ಸರ್ವಜ್ಞ ನಗರದ ಜೀವನಹಳ್ಳಿಯಲ್ಲಿ ಫುಟ್ಬಾಲ್ ಟರ್ಫ್ ನಿರ್ಮಾಣಕ್ಕೆ ಕೇಳಿ ಬಂದಿರುವ ವಿರೋಧಕ್ಕೆ ಬಗ್ಗದೇ, ಕ್ರೀಡಾಂಗಣ ನಿರ್ಮಾಣ ಆಗಬೇಕೆಂದು ಆಗ್ರಹಿಸಿ ಸ್ಥಳೀಯರು ಕ್ರೀಡಾಂಗಣದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ಇಂಧನ ಸಚಿವರು ಹಾಗೂ ಸರ್ವಜ್ಞ ನಗರದ ಶಾಸಕರಾದ ಕೆ.ಜೆ.ಜಾರ್ಜ್ ಅವರ ದೂರದೃಷ್ಟಿಯ ಫಲವಾಗಿ ಜೀವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಾನದಂಡದಲ್ಲಿ ಫುಟ್ಬಾಲ್ ಟರ್ಫ್ ನಿರ್ಮಾಣವಾಗುತ್ತಿದೆ. ಆದರೆ, ಈ ಟರ್ಫ್ ಅನುಕೂಲಸ್ಥರಿಗೆ ಮಾತ್ರವೇ ಹೊರತು ಸಾಮಾನ್ಯರಿಗೆ ಈ ಕ್ರೀಡೆಯ ಸೌಲಭ್ಯವಿರುವುದಿಲ್ಲ. ಕ್ರೀಡಾಂಗಣ ಬಳಕೆಗೆ ಹಣ ಪೀಕಿಸುತ್ತಾರೆ ಎಂದು ಸ್ಥಳೀಯರೆಂದು ಬಿಂಬಿಸಿಕೊಂಡಿದ್ದವರು ಕೆಲ ದಿನಗಳ ಹಿಂದೆ ಅಪಪ್ರಚಾರ ಮಾಡಿದ್ದರು. ಇದನ್ನು ವಿರೋಧಿಸಿ, ಸರ್ವಜ್ಞನ ನಗರದ ಶಾಲಾ ಮಕ್ಕಳು ಸೇರಿದಂತೆ ಸ್ಥಳೀಯರು ಕ್ರೀಡಾಂಗಣದ ಬಳಿ ಪ್ರತಿಭಟನೆ ನಡೆಸಿದರು.
ಸಚಿವ ಕೆ.ಜೆ.ಜಾರ್ಜ್ ಅವರನ್ನು ಆದಷ್ಟು ಬೇಗ ಕ್ರೀಡಾಂಗಣವನ್ನು ಕಟ್ಟಿಕೊಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ‘ಜೀವನಹಳ್ಳಿಯಲ್ಲಿ ಇಂಥ ಗುಣಮಟ್ಟದ ಕ್ರೀಡಾಂಗಣ ಬರುತ್ತಿರುವುದನ್ನು ಸಹಿಸದ ವಿರೋಧಿಗಳು ಇಂಥ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇಂಥ ಟೊಳ್ಳು ಬೆದರಿಕೆಗೆ ಬಗ್ಗದೇ ನಮ್ಮ ಶಾಸಕರು ಕ್ರೀಡಾ ಸೌಕರ್ಯವನ್ನು ಒದಗಿಸಬೇಕು,’ ಎಂದು ಆಗ್ರಹಿಸಿದ್ದಾರೆ.
ಸರ್ವಜ್ಞ ನಗರ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷ ಮುತುವರ್ಜಿಯಿಂದ, ಸಿಎಸ್‌ಆರ್ ಅನುದಾನದಲ್ಲಿ ಜೀವನಹಳ್ಳಿಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಫುಟ್ಬಾಲ್ ಟರ್ಫ್ ನಿರ್ಮಿಸಲಾಗುತ್ತಿದೆ. ಕಾಂಪ್ಲೆಕ್ಸ್ ನೆಲ ಅಂತಸ್ಥಿನಲ್ಲಿ ಯೋಗ, ಜಿಮ್ನಾಷಿಯಮ್ ಹಾಗೂ ಮೊದಲ ಅಂತಸ್ಥಿನಲ್ಲಿ ಎರಡು ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಫುಟ್ಬಾಲ್ ಟರ್ಫ್ ಸುತ್ತಲೂ ವೀಕ್ಷಕರ ಗ್ಯಾಲರಿ ಸಿದ್ದವಾಗುತ್ತಿದೆ. ಆಧುನಿಕ ಶೈಲಿಯಲ್ಲಿ ಎದ್ದುನಿಂತಿರುವ ಕ್ರೀಡಾ ಸಂಕೀರ್ಣ ಮಕ್ಕಳಿಗೆ ಕ್ರೀಡಾ ಸ್ಪೂರ್ತಿಯ ತಾಣವಾಗಲಿದೆ ಎಂದು ಸ್ಥಳೀಯರು ಹೇಳಿದರು.
