ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ಮಿಸಿರುವ ‘ಕುವೆಂಪು ಥೀಮ್ ಪಾರ್ಕ್’ಅನ್ನು ಇಂಧನ ಮತ್ತು ಪ್ರಾವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಸಿ.ಬಿ.ಕೃಷ್ಣಬೈರೇಗೌಡ ಅವರು ಮಂಗಳವಾರ ಉದ್ಘಾಟಿಸಿದರು.

ಕೆಪಿಟಿಸಿಎಲ್ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಹೆಚ್‌ಬಿಆರ್‌ ಬಡಾವಣೆಯಲ್ಲಿ ಈ ಥೀಮ್ ಪಾರ್ಕ್ ನಿರ್ಮಿಸಿದೆ. ಉದ್ಯಾನ ಉದ್ಘಾಟಿಸಿ ಮಾತನಾಡಿದ ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, “ಹಸಿರು ಬೆಂಗಳೂರಿಗೆ ಈ ಥೀಮ್ ಪಾರ್ಕ್ ಅತ್ಯುತ್ತಮ ಕೊಡುಗೆಯಾಗಿದ್ದು, ಸ್ವಚ್ಛ ಮತ್ತು ಹಸಿರು ಬೆಂಗಳೂರು ನಿರ್ಮಾಣದ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ,” ಎಂದರು.

“ಕೆಪಿಟಿಸಿಎಲ್ ತನ್ನದೇ ಸ್ಥಳದಲ್ಲಿ ಸಿಎಸ್‌ಆರ್‌ ಅನುದಾನದಲ್ಲಿ ಈ ಸುಂದರ ಪಾರ್ಕ್ ನಿರ್ಮಿಸಿದೆ. ಇದರಿಂದಾಗಿ ಹೆಚ್‌ಬಿಆರ್‌ ಬಡಾವಣೆಯಲ್ಲಿ ಕುರುಚಲು ಕಾಡಿನಂತೆ ಇದ್ದ ಸ್ಥಳ ಈಗ ಆಕರ್ಷಕ ತಾಣವಾಗಿದೆ. ಈ ಪಾರ್ಕ್ ನಿರ್ಮಾಣಕ್ಕೆ ಸಹಕಾರ ನೀಡಿದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇದನ್ನು ಸುಂದರವಾಗಿ ನಿರ್ಮಿಸಲು ನೆರವಾದ ಕೆಪಿಟಿಸಿಎಲ್ ಅಧಿಕಾರಿಗಳು, ಸಿಬ್ಬಂದಿಗೆ ಕ್ಷೇತ್ರದ ಜನತೆ ಹಾಗೂ ಸಮಗ್ರ ಬೆಂಗಳೂರು ನಾಗರಿಕರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ,” ಎಂದು ತಿಳಿಸಿದರು.

ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, “ಸರ್ವಜ್ಞನಗರ ಕ್ಷೇತ್ರದ ಶಾಸಕರೂ ಆಗಿರುವ ಸಚಿವರಾದ ಕೆ.ಜೆ.ಜಾರ್ಜ್ ಅವರು ತಮ್ಮ ಇಲಾಖೆಯನ್ನು ಯಶಸ್ವಿಯಾಗಿ ನಡೆಸುತ್ತಿರುವುದಲ್ಲದೆ, ಸುಂದರ ಬೆಂಗಳೂರು ನಿರ್ಮಾಣಕ್ಕೂ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಕೆಪಿಟಿಸಿಎಲ್ ತನ್ನದೇ ಆಸ್ತಿಯನ್ನು ಕ್ಷೇತ್ರದ ಜನತೆಗೆ ಮುಕ್ತವಾಗಿಸಿದ್ದು, ನಿಗಮದ ಸಹಕಾರದಿಂದ ಗಿಡಗಂಟೆಗಳಿದ್ದ ಸ್ಥಳ ಈಗ ಅತ್ಯುತ್ತಮ ಉದ್ಯಾನವಾಗಿ ರೂಪತಳೆದಿದೆ. ಮಕ್ಕಳು ಹಿರಿಯರಾದಿಯಾಗಿ ಎಲ್ಲರಿಗೂ ಸ್ಥಳ ಸಮುದಾಯ ಚಟುವಟಿಕೆ ಕೇಂದ್ರವಾಗಿ ಮುನ್ನಡೆಯಲಿದೆ. ಬೆಂಗಳೂರನ್ನು ಸುಂದರಗೊಳಿಸುವ ಈ ತಾಣ ಮುಖ್ಯವಾಗಲಿದೆ,” ಎಂದು ಹೇಳಿದರು.

