ಕ್ಷಯ ರೋಗ ಬಗ್ಗೆ ಜಾಗೃತಿ ಮೂಡಿಸಲು ಕ್ಷಯ ಗೆದ್ದ ಚಾಂಪಿಯನ್ ಗಳಿಗೆ ತರಬೇತಿ‌

ಕ್ಷಯ ರೋಗ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಪಡೆದ ಟಿಬಿ ಚಾಂಪಿಯನ್ ಗಳು ಮುಂದಿನ ದಿನಗಳಲ್ಲಿ ಟಿಬಿ ಕಾಯಿಲೆಗೆ ತುತ್ತಾಗಿ ಬರುವ ಹೊಸ ಟಿಬಿ ರೋಗಿಗಳಿಗೆ ಮನೋಸ್ಥೈರ್ಯ ನೀಡಿ ಚಿಕಿತ್ಸೆ ಪೂರ್ಣವಾಗಿ ಪಡೆದು ಬೇಗ ಗುಣಮುಖರಾಗುವಂತೆ ಮಾನವೊಲಿಸುವ ಮೂಲಕ ಕ್ಷಯ ಮುಕ್ತ ಭಾರತದ ನಿರ್ಮಾಣಕ್ಕೆ ಸಹಾಯಕವಾಗಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲೆಕ್ಕ ಕೃಷ್ಣಾರೆಡ್ಡಿ ಹೇಳಿದರು.

ಕ್ಷಯ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಷಯರೋಗದ ವಿರುದ್ಧ ಹೋರಾಡಿ ಗೆದ್ದು ಬಂದ ಟಿಬಿ ಚಾಂಪಿಯನ್ ಗಳಿಗೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಜನರನ್ನು ಭಯಭೀತರನ್ನಾಗಿಸಿದ್ದ ಕಾಯಿಲೆಗಳಲ್ಲಿ ಕ್ಷಯ ರೋಗ ಅಥವಾ ಟಿಬಿ ಕೂಡ ಒಂದು. ಒಬ್ಬರಿಂದ ಇನ್ನೊಬ್ಬರಿಗೆ ಸಾಂಕ್ರಾಮಿಕವಾಗಿ ಹರಡುವ ಈ ಕ್ಷಯರೋಗಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ಕಂಟಕ ಎದುರಾಗಬಹುದು ಎಂದರು.

ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಚಿಕಿತ್ಸೆಯನ್ನು ಪಡೆದು ಟಿಬಿಯಿಂದ ಗುಣಮುಖರಾಗಿರುವ ವ್ಯಕ್ತಿಗಳು ಟಿಬಿ ಚಾಂಪಿಯನ್ ಗಳಾಗಿದ್ದು, ಇವರುಗಳಲ್ಲಿ ಕೆಲ ಚಾಂಪಿಯನ್ ಗಳನ್ನು ಆಯ್ಕೆ ಮಾಡಿ ಕ್ಷಯ ರೋಗಿಗಳಿಗೆ ಜಾಗೃತಿ ಮೂಡಿಸಲು ಸಲುವಾಗಿ ಇಂದು ತರಬೇತಿ ಹಮ್ಮಿಕೊಳ್ಳಲಾಗಿದೆ. ತಿಳಿವಳಿಕೆಯ ಕೊರತೆಯಿಂದ ಬಹಳಷ್ಟು ಜನ ತಮ್ಮಲ್ಲಿರುವ ಕ್ಷಯದ ಬಗ್ಗೆ ಚಿಂತಿಸುತ್ತಿಲ್ಲ. ಇಂತಹವರು ಕಾಯಿಲೆಯನ್ನು ಉಲ್ಬಣ ಮಾಡಿಕೊಳ್ಳುವುದಲ್ಲದೆ, ತಮ್ಮ ರೋಗಾಣುಗಳನ್ನು ಉಸಿರು, ಕೆಮ್ಮು, ಕಫದ ಮೂಲಕ ಹೊರಚೆಲ್ಲಿ ಸಾವಿರಾರು ಜನರಿಗೆ ರೋಗವನ್ನು ಅಂಟಿಸುವ ವಾಹಕಗಳಾಗುತ್ತಿದ್ದಾರೆ. ಇನ್ನು ಕೆಲವು ಮಂದಿ ಕ್ಷಯ ರೋಗಕ್ಕೆ ಅಂಟಿರುವ ಕಳಂಕಕ್ಕೆ ಹೆದರಿ ಕಾಯಿಲೆಯನ್ನು ಹಾಗೇ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹ ನಡವಳಿಕೆಯ ಜನರಿಂದಲೇ ಇತರರಿಗೆ ಹರಡುವ ಕ್ಷಯದ ಪ್ರಮಾಣ ಅತ್ಯಂತ ಘೋರವಾಗಿದೆ. ಆದ್ದರಿಂದ ಕ್ಷಯ ಗೆದ್ದ ಚಾಂಪಿಯನ್ ಗಳಿಂದಲೇ ಕ್ಷಯ ರೋಗಿಗಳಿಗೆ ಜಾಗೃತಿ ಮೂಡಿಸಿ ಬೇಗ ಗುಣಮುಖರನ್ನಾಗಿಸಿ ಕ್ಷಯಮುಕ್ತ ತಾಲೂಕನ್ನಾಗಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಕ್ಷಯದ ಲಕ್ಷಣಗಳು ಕಂಡುಬಂದವರು ಅಲಕ್ಷಿಸದೆ ತಕ್ಷಣವೇ ಪರೀಕ್ಷೆಗೆ ಒಳಗಾಗಬೇಕು. ಕೇಂದ್ರ ಸರ್ಕಾರದ ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದಡಿ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯವನ್ನು ಪ್ರತಿ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇಲ್ಲಿ ಕಫ ಪರೀಕ್ಷೆಯ ಮೂಲಕ ಕಾಯಿಲೆಯನ್ನು ಪತ್ತೆ ಮಾಡಿ ಔಷಧಿ ಕೊಡಲಾಗುತ್ತದೆ ಎಂದು ಹೇಳಿದರು.

ಕ್ಷಯ ರೋಗದ ನಿವಾರಣೆ ದೇಶಕ್ಕೆ ಅತಿ ಮುಖ್ಯ. ಹೀಗಾಗಿ ಸರ್ಕಾರ ಅತ್ಯಂತ ದಕ್ಷತೆಯಿಂದ ಕ್ಷಯ ನಿಯಂತ್ರಣ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದು, ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸುವುದೇ ಮುಖ್ಯ ಗುರಿ ಎಂದರು.

ಭಾಗವಹಿಸಿದ್ದರು.ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ ನಾಗೇಶ್ ಮಾತನಾಡಿ, ಚಿಕಿತ್ಸೆ ಪ್ರಾರಂಭಿಸಿದ ನಂತರ ರೋಗಿಯು ಅರ್ಧದಲ್ಲಿ ಚಿಕಿತ್ಸೆ ಬಿಟ್ಟರೆ, ಆತನಿಗೆ ತನ್ನ ಚಿಕಿತ್ಸೆಯ ಅನುಭವಗಳು ಮತ್ತು ಉದಾಹರಣೆಗಳನ್ನು ನೀಡುವುದರ ಮೂಲಕ ಚಿಕಿತ್ಸೆಯನ್ನು ಮುಂದುವರಿಸಲು ಆಪ್ತ ಸಮಾಲೋಚನೆ ಮಾಡುವುದು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಲ್ಲಿ, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಹಾಜರಾಗಿ ಟಿಬಿ ಬಗ್ಗೆ ಜಾಗೃತಿ ಮೂಡಿಸುವುದು, ಟಿಬಿ ಬಗ್ಗೆ ಇರುವಂತಹ ಕಳಂಕ, ತಾರತಮ್ಯವನ್ನು ಹೋಗಲಾಡಿಸಿ ಕ್ಷಯ ಮುಕ್ತ ಭಾರತವನ್ನು ಮಾಡಲು ಕೈಜೋಡಿಸುವುದು, ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಮಾಡುವಂತೆ ಮನವರಿಕೆ ಮಾಡುವುದು. ರೋಗಿಯನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಮನವೊಲಿಸುವುದು, ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ಷಯ ರೋಗಿಗಳನ್ನು ದತ್ತು ಪಡೆದು ಫುಡ್ ಕಿಟ್ ವಿತರಣೆ ಮಾಡಲು ಸಾರ್ವಜನಿಕರಲ್ಲಿ ಮನವರಿಕೆ ಮಾಡುವುದು ಕ್ಷಯ‌ ಚಾಂಪಿಯನ್ ಗಳ ಪ್ರಮುಖ ಕರ್ತವ್ಯ ಹಾಗೂ ಉದ್ದೇಶವಾಗಿರುತ್ತದೆ ಎಂದು ತಿಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ ಡಾ.ಶಾರದಾ ಸೇರಿದಂತೆ ಜಿಲ್ಲಾ ಕ್ಷಯ ರೋಗ ನಿರಂತರ ಅಧಿಕಾರಿಗಳು, ಕಚೇರಿಯ ಸಿಬ್ಬಂದಿ ಸೇರಿದಂತೆ ಇತರರು ಭಾಗವಹಿಸಿದ್ದರು.‌