*ಅಮಲಿನ ಅಡ್ಡವಾಗಿದ್ದ ಸ್ಥಳ*
ಕ್ರೀಡಾಂಗಣ ತಲೆ ಎತ್ತುವ ಮೊದಲು ಸಂಜೆ ನಂತರ ಸ್ಥಳೀಯರು ವಿಶೇಷವಾಗಿ ಮಹಿಳೆಯರು, ಮಕ್ಕಳು ಈ ಕಡೆ ಬರಲು ಭಯ ಪಡುತ್ತಿದ್ದರು. ಕುಡುಕರು, ಪುಂಡರ ಹಾವಳಿಗೆ ಹೆಣ್ಣು ಮಕ್ಕಳು, ಸಣ್ಣ ಮಕ್ಕಳು ತತ್ತರಿಸಿದ್ದರು. ಈ ಸಮಸ್ಯೆಗೆ ಸಚಿವ ಕೆ.ಜೆ.ಜಾರ್ಜ್ ನೀಡಿದ ಪರಿಹಾರವೇ ‘ಕ್ರೀಡಾ ಹಬ್’ ನಿರ್ಮಾಣ. ಸಚಿವರ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದ ಸ್ಥಳೀಯರಿಗೆ ಕೆಲವರ ಅಪಪ್ರಚಾರ ಆತಂಕ ಸೃಷ್ಟಿಸಿದೆ. ಕನಸಿನ ಕ್ರೀಡಾಂಗಣದ ಯೋಜನೆ ಕೈಬಿಡಬಾರದು ಎಂದು ಆಗ್ರಹಿಸಿ ಜೀವನಹಳ್ಳಿ ಜನ ಇಂದು ಪ್ರತಿಭಟನೆ ನಡೆಸುವಂತಾಯಿತು.
“ಜೀವನಹಳ್ಳಿಯ ಈ ಕ್ರೀಡಾಂಗಣ ನಮ್ಮ ಮಕ್ಕಳಿಗೆ ಭವಿಷ್ಯದ ಕ್ರೀಡಾ ಸ್ಪೂರ್ತಿಯ ತಾಣವಾಗಬೇಕು. ಇಲ್ಲಿ ಕುಡುಕರು ಅಡ್ಡ ಮಾಡಿಕೊಂಡಿದ್ದರು. ಮಕ್ಕಳು- ಮಹಿಳೆಯರು ಈ ರಸ್ತೆಯಲ್ಲಿ ಓಡಾಡುವಂತಿರಲಿಲ್ಲ. ಸಚಿವರು ಕ್ರೀಡಾಂಗಣದ ಯೋಜನೆ ಘೋಷಿಸಿದಾಗ ನಮಗೆಲ್ಲ ಸಂತೋಷವಾಗಿತ್ತು. ಇಂಥ ಯೋಜನೆಯನ್ನು ವಿರೋಧಿಸುತ್ತಿರುವುದು ಸರಿಯಲ್ಲ. ಈ ಕ್ರೀಡಾಂಗಣದಿಂದ ಜೀವನಹಳ್ಳಿಯ ಮಕ್ಕಳಿಗೆ ಅನುಕೂಲವಾಗಲಿದೆ” ಎಂದು ಸ್ಥಳೀಯ ನಿವಾಸಿ ರಾಜಶೇಖರ್ ತಿಳಿಸಿದರು.
“ ಜೀವನಹಳ್ಳಿಯ ಮಹಿಳೆಯರಿಗೆ ಈ ಮೈದಾನ ಬಳಿ ಸುಳಿಯಲು ಭಯವಾಗುತ್ತಿತ್ತು. ನಮ್ಮ ನಾಯಕರಾದ ಕೆ.ಜೆ.ಜಾರ್ಜ್ ಅವರ ಸಮಯೋಚಿತ ನಿರ್ಧಾರದಿಂದ ಈ ಸ್ಥಳ ಈಗ ಕ್ರೀಡಾಂಗಣವಾಗುತ್ತಿದೆ. ಬೆಳಗ್ಗೆ, ಸಂಜೆ ವಾಕಿಂಗ್ ಮಾಡಲು ಅನುಕೂಲವಾಗಲಿದೆ. ಅಪಪ್ರಚಾರಕ್ಕೆ ಕಿವಿಗೊಡದೇ, ಆದಷ್ಟು ಬೇಗ ಕ್ರೀಡಾಂಗಣಣ ಸಿದ್ದಪಡಿಸಬೇಕು ಎಂದು ಮನವಿ ಮಾಡುತ್ತೇವೆ” ಎಂದು ಜೀವನಹಳ್ಳಿ ನಿವಾಸಿ ಅಶ್ವಿನಿ ದೇವಿ ಹೇಳಿದರು.
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…