ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಹಾನದಿ ನಾರ್ದರ್ನ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಪ್ರಸಂಜಿತ್ ದಾಸ್ ಅವರ ಬಳಿ ಒಟ್ಟು 21,88,620 ನಗದನ್ನು ಪತ್ತೆಹಚ್ಚಿದ್ದಾರೆ.

ಕಟಕ್ ಜಿಲ್ಲೆಯ ಜಗತ್ಪುರದಲ್ಲಿರುವ ಮಹಾನದಿ ನಾರ್ದರ್ನ್ ವಿಭಾಗದಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಂಜಿತ್ ದಾಸ್ ಅವರು, ಶುಕ್ರವಾರ ತಡರಾತ್ರಿ ಭುವನೇಶ್ವರದ ಎ.ಜಿ. ಚೌಕ್ ಸಮೀಪ ಅಧಿಕೃತವಾಗಿ ಬಾಡಿಗೆಗೆ ಪಡೆದಿದ್ದ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಜಿಲೆನ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಅವರ ಬಳಿಯಿದ್ದ 7,28,620 ನಗದು ಪತ್ತೆಯಾಗಿದೆ.

ಇದಾದ ಬಳಿಕ ಶನಿವಾರ ಬೆಳಗಿನ ಜಾವ ಅವರ ಬಾಡಿಗೆ ಮನೆ ಹಾಗೂ ಪಿತ್ರಾರ್ಜಿತ ಮನೆಯ ಮೇಲೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಬಾಡಿಗೆ ಫ್ಲ್ಯಾಟ್‌ನಲ್ಲಿ ನಡೆಸಿದ ಶೋಧದ ವೇಳೆ ಹೆಚ್ಚುವರಿಯಾಗಿ 14,60,000 ನಗದು ಪತ್ತೆಯಾಗಿದೆ.

ಒಟ್ಟು 21,88,620 ಹಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಲೆಕ್ಕಪತ್ರ ಹಾಗೂ ಮೂಲವನ್ನು ತಿಳಿಸಲು ಪ್ರಸಂಜಿತ್ ದಾಸ್ ವಿಫಲರಾದ ಹಿನ್ನೆಲೆಯಲ್ಲಿ, ವಿಜಿಲೆನ್ಸ್ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಪತ್ತೆಯಾದ ಹಣದ ಮೂಲ ಹಾಗೂ ಅಕ್ರಮವಾಗಿ ಸಂಪಾದಿಸಿದ ಹಣವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಈ ಸಂಬಂಧ ಭುವನೇಶ್ವರ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Ramesh Babu

Journalist

Recent Posts

ಬುಡಸಮೇತ ಧರೆಗುರುಳಿದ ಬೃಹತ್ ಮರ: ವಾಹನಗಳು ಜಖಂ

ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ (ಟಿಬಿ ವೃತ್ತ) ಸಮೀಪದ ಪ್ರವಾಸಿ ಮಂದಿರದ ಬಳಿ ಬೃಹತ್ ಮರವೊಂದು ಬುಡಸಮೇತ ಧರೆಗುರುಳಿದ…

2 hours ago

ಪತ್ನಿ ಸೇರಿ ಒಂದೇ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಂದ ಪತಿ!: ಮೃತದೇಹಗಳನ್ನು ನಂದಿಬೆಟ್ಟದ ಸುತ್ತಮುತ್ತ ಎಸೆದ ಆರೋಪ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು…

11 hours ago

ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ…….

ಬದುಕೆಂಬ ಕಟ್ಟಡದ ಒಳಗೆ ನಿಂತು........ ಇದು ನಿರಾಶಾವಾದವಲ್ಲ ಅಥವಾ ವೈರಾಗ್ಯವೂ ಅಲ್ಲ. ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ............ ಇತ್ತೀಚೆಗೆ…

13 hours ago

ನಾಳೆ ದೊಡ್ಡಬಳ್ಳಾಪುರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 6ರಂದು (ಶುಕ್ರವಾರ) ಬೆಳಿಗ್ಗೆ…

24 hours ago

ನ.28 ಕ್ಕೆ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ

2027-28ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಯಲಿರುವ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST-2027) ಯು ನವೆಂಬರ್…

1 day ago

3 ಎಕರೆ ಜಮೀನಿನಲ್ಲಿ 17 ಲಕ್ಷ ಆದಾಯ: ಸಮಗ್ರ ಕೃಷಿಯಿಂದ ರೈತಕವಿ ರಾಜಣ್ಣ ಸಾಧನೆ

  ದೊಡ್ಡಬಳ್ಳಾಪುರ: ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವುದಷ್ಟೇ ಮುಖ್ಯವಲ್ಲ, ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಂಡು ಉತ್ತಮ ಬೆಲೆ ಪಡೆಯುವುದೂ ಅಷ್ಟೇ…

1 day ago