ಜಿಲ್ಲಾಡಳಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಯುವಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಚಲನ(ರಿ.) ಸಹಯೋಗದೊಂದಿಗೆ ಜಾನಪದ ವಾದ್ಯ, ಜಾನಪದ ಗೀತೆ ಹಾಗೂ ಜಾನಪದ ನೃತ್ಯಗಳ ತರಬೇತಿ ಶಿಬಿರಕ್ಕೆ ನ. 4ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಾನಪದ ವಾಧ್ಯವನ್ನು ನುಡಿಸುವ ಮೂಲಕ ಉದ್ಘಾಟಿಸಲಾಯಿತು.
ಯುವ ಸಂಚಲನದ ಅಧ್ಯಕ್ಷರಾದ ಚಿದಾನಂದ ಮೂರ್ತಿಯವರು ಮಾತನಾಡಿ, “ಬಾಯಿಂದ ಬಾಯಿಗೆ ತಲುಪಿರುವ ಕಾರಣ ಜಾನಪದವು ಇನ್ನು ಉಳಿದಿದೆ. ಆದರೆ, ಈಗ ಜಾನಪದದ ಸ್ವರೂಪ ಬದಲಾಗಿ ಆಧುನಿಕ ಸಂಗೀತದ ಜೊತೆ ಸೇರಿ ಮೊಬೈಲ್ ಇಂದ ಮೊಬೈಲ್ ಗೆ ಫಾರ್ವರ್ಡ್ ಆಗುತ್ತಿದೆ. ಎಲ್ಲಾ ಹಾಡುಗಳಿಗೂ ಇತಿಹಾಸವಿರುತ್ತದೆ. ಹಾಡುಗಳಿಗೂ ಆರೋಗ್ಯಕ್ಕೂ ನೇರವಾಗಿ ಸಂಬಂಧವಿರುತ್ತದೆ. ಮಾನಸಿಕ ಖಿನ್ನತೆಯಿಂದ ಹೊರಬರಲು ಹಾಡುವುದು ಒಂದು ಔಷಧಿ. ಪ್ರದರ್ಶನಕ್ಕಲ್ಲದಿದ್ದರೂ ನಮ್ಮ ಖುಷಿಗಾಗಿಯಾದರು ವಾದ್ಯವನ್ನು, ಹಾಡುವುದನ್ನು ಕಲಿಯಬೇಕು. ತುಂಬಾ ನೊಂದವರು ನೋವಿನಿಂದ ಹೋರಬರಲು ವಾದ್ಯ ಬಳಸುತ್ತಿದ್ದರು” ಎಂದು ಹೇಳುತ್ತಾ ಜಾನಪದ ತರಬೇತಿಯ ಉದ್ದೇಶ ಹಾಗೂ ಸ್ಪರ್ಧೆಯು ಯಾವರೀತಿ ನಡೆಯುತ್ತದೆ ಎಂದು ತಿಳಿಸಿದರು.
ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ದಿವಾಕರ್ ನಾಗ್ ರವರು ಶಿಬಿರಾರ್ಥಿಗಳಿಗೆ ಜಾನಪದ ವಾದ್ಯಗಳಾದ ತಮಟೆ, ಚೌಡಿಕೆ, ಗೆಜ್ಜೆ, ದಮಡಿ, ಡಮರುಗ ಮುಂತಾದ ವಾದ್ಯಗಳ ಪರಿಚಯ ಮಾಡಿ ನಂತರ ಮೂಲ ಜಾನಪದ ಗೀತೆಯ ಇತಿಹಾಸವನ್ನು ತಿಳಿಸಿ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ, ಡಾ. ಭಾರತಿ ಸಾರ್ಮಾಜ್, ಡಾ. ನಂಜಪ್ಪ, ಡಾ.ಮಂಜುಳಮ್ಮ, ಮಹದೇವಯ್ಯ ಕೆ.ಎಂ, ದಿವ್ಯಶ್ರೀ ಹಾಗೂ ಯುವ ಸಂಚಲನ ತಂಡದ ಸದಸ್ಯರಾದ ಸಂಧ್ಯಾ ಮತ್ತು ನವೀನ್ ಉಪಸ್ಥಿತರಿದ್ದರು.
ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…
ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…
ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…
ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…
ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…
ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…