ಉದ್ಯಾನ ಲೋಕಾರ್ಪಣೆ ಬಳಿಕ ಸಚಿವರಿಬ್ಬರೂ ಒಂದು ಸುತ್ತು ಹಾಕಿ ಪಾರ್ಕ್ ವಿಶೇಷತೆಗಳನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಯೋಜನೆಗಳ ವಿಭಾಗದ ನಿರ್ದೇಶಕ ಆರ್‌.ಜಯಕುಮಾರ್, ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

*ಕುವೆಂಪು ಥೀಮ್ ಪಾರ್ಕ್ ವಿಶೇಷತೆ*:

ಥೀಮ್ ಪಾರ್ಕ್ ಮೂಲಕ ಹೆಚ್‌ಬಿಆರ್‌ ಬಡಾವಣೆಯ 1500 ಚದರ ಅಡಿ ಪ್ರದೇಶವನ್ನು ಹಸಿರು ವಲಯವಾಗಿ ರೂಪಿಸಲಾಗಿದೆ. 700 ಮೀಟರ್ ನಡಿಗೆ ಮಾರ್ಗ, 100 ಜನರು ಕುಳಿತುಕೊಳ್ಳುವ ಬಯಲ ರಂಗಮಂದಿರ, ಕುಡಿಯುವ ನೀರಿನ ಘಟಕ, ಶೌಚಾಲಯ, ಧ್ವಜಸ್ಥಂಭ, ವಿಶ್ರಾಂತಿಗಾಗಿ ಗಜೀಬೋ, ನಂದಿನಿ ಹಾಲಿನ ಕೇಂದ್ರ ಹಾಗೂ ಹಾಪ್‌ ಕಾಮ್ಸ್ ಮಳಿಗೆಗೆ ಸ್ಥಳವಾಕಾಶ ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಆಟದ ಸಾಮಾಗ್ರಿಗಳು ಹಾಗೂ ಓಪನ್ ಜಿಮ್ ಉಪಕರಣಗಳು ಹಾಗೂ ವಿಶ್ರಾಂತಿಗಾಗಿ ಕಲ್ಲು ಬೆಂಚುಗಳು, ವಿಶೇಷ ತಳಿಯ ಸಸ್ಯಗಳು, ಸುಸಜ್ಜಿತವಾದ ದೀಪದ ವ್ಯವಸ್ಥೆ ಎಲ್ಲವೂ ಪಾರ್ಕ್‌ನಲ್ಲಿದೆ. ಸುಮಾರು 4.65 ಕೋಟಿ ರೂ. ವೆಚ್ಚದಲ್ಲಿ ಕೆಪಿಟಿಸಿಎಲ್ ಈ ಪಾರ್ಕ್ ಅಭಿವೃದ್ದಿಪಡಿಸಿದೆ.

*ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*:

ಕುವೆಂಪು ಥೀಮ್ ಪಾರ್ಕ್ ಲೋಕಾರ್ಪಣೆಗೊಳಿಸಿದ ಬಳಿಕ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಕೃಷ್ಣಬೈರೇಗೌಡ ಅವರು, ಸರ್ವಜ್ಞನಗರದ ವಿವಿಧಡೆ ನಡೆಯುತ್ತಿರುವ ನಾಗವಾರ ಮುಖ್ಯ ರಸ್ತೆಯ ವೈಟ್‌ ಟಾಪಿಂಗ್, ಕಾಚರಕನಹಳ್ಳಿ ಕೆರೆ ಪುನರುಜ್ಜೀವನ ಕಾಂಗಾರಿಗಳು ಹಾಗೂ ಕಸ ವಿಂಗಣೆ ಕೇಂದ್ರವನ್ನು ಚಾಲನೆಗೊಳಿಸಿದರು. ಲಿಡ್ಕರ್ ಘಟಕ ಹಾಗೂ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಯೋಜಿಸಿರುವ ಮಾರುಕಟ್ಟೆ ಸ್ಥಳವನ್ನು ಪರಿಶೀಲನೆ ನಡೆಸಿದರು.

