Categories: ಕೋಲಾರ

ಕೋಲಾರ ಜನತಾ ದರ್ಶನ: ಸಂಸದ, ಸಚಿವ, ಶಾಸಕರ‌ ಗಲಾಟೆ: ಸಾರ್ವಜನಿಕರ ಅಹವಾಲು ಸ್ವೀಕರಿಸಲು ವಿಳಂಬ: ಜನಪ್ರತಿನಿಧಿಗಳ ಕಿತ್ತಾಟ ನೋಡುತ್ತಾ ಕುಳಿತ ಸಾರ್ವಜನಿಕರು

ಕೋಲಾರ ನಗರದ ರಂಗಮಂದಿರದಲ್ಲಿ ನಡೆಯುತ್ತಿದ್ದ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್ ಹಾಗೂ ಸಂಸದ ಮುನಿಸ್ವಾಮಿ ಅವರ ನಡುವೆ ಮಾತಿನ‌ ಚಕಮಕಿ ನಡೆಯಿತು.

ಈ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರು ಸಂಸದ ಮುನಿಸ್ವಾಮಿ ಅರವನ್ನು ಕಾರ್ಯಕ್ರಮದ ವೇದಿಕೆಯಿಂದ ಬಲವಂತವಾಗಿ ಹೊರ ಕರೆದುಕೊಂಡು ಬಂದರು.

ಶ್ರೀನಿವಾಸಪುರ ರೈತರ ಪರವಾಗಿ ಮನವಿ ಸಲ್ಲಿಸಲು ಸಂಸದ ಮುನಿಸ್ವಾಮಿ ಅವರು ವೇದಿಕೆಗೆ ಆಗಮಿಸ ಸಚಿವರಾದ ನೀವು ನಿಮ್ಮ ಪಕ್ಕದಲ್ಲಿ ಭೂಗಳ್ಳರನ್ನು ಕುರಿಸಿಕೊಂಡು ಸಭೆ ಮಾಡಿದರೆ ಏನರ್ಥ ಎಂದು ಸಚಿವ ಬೈರತಿ ಸುರೇಶ್ ಅವರನ್ನು ಸಂಸದ ಮುನಿಸ್ವಾಮಿ ಪ್ರಶ್ನೆ ಮಾಡಿದರು. ಇದರಿಂದ ಕೆರಳಿದ ಶಾಸಕ ಎಸ್.ಎನ್.ನಾರಾಯಸ್ವಾಮಿ ಭೂಗಳ್ಳ ನಾನಲ್ಲ, ನೀವು ಈ ಮಾತನ್ನು ವಾಪಸ್ ತೆಗೆದುಕೊ ಎಂದು ಏಕವಚನದಲ್ಲಿ ಎಚ್ಚರಿಕೆಯನ್ನ ಮುನಿಸ್ವಾಮಿ ಅವರಿಗೆ ನೀಡಿದರು.

ಗಲಭೆಯಿಂದ ಕೆರಳಿದ ಎಸ್ಪಿ ನಾರಾಯಣ್  ಅವರು ಸಂಸದ ಎಸ್  ಮುನಿಸ್ವಾಮಿಯವರನ್ನ ವೇದಿಕೆಯಿಂದ ಕೆಳಗಿಳಿಸಿ ಹೊರ ಕೆರದುಕೊಂಡು‌ ಬಂದರು.

ಅಹವಾಲು ಸಲ್ಲಿಸಲು ಪಟ್ಟು ಬಿಡದೆ ಮತ್ತೆ ಪೊಲೀಸರೊಂದಿಗೆ ಗಲಾಟೆ ಮಾಡಿಕೊಂಡು ಮುನಿಸ್ವಾಮಿ ಅವರು ಮತ್ತೆ ವೇದಿಕೆಗೆ ಹತ್ತಿದರು.

ಜನಪ್ರತಿನಿಧಿಗಳ ಕಿತ್ತಾಟವನ್ನ ನೋಡುತ್ತಾ ಕುಳಿತ ಸಾರ್ವಜನಿಕರು.

Ramesh Babu

Journalist

Recent Posts

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

1 hour ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

4 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

5 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

16 hours ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

16 hours ago

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಕೋಲಾರ ಇವರ ಸಹಯೋಗದಲ್ಲಿ ರೇಮಂಡ್ ಕಂಪನಿ ಸಮೂಹದ ಸಿಲ್ವರ್ ಸ್ಪಾರ್ಕ್…

16 hours ago