Ramesh Babu

Journalist

Recent Posts

ರಸ್ತೆಯಲ್ಲಿ ಅಡ್ಡಾದಿಡ್ಡಿ ಲಾರಿ ಚಾಲನೆ: ವಾಹನ ಸವಾರರಿಗೆ ಕಿರಿಕಿರಿ: ಲಾರಿ ತಡೆದು ಚಾಲಕನಿಗೆ ತರಾಟಗೆ ತೆಗೆದುಕೊಂಡ ಸಾರ್ವಜನಿಕರು

ಲಾರಿಯನ್ನು ಅಡ್ಡಾದಿಡ್ಡಿಯಾಗಿ ಚಾಲಾಯಿಸಿಕೊಂಡು ಬಂದ ಚಾಲಕನು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದು ಕಿರಿಕಿರಿ ಉಂಟು ಮಾಡಿರುವ ಘಟನೆ…

4 hours ago

ಅಸಂಘಟಿತ ಕಾರ್ಮಿಕರ ಮಂಡಳಿಗೆ ಪೆಟ್ರೋಲ್, ಡೀಸೆಲ್ ಸೆಸ್ ನಲ್ಲಿ ಪಾಲು- ಕಾರ್ಮಿಕ ಸಚಿವ ಸಂತೋಷ್ ಲಾಡ್

ಕಾರವಾರ:- ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತೆ ಯೋಜನೆಗಳನ್ನು ಒದಗಿಸಲು ರಾಜ್ಯದಲ್ಲಿನ ಡೀಸೆಲ್ ಪೆಟ್ರೋಲ್ ಮೇಲೆ ವಿಧಿಸುತ್ತಿರುವ…

5 hours ago

“ಬದುಕಿನ ಬೆಳದಿಂಗಳು”

ಬದುಕಿನ ಬೆಳದಿಂಗಳಲ್ಲಿ ನಮ್ಮ ಹುರುಪು, ಹುಕುಂಗಳು ಹಾಗೂ ಹಲವು ವಿಭಿನ್ನತೆಗಳ ವಿಚಾರಾರ್ಥಗಳು ನೆನೆಗುದಿಗೆ ಬಿದ್ದಿದ್ದುಂಟು. ಹಾಗೆಯೇ ಸದ್ಗುಣ-ದುರ್ಗುಣಗಳ ವ್ಯತ್ಯಾಸವನು ಅರಿತು…

6 hours ago

ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು

ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 3 ಗಂಟೆಯಲಿ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ…

6 hours ago

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ…

8 hours ago

ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ರೈತರಲ್ಲಿ ಮನವಿ

ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತೋಟಗಾರಿಕೆ…

8 hours ago