*ಸಚಿವ ಕೆ.ಜೆ.ಜಾರ್ಜ್ ಅವರನ್ನು ಅಭಿನಂದಿಸಿದ ಕೃಷ್ಣಬೈರೇಗೌಡ*

“ಬೆಂಗಳೂರು ಅಭಿವೃದ್ದಿಯಲ್ಲಿ ಈಗ ಹೊಸ ಪರ್ವ ಶುರುವಾಗಿದೆ. ಸಚಿವ ಕೆ.ಜೆ.ಜಾರ್ಜ್ ಅವರ ಸೂಚನೆ ಮೇರೆಗೆ ಕ್ಲೀನ್-ಅಪ್ ಬೆಂಗಳೂರು ಅಭಿಯಾನಕ್ಕೆ ಬೆಸ್ಕಾಂ ಅಭೂತಪೂರ್ವ ಸಹಕಾರ ನೀಡಿದೆ. ರಜಾದಿನಗಳಲ್ಲೂ ಬೆಸ್ಕಾಂ ಸಿಬ್ಬಂದಿ ನಗರಾದ್ಯಂತ ಸಮೀಕ್ಷೆ ನಡೆಸಿ ಪಾದಚಾರಿ ಮಾರ್ಗಗಳಲ್ಲಿನ ಅನುಪಯುಕ್ತ ಕಂಬಗಳು, ಪರಿವರ್ತಕಗಳು, ಮಾರ್ಗದಲ್ಲಿ ಅಡಚಣೆ ಮಾಡುತ್ತಿದ್ದ ಉಪಕರಣಗಳನ್ನು ತೆರವುಗೊಳಿಸಿದ್ದಾರೆ. ಇದರ ಜತೆಗೆ ಕಸವನ್ನೂ ತೆರವುಗೊಳಿಸಿದ್ದಾರೆ. ಅಭಿಯಾನದಲ್ಲಿ ಬೆಸ್ಕಾಂ ಮಹತ್ತರ ಪಾತ್ರವಹಿಸಿದೆ. ಇದಕ್ಕಾಗಿ ಸಚಿವರಾದ ಜಾರ್ಜ್ ಹಾಗೂ ಬೆಸ್ಕಾಂ ಅಧಿಕಾರಿ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ.” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಸಿ.ಬಿ.ಕೃಷ್ಣಬೈರೇಗೌಡ ಹೇಳಿದರು.

Ramesh Babu

Journalist

Recent Posts

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

11 hours ago

ರಾಜಾನುಕುಂಟೆ ಬಳಿ ರೈಲು ಬೋಗಿಗಳಿಗೆ ಬೆಂಕಿ: ಎರಡು ಬೋಗಿಗಳು ಸುಟ್ಟು ಭಸ್ಮ

ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…

17 hours ago

ಮಧುರೆ ಕೆರೆಯಲ್ಲಿ ಮಣ್ಣು ದಂಧೆ ಆರೋಪ: ಸುಮಾರು 35 ಟ್ರ್ಯಾಕ್ಟರ್, 5 ಜೆಸಿಬಿಗಳ ಅಬ್ಬರ; ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ಬ್ರೇಕ್!

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್‌ಗಳು…

18 hours ago

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

24 hours ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

1 day ago

ಸ್ಟಿಂಗ್ ವಿಡಿಯೋ ವಿವಾದ: ಪೊಲೀಸ್ ತನಿಖೆ, ನ್ಯಾಯಾಲಯದ ಮೊರೆ ಹೋದ ಮಾಜಿ ಸಿಎಂ ಸಿದ್ದರಾಮಯ್ಯ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ…

1 day ago