ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲೂ ಅಧಿಕಾರಕ್ಕೆ ಬರುತ್ತೆವೆ. ಅಧಿಕಾರಕ್ಕೆ ಬಂದ ತಕ್ಷಣ ರಸ ಗೊಬ್ಬರದ ಬೆಲೆ ಕಡಿಮೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದ ಕಾರ್ಯಕರ್ತರು, ಮುಖಂಡರಿಗೆ ಆಯೋಜಿಸಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಈ ಬಾರಿ ಮೋದಿ ಅವರು ಸೋಲುತ್ತಾರೆ ಎಂದು ಭವಿಷ್ಯ ನುಡಿದರು.
ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಕ್ಷಣ ಗೊಬ್ಬರದ ಬೆಲೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಭರವಸೆ ಮಾತುಗಳ್ನಾಡಿದರು.
ರಾಜ್ಯ ಬಿಜೆಪಿಯಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ
ರಾಜ್ಯದ ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಬಿಜೆಪಿಯ ದುರಾಡಳಿತದಿಂದ ಜನ ಬದಲಾವಣೆ ಬಯಸಿದ್ದರು. ಆದ್ದರಿಂದ ಜಿಜೆಪಿಯನ್ನ ಸೋಲಿಸಿ ಕಾಂಗ್ರೆಸ್ ನ್ನ ಗೆಲ್ಲಿಸಿದ್ದಕ್ಕೆ ಧನ್ಯವಾದ ಎಂದರು.
ಇದು ನನ್ನ ಕೊನೆ ಚುನಾವಣೆ
ಮತ್ತೆ ನಾನು ಚುನಾವಣೆಗೆ ನಿಲ್ಲೋದಿಲ್ಲ, ವೇದಿಕೆ ಭಾಷಣದ ವೇಳೆ ಚುನಾವಣೆ ನಿವೃತ್ತಿ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ.
ನುಡಿದಂತೆ ನಡೆದಿದ್ದೇನೆ: ಕೊಟ್ಟ ಭರವಸೆ ಈಡೇರಿಸಿದ್ದೇನೆ
ಈ ಹಿಂದೆ 160 ಭರವಸೆಗಳನ್ನ ನೀಡಿದ್ದೆ, ಅದರಲ್ಲಿ 158 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ. ಆದರೆ ಬಿಜೆಪಿಯವರು ವಚನ ಭ್ರಷ್ಟರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ದೇವರಾಜು ಅರಸ್ 5 ವರ್ಷ ಸಂಪೂರ್ಣ ಆಡಳಿತ ನೀಡಿದ್ದರು. ಅವರ ಬಳಿಕ ಈ ನಿಮ್ಮ ಸಿದ್ದರಾಮಯ್ಯ ಮಾತ್ರ 5 ವರ್ಷ ಆಡಳಿತ ಮಾಡುತ್ತಿರುವುದು.
ನಾವು ಅಧಿಕಾರಕ್ಕೆ ಬಂದು 20 ದಿನ ಆಗಿದೆ. ಈ 20 ದಿನಗಳ 2 ಕ್ಯಾಬಿನೆಟ್ ಸಭೆ ನಡೆಸಿ 5 ಗ್ಯಾರಂಟಿ ಈಡೇರಿಸಲು ತೀರ್ಮಾನ ಮಾಡಿದ್ದೇವೆ.
ಒಂದು ವರ್ಷದ ಆವ್ರೇಜ್ ನೋಡಿ ಯಾರು ಎಷ್ಟು ಬಳಸುತ್ತಾರೆ ಅವರಿಗೆ ಉಚಿತ ವಿದ್ಯುತ್ ನೀಡ್ತಿದ್ದೀವಿ.
1 ಕೋಟಿ 28 ಲಕ್ಷ ಕುಟುಂಬದ ಮನೆ ಯಜಮಾನಿಗೆ 2 ಸಾವಿರ ಕೊಡುತ್ತೇವೆ. ಅತ್ತೆ ಯಜಮಾನಿ ಅಂದರೆ ಅತ್ತೆಗೆ, ಸೊಸೆ ಯಜಮಾನಿ ಅಂದರೆ ಸೊಸೆಗೆ ಹಣ ನೀಡುತ್ತೇವೆ. ಆದರೆ ಟ್ಯಾಕ್ಸ್ ಕಟ್ಟುವವರಿಗೆ ಹಣ ನೀಡಲ್ಲ. ಮಕ್ಕಳು ಟ್ಯಾಕ್ಸ್ ಕಟ್ತಿದ್ರೆ ಅದು ಲೆಕ್ಕಕ್ಕಿಲ್ಲ ಎಂದರು.
1ಕೋಟಿ 28 ಲಕ್ಷ ಯಜಮಾನರಿಗೆ ಅರ್ಜಿ ಕರೆದಿದ್ದೇವೆ. ಆಗಸ್ಟ್ ನಿಂದ ಅವರ ಖಾತೆಗೆ ಹಣ ಹಾಕುತ್ತೇವೆ. ಅಕ್ಕಿ ಸ್ಟಾಕ್ ಇಲ್ಲದ ಕಾರಣ ಜುಲೈನಿಂದ 10ಕೆಜಿ ಅಕ್ಕಿಯನ್ನ ವಿತರಣೆ ಮಾಡುತ್ತೇವೆ ಎಂದರು
ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ…
ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…
ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…
ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…