಸೀಮಿತವಲ್ಲ. ಅನೇಕ ನಿರ್ದೇಶಕರಿಗೆ, ಬರಹಗಾರಿಗೆ, ರಾಜಕೀಯ ನಾಯಕರಿಗೆ, ಉದ್ಯಮಗಳಿಗೆ ಆಗಾಗ ಕಾಡುತ್ತಲೇ ಇರುತ್ತದೆ. ಜೊತೆಗೆ ಸೋಲೆಂಬುದು ಸಹ ಬದುಕಿನ ಭಾಗ ಎಂಬುದನ್ನು ಮರೆಯಬಾರದು.

ನನ್ನ ಈ ಚಿಂತನೆಗಳು ಸಹಜವಾದದ್ದೇ ಹೊರತು ಇದಕ್ಕೆ ವಿರುದ್ಧವಾದ ಅಪರೂಪದ ಯಶಸ್ಸುಗಳು ಸಹ ಕಂಡುಬರುತ್ತದೆ. ಒಟ್ಟಾರೆ ಪ್ರಚಾರದ ಅಬ್ಬರದಲ್ಲಿ, ಅತಿ ಹೆಚ್ಚು ನಿರೀಕ್ಷೆಯಲ್ಲಿ ವಿಮರ್ಶೆ ಮಾಡದೆ ಸಹಜವಾಗಿ ನೋಡುವುದು. ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳುವುದೇ ಹೆಚ್ಚು ವಾಸ್ತವ. ಏಕೆಂದರೆ ಸೃಷ್ಟಿಯಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯ ಯಾರಲ್ಲಿಯೂ ತುಂಬಿ ತುಳುಕಾಡುವುದಿಲ್ಲ. ಅದಕ್ಕೆ ಸದಾ ಮಿತಿ ಇದ್ದೇ ಇರುತ್ತದೆ.

ಜೊತೆಗೆ ಕೊನೆಯದಾಗಿ, ಮಾನವೀಯ ಮೌಲ್ಯಗಳ ಪುನರ್ ನಿರ್ಮಾಣದ ಪ್ರಯತ್ನಿದಲ್ಲಿರುವ ನಮ್ಮಂತ ಸಾಮಾನ್ಯರಿಗೆ, ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ರೀತಿಯ ಹಿಂಸೆ, ಕೊಲೆ, ಸೆಕ್ಸ್, ಸೇಡು, ರೋಷ ಮುಂತಾದ ಅರಿಷಡ್ವರ್ಗಗಳ ಮೇಲೆ ನಿಯಂತ್ರಣವಿಲ್ಲದ ಸಿನಿಮಾಗಳು ಸೋಲುವುದೇ ಸಾಮಾಜಿಕ, ನಾಗರಿಕ ಮತ್ತು ಕಾನೂನಾತ್ಮಕ ಮೌಲ್ಯಗಳ ದೃಷ್ಟಿಯಿಂದ ಒಳ್ಳೆಯದು ಯಶ್ ಎಂದಿನಂತೆ ಅಣ್ತಮ್ಮಾಸ್ ಎನ್ನುವ ಮಂಡ್ಯ ಸೊಗಡಿನ ಚಿತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡರೆ ಉತ್ತಮ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಾದರೂ ಸಮಕಾಲಿನ ಸಮಸ್ಯೆಗಳನ್ನು ಗುರುತಿಸಿ ಚಿತ್ರ ಮಾಡುವ ಕಲೆ ಮೈಗೂಡಿಸಿಕೊಳ್ಳಬೇಕಿದೆ.
ಅವರೇ ಹೇಳಿದಂತೆ ಕಾಲಕ್ಕೆ ತಕ್ಕಂತೆ ಬದಲಾದರೆ ಈ ಕಾಲಘಟ್ಟದಲ್ಲಿ ಯಶಸ್ಸು ಸಹ ತಾತ್ಕಾಲಿಕ ಎಂಬುದನ್ನು ಮರೆಯಬಾರದು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ…

18 hours ago

ಬರದ ಬವಣೆಗೆ ಸಿಲುಕಿದ ದೊಡ್ಡಬಳ್ಳಾಪುರ: ಬರಪೀಡಿತ ಪಟ್ಟಿಗೆ ಸೇರ್ಪಡೆ

ಬೆಂಗಳೂರು ಗ್ರಾಮಾಂತರ: ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ದೊಡ್ಡಬಳ್ಳಾಪುರ ತಾಲೂಕು ಇದೀಗ ಬರಪೀಡಿತ ತಾಲೂಕುಗಳ ಪಟ್ಟಿಗೆ…

20 hours ago

50 ಲಕ್ಷ ಲಂಚ ಪಡೆಯುವಾಗ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ!

ಧಾರವಾಡ: ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವಿರುದ್ಧ…

21 hours ago

ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು-ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ

ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭೂತಪೂರ್ವ ವೇಗ ನೀಡಿದ್ದಾರೆ. ಒಂದೆಡೆ ಮೇಕೆದಾಟು ಯೋಜನೆ…

1 day ago

ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ ಪತ್ನಿ ಶವವಾಗಿ ಪತ್ತೆ: ಸಾವಿನ ಹಿಂದೆ ಕೊಲೆ ಶಂಕೆ; ಪತಿಯ ಚಲನವಲನಗಳ ಕುರಿತು ಪೊಲೀಸರಿಂದ ತನಿಖೆ

ದೊಡ್ಡಬಳ್ಳಾಪುರ: ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ 21 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮೃತರನ್ನು ಗೌರಿಬಿದನೂರು ತಾಲೂಕಿನ…

1 day ago

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಡಿ.ಜಿ. ನೇಮಕ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹ ಆಡಳಿತ ಉಸ್ತುವಾರಿಯಾಗಿ…

1 day ago