ಗ್ರಾಮಗಳಲ್ಲಿ ರಾಜಕೀಯ ಮಾಡಲು ಹಾಲು ಉತ್ಪಾದಕ ಸಹಕಾರ ಸಂಘಗಳು ವೇದಿಕೆಯಾಗಬಾರದು. ರಾಜಕೀಯ ಕೇವಲ ಎಂಎಲ್ಎ, ಎಂಪಿ, ತಾಲ್ಲೂಕು, ಜಿ.ಪಂ ಚುನಾವಣೆಗಳಲ್ಲಿರಲಿ. ಸಹಕಾರ ರಂಗದಲ್ಲಿ ರಾಜಕೀವಿದ್ದರೆ ಅಭಿವೃದ್ಧಿ ಶೂನ್ಯವಾಗುತ್ತದೆ ಎಂದು ಬಮೂಲ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ನೂತನ ಎಂಪಿಸಿಎಸ್ ಕಟ್ಟಡ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಹಾಲಿನ ಡೇರಿಗಳು ಪಕ್ಷಾತೀತವಾಗಿ ನಡೆಯಬೇಕು. ಡೇರಿಗಳ ಕಾರ್ಯದರ್ಶಿ, ಅಧ್ಯಕ್ಷರುಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಸಂಘಗಳು ಅಭಿವೃದ್ಧಿಯಾಗುತ್ತವೆ. ಹಾಲಿ ತಾಲ್ಲೂಕಿನ 204 ಡೇರಿಗಳಲ್ಲಿ 200 ಡೇರಿಗಳು ಲಾಭದಲ್ಲಿವೆ. ನಿಮ್ಮ ಗ್ರಾಮದ ಎಂಪಿಸಿಎಸ್ ನಲ್ಲಿ ಯಾವುದೇ ಲೋಪದೋಷಗಳಿದ್ದರೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಟಿಎಪಿಎಂಸಿಎಸ್ ಅಧ್ಯಕ್ಷ ಆಂಜನೇಗೌಡ ಮಾತನಾಡಿ, ಇಡೀ ದೇಶದಲ್ಲಿಯೇ ಸಹಕಾರಿ ರಂಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬೆಳೆದಿರುವ ಸಂಸ್ಥೆ ಕೆಎಂಎಫ್ ಆಗಿದೆ. ರೈತರಿಗಾಗಿ ಸ್ಥಾಪನೆ ಮಾಡಲಾಗಿರುವ ಕೆಎಂಎಫ್ ಸಂಸ್ಥೆ ಲಕ್ಷಾಂತರ ಕುಟುಂಬಗಳಿಗೆ ಆಧಾರಸ್ತಂಭವಾಗಿದೆ ಎಂದರು.
ಇಂದಿನ ಪರಿಸ್ಥಿತಿಯಲ್ಲಿ ರೈತರ ಜೀವನ ಡೋಲಯಾನವಾಗಿದೆ. ರೈತರಿಗೆ ಗ್ಯಾರಂಟಿ ಹಣದ ವಹಿವಾಟು ಆಗುವುದು ಹಾಲಿನ ಡೇರಿಗಳ ಮೂಲಕ ಮಾತ್ರ. ಹೈನೋದ್ಯಮ ಕಾಲ ಕ್ರಮೇಣ ಕ್ಷಿಣಿಸಿದರೆ ಮುಂದಿನ ದಿನಗಳಲ್ಲಿ ಬೃಹತ್ ಆಹಾರ ಕ್ರಾಂತಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಡೇರಿ ಉಪ ವ್ಯವಸ್ಥಾಪಕ ಎಲ್.ಬಿ ನಾಗರಾಜು, ಮುನಿರಾಜೇಗೌಡ, ವಿಸ್ತಾರಣಾಧಿಕಾರಿಗಳಾದ ಕುಸುಮಾ, ಪ್ರಭು, ಹಾಲು ಪರೀಕ್ಷಕ ಸತೀಶ್, ಸಹಾಯಕ ನಾಗರಾಜು, ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ ಸುರೇಶ್, ಗಂಗಯ್ಯ, ಕೆಸ್ತೂರು ಗ್ರಾ.ಪಂ ಅಧ್ಯಕ್ಷ ರಮೇಶ್. ಉಪಾಧ್ಯಕ್ಷೆ ಆಂಜಿನಮ್ಮ, ಎಂಪಿಸಿಎಸ್ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಮಮತ, ಡೇರಿ ಮುಖ್ಯಕಾರ್ಯನಿರ್ಹಾಹಕ ಚನ್ನಕೇಶವಮೂರ್ತಿ ಸೇರಿದಂತೆ ಇತರರು ಇದ್ದರು.
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…