ಚಿನ್ನದ ಅಂಗಡಿಯಲ್ಲಿ ಚಿನ್ನ ದೋಚಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌: ಚಿನ್ನದ ಓಲೆ ಇದ್ದ ಬಾಕ್ಸ್‌ ಕದ್ದು ಎಸ್ಕೇಪ್‌: ಸದ್ಯ ಪೊಲೀಸರ ಅತಿಥಿಗಳಾದ ಬುರ್ಖಾ ಗ್ಯಾಂಗ್‌

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ಚಿನ್ನದ ಅಂಗಡಿಯಲ್ಲಿ ಚಿನ್ನ ದೋಚಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌ ನ್ನು ಬಂಧನ ಮಾಡಲಾಗಿದೆ. ಬಟ್ಟೆ ಖರೀದಿಸುವ ನೆಪದಲ್ಲಿ ಚಿನ್ನದ ಅಂಗಡಿಗೆ ಎಂಟ್ರಿ ಕೊಟ್ಟಿದ್ದ ಬುರ್ಕಾ ಗ್ಯಾಂಗ್‌.  ಚಿನ್ನದ ಓಲೆ ಇದ್ದ ಬಾಕ್ಸ್‌ ಕದ್ದು ಎಸ್ಕೇಪ್‌ ಆಗಿದ್ದ ಐದು ಜನ ಮಹಿಳೆಯರ ಗ್ಯಾಂಗ್‌. ಚಿಂತಾಮಣಿ ನಗರದ ಸೌಂದರ್ಯ್ಯ ಫ್ಯಾಷನ್‌ ಅಂಡ್‌ ಜುವೆಲರ್ಸ್‌ ಅಂಗಡಿಯಲ್ಲಿ ಕಳ್ಳತನ ಮಾಡಲಾಗಿತ್ತು. ಕಳ್ಳತನ ಮಾಡಿ ಒಂದು ವರ್ಷದ ಬಳಿಕ ಮಾಲ್‌ ಸಮೇತ ಖಾಕಿ ಬಲೆಗೆ ಬಿದ್ದ ಬುರ್ಖಾ ಗ್ಯಾಂಗ್‌. ಬುರ್ಖಾ ಗ್ಯಾಂಗ್‌ ಚಿನ್ನದ ಬಾಕ್ಸ್‌ ಕದ್ದಿದ್ದ ವೀಡಿಯೋ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಪ್ಪತ್ತೆಂಟು ಗ್ರಾಂ ತೂಕದ ಏಳು ಲಕ್ಷ ಬೆಲೆ ಬಾಳುವ ಹದಿನಾರು ಜೊತೆ ಓಲೆ ಬಾಕ್ಸ್‌ ಕದ್ದಿದ್ದ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಿಸಿ ಕ್ಯಾಮೇರಾ ವೀಡಿಯೋ ಆಧರಿಸಿ ಬುರ್ಕಾ ಗ್ಯಾಂಗ್‌ ಗೆ ಬಲೆ ಬೀಸಿದ್ದ ಖಾಕಿ ಪಡೆ. ಕೊನೆಗೂ ಐದು ಜನ ಮಹಿಳೆರಿದ್ದ ಖತರ್ನಾಕ್‌ ಬುರ್ಖಾ ಗ್ಯಾಂಗ್‌ ನ್ನು ಬಂಧನ ಮಾಡಲಾಗಿದೆ.

ಕೋಲಾರ ಮೂಲದ ನಗ್ಮಾ, ಜರೀನಾ, ನಗೀನಾ, ನವೀನಾ, ಮುಬೀನಾ ಬಂಧಿತ ಬುರ್ಖಾ ಗ್ಯಾಂಗ್‌.

ಕಳುವಾಗಿದ್ದ ಚಿನ್ನಾಭರಣಗಳನ್ನು ಅಂಗಡಿ ಮಾಲೀಕನಿಗೆ ಹಿಂದುರುಗಿಸಿದ ಪೊಲೀಸರು. ಆರೋಪಿಗಳಿಂದ ಎಪ್ಪತ್ತು ಗ್ರಾಂ ತೂಕದ ಸುಮಾರು ಏಳು ಲಕ್ಷ ಬೆಲೆ ಬಾಳುವ ಓಲೆ ಬಾಕ್ಸ್‌ ವಶಕ್ಕೆ ಪಡೆಯಲಾಗಿದೆ.

Ramesh Babu

Journalist

Recent Posts

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

2 minutes ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

11 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

18 hours ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

21 hours ago

ಪೆನ್ ಡ್ರೈವ್…….

ಪೆನ್ ಡ್ರೈವ್....... ನಾಚಿಕೆಯಿಂದ ತಲೆತಗ್ಗಿಸಿ ನಾನೂ ಈ ವಿಷಯವನ್ನೇ ಕುರಿತು ಬರೆಯುವ ಅನಿವಾರ್ಯ ಸೃಷ್ಟಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ...... ಬರಗಾಲ -…

23 hours ago

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…

1 